For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟರ್ ದಿನೇಶ್ ಕಾರ್ತಿಕ್‌ಗೆ ಶೋಕಾಸ್ ನೋಟಿಸ್ ನೀಡಿದ ಬಿಸಿಸಿಐ!

ದಿನೇಶ್ ಕಾರ್ತಿಕ್ ಗೆ ನೋಟೀಸ್ ನೀಡಿದ BCCI..! | Dinesh Karthik | Oneindia Kannada
BCCI issues showcause notice to Dinesh Karthik for attending CPL match

ನವದೆಹಲಿ, ಸೆಪ್ಟೆಂಬರ್ 7: ಟೀಮ್ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‌ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಶೋಕಾಸ್ ನೋಟಿಸ್ ನೀಡಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್‌)ನ ತಂಡವಾದ ಟ್ರಿನ್‌ಬಾಗೊ ನೈಟ್ ರೈಡರ್ಸ್ (ಟಿಕೆಆರ್) ಪ್ರಚಾರ ಕಾರ್ಯಕ್ರಮದಲ್ಲಿ ಡಿಕೆ ಪಾಲ್ಗೊಂಡಿದ್ದಕ್ಕಾಗಿ ನೋಟಿಸ್ ನೀಡಲಾಗಿದೆ.

34ರ ಹರೆಯದ ದಿನೇಶ್ ಕಾರ್ತಿಕ್ ಟ್ರಿನ್‌ಬಾಗೊ ನೈಟ್ ರೈಡರ್ಸ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಪೋರ್ಟ್ ಆಫ್‌ ಸ್ಪೇನ್‌ನಲ್ಲಿ ನಡೆದ ಸೇಂಟ್ ಕಿಟ್ಸ್ ಮತ್ತು ನೆವಿಸ್ ನಡುವಣ ಸಿಪಿಎಲ್ ಉದ್ಘಾಟನಾ ಪಂದ್ಯದ ವೇಳೆಯೂ ಡಿಕೆ ಉಪಸ್ಥಿತರಿದ್ದರು. ಇದು ಬಿಸಿಸಿಐ ಕೋಪಕ್ಕೆ ಕಾರಣವಾಗಿದೆ.

'ಹೌದು, ದಿನೇಶ್ ಕಾರ್ತಿಕ್‌ಗೆ ಬಿಸಿಸಿಐನಿಂದ ಶೋಕಾಸ್ ನೋಟಿಸ್ ನೀಡಲಾಗಿದೆ. ಟ್ರಿನ್‌ಬಾಗೊ ನೈಟ್‌ ರೈಡರ್ಸ್ ಡ್ರೆಸ್ಸಿಂಗ್ ರೂಮ್‌ನಲ್ಲಿ ದಿನೇಶ್ ಕಾರ್ತಿಕ್ ಇರುವ ಫೋಟೋ ನಮಗೆ ತಲುಪಿದೆ. ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ, ದಿನೇಶ್ ಕಾರ್ತಿಕ್‌ಗೆ ನೋಟಿಸ್ ನೀಡಿ, ಆತನೊಂದಿಗಿನ ಬಿಸಿಸಿಐ ಒಪ್ಪಂದ ಯಾಕೆ ಇನ್ನೂ ಕೊನೆಗೊಳಿಸಲಾಗಿಲ್ಲ ಅನ್ನೋದನ್ನು ಆತನಿಗೆ ವಿವರಿಸಲು ತಿಳಿಸಿದ್ದಾರೆ,' ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.

ಭಾರತ ಪರ 26 ಟೆಸ್ಟ್‌, 94 ಏಕದಿನ ಮತ್ತು 32 ಟಿ20 ಪಂದ್ಯಗಳನ್ನು ಆಡಿರುವ ದಿನೇಶ್ ಕಾರ್ತಿಕ್, ಟ್ರಿನ್‌ಬಾಗೊ ನೈಟ್ ರೈಡರ್ಸ್ ಜೆರ್ಸಿ ಧರಿಸಿದ್ದರಲ್ಲದೆ, ಅದೇ ಟೀಮಿನ ಡ್ರೆಸ್ಸಿಂಗ್ ರೂಮ್‌ನಲ್ಲಿ ವಿಶ್ರಮಿಸುತ್ತಿದ್ದ ಫೋಟೋ ಬಿಸಿಸಿಐ ಕಣ್ಣಿಗೆ ಬಿದ್ದಿತ್ತು. ಡಿಕೆ ಜೊತೆ ಬ್ರೆಂಡನ್ ಮೆಕಲಮ್ ಕೂಡ ಇದ್ದರು. ಅಂದ್ಹಾಗೆ ಡಿಕೆ ಐಪಿಎಲ್‌ನಲ್ಲಿ ಆಡುವ ಕೆಕೆಆರ್ ಮತ್ತು ಟಿಕೆಆರ್ ಎರಡಕ್ಕೂ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಮಾಲಕತ್ವ ಹೊಂದಿದ್ದಾರೆ.

Story first published: Saturday, September 7, 2019, 0:39 [IST]
Other articles published on Sep 7, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+