ಡೋಪಿಂಗ್ ವಿವಾದ: ದುಲೀಪ್ ಟ್ರೋಫಿ ತಂಡದಲ್ಲಿ ಬದಲಾವಣೆ
ನವದೆಹಲಿ, ಜುಲೈ 24: ಡೋಪಿಂಗ್ ನಿಯಮ ಉಲ್ಲಂಘನೆ ಆರೋಪದಡಿ ನಿಷೇಧಕ್ಕೆ ಒಳಗಾಗಿರುವ ಪಂಜಾಬ್‌ನ ವಿಕೆಟ್ ಕೀಪರ್ ಅಭಿಷೇಕ್ ಗುಪ್ತಾರನ್ನು ದುಲೀಪ್ ಟ್ರೋಫಿಗೆ ಆಯ್ಕೆ ಮಾಡಿದ್ದ ಬಿಸಿಸಿಐ, ವಿವಾದ ಸೃಷ್ಟಿಯಾಗುತ್ತಿದ್ದಂತೆಯೇ ತಂಡದಲ್ಲಿ ಬದಲಾವಣೆ ಮಾಡಿದೆ.
ಇಂಡಿಯಾ ರೆಡ್ ತಂಡದಲ್ಲಿ ಅಭಿಷೇಕ್ ಗುಪ್ತಾ ಸ್ಥಾನಕ್ಕೆ ಅಕ್ಷಯ್ ವಾಡ್ಕರ್ ಅವರಿಗೆ ಅವಕಾಶ ನೀಡಲಾಗಿದೆ. ದುಲೀಪ್ ಟ್ರೋಫಿಯು ಆಗಸ್ಟ್ 17 ರಿಂದ ಸೆಪ್ಟೆಂಬರ್ 8ರವರೆಗೆ ನಡೆಯಲಿದೆ.
ನಿಷೇಧಿತ ಮದ್ದು ಸೇವನೆ ಆರೋಪದಡಿ ಎಂಟು ತಿಂಗಳ ನಿಷೇಧಕ್ಕೆ ಒಳಗಾಗಿರುವ ಗುಪ್ತಾ ಅವರ ಮೇಲಿನ ನಿಷೇಧ ಸೆಪ್ಟೆಂಬರ್ 14ರಂದು ತೆರವಾಗಲಿದೆ.
27 ವರ್ಷದ ಆಟಗಾರ ಗುಪ್ತಾ ಅವರನ್ನು ಜನವರಿ 15ರಂದು ಕ್ರಿಕೆಟ್‌ನಿಂದ ನಿಷೇಧಿಸಲಾಗಿತ್ತು. ಕೆಮ್ಮಿನ ಔಷಧಿಯೊಂದಿಗೆ ಸಾಮಾನ್ಯವಾಗಿ ಇರುವ ನಿಷೇಧಿತ ಮದ್ದನ್ನು ಗುಪ್ತಾ ಸೇವನೆ ಮಾಡಿದ್ದು ಪತ್ತೆಯಾಗಿತ್ತು.
ನಿಷೇಧ ಹೇರಲಾಗಿದ್ದರೂ ಅವರನ್ನು ದುಲೀಪ್ ಟ್ರೋಫಿಗೆ ಆಯ್ಕೆ ಮಾಡಿದ್ದು ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕಟುವಾದ ಟೀಕೆ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಬಿಸಿಸಿಐ ಕೂಡಲೇ ತಂಡದಲ್ಲಿ ಬದಲಾವಣೆ ಮಾಡಿದೆ.
ದುಲೀಪ್ ಟ್ರೋಫಿಯ ತಂಡಗಳು ಹೀಗಿವೆ.

ಇಂಡಿಯಾ ಬ್ಲೂ ತಂಡ
ಫೈಜ್ ಫಜಲ್ (ನಾಯಕ), ಅಭಿಷೇಕ್ ರಾಮನ್, ಅನ್ಮೋಲ್ ಪ್ರೀತ್ ಸಿಂಗ್, ಗಣೇಶ್ ಸತೀಶ್, ಎನ್. ಗಂಗ್ಟಾ, ಧ್ರುವ್ ಶೋರಿ, ಕೆ.ಎಸ್. ಭರತ್ (ವಿಕೆಟ್ ಕೀಪರ್), ಅಕ್ಷಯ್ ವಖಾರೆ, ಸೌರವ್ ಕುಮಾರ್, ಸ್ವಪ್ನಿಲ್ ಸಿಂಗ್, ಬಸಿಲ್ ಥಂಪಿ, ಬಿ. ಅಯ್ಯಪ್ಪ, ಜಯದೇವ್ ಉನದ್ಕತ್, ಧವಳ್ ಕುಲಕರ್ಣಿ
ಕೆಪಿಎಲ್ 2018: ಯಾರ್ಯಾರು ಯಾವ ತಂಡಕ್ಕೆ? ಮುಖ್ಯಾಂಶಗಳು ಇಲ್ಲಿವೆ

ಇಂಡಿಯಾ ರೆಡ್ ತಂಡ
ಅಭಿನವ್ ಮುಕುಂದ್ (ನಾಯಕ), ಆರ್.ಆರ್. ಸಂಜಯ್, ಅಶುತೋಷ್ ಸಿಂಗ್, ಬಾಬಾ ಅಪರಾಜಿತ್, ವೃತ್ತಿಕ್ ಚಟರ್ಜಿ, ಬಿ. ಸಂದೀಪ್, ಅಕ್ಷಯ್ ವಾಡ್ಕರ್ (ವಿಕೆಟ್ ಕೀಪರ್), ಎಸ್. ನದೀಮ್, ಮಿಹಿರ್ ಹೀರ್ವಾನಿ, ಪರ್ವೇಜ್ ರಸೂಲ್, ಆರ್. ಗುರ್ಬಾನಿ, ಎ. ಮಿಥುನ್, ಇಶಾನ್ ಪೊರೆಲ್, ಪೃಥ್ವಿ ರಾಜ್.

ಇಂಡಿಯಾ ಗ್ರೀನ್ ತಂಡ
ಪಾರ್ಥಿವ್ ಪಟೇಲ್ (ನಾಯಕ, ವಿಕೆಟ್ ಕೀಪರ್), ಪ್ರಶಾಂತ್ ಚೋಪ್ರಾ, ಪ್ರಿಯಾಂಕ್ ಪಾಂಚಾಲ್, ಸುದೀಪ್ ಚಟರ್ಜಿ, ಗುರುಕೀರತ್ ಮನ್, ಬಾಬಾ ಇಂದ್ರಜಿತ್, ವಿ.ಪಿ. ಸೋಲಂಕಿ, ಜಲಜ್ ಸಕ್ಸೇನಾ, ಕರಣ್ ಶರ್ಮಾ, ವಿಕಾಸ್ ಮಿಶ್ರಾ, ಕೆ. ವಿಘ್ನೇಶ್, ಅಂಕಿತ್ ರಜಪೂತ್, ಅಶೋಕ್ ದಿಂಡಾ, ಅತಿಥ್ ಶೇಠ್.
ಪ್ರಮುಖ ಆಟಗಾರರ ಕಡೆಗಣನೆ?
ದುಲೀಪ್ ಟ್ರೋಫಿಗೆ ಹೆಚ್ಚಿನ ಯುವ ಆಟಗಾರರಿಗೆ ಪ್ರಾಶಸ್ತ್ಯ ನೀಡಲಾಗಿದೆ. ಆದರೆ, ಹಿರಿಯ ಆಟಗಾರರನ್ನು ಕಡೆಗಣಿಸಲಾಗಿದೆ.
ಫಾರ್ಮ್ ಪಡೆದುಕೊಳ್ಳಲು ಹೆಣಗಾಡುತ್ತಿರುವ ಗೌತಮ್ ಗಂಭೀರ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಅವರಿಗೆ ಅವಕಾಶ ನೀಡಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ತೋರಿಸಿರುವ ಸಂಜು ಸ್ಯಾಮ್ಸನ್, ಮನೋಜ್ ತಿವಾರಿ ಕೂಡ ತಂಡಕ್ಕೆ ಆಯ್ಕೆಯಾಗಿಲ್ಲ. ಯೋ ಯೋ ಫಿಟ್ನೆಸ್ ಟೆಸ್ಟ್‌ನಲ್ಲಿ ಅನುತ್ತೀರ್ಣರಾಗಿದ್ದ ಅಂಬಾಟಿ ರಾಯುಡು ಅವರನ್ನು ಕೂಡ ಪರಿಗಣಿಸಿಲ್ಲ.

ಕರ್ನಾಟಕದ ಆಟಗಾರರಿಗೆ ಕೆಪಿಎಲ್
ಅಭಿಮನ್ಯು ಮಿಥುನ್ ಹೊರತುಪಡಿಸಿ ಕರ್ನಾಟಕದ ಯಾವ ಆಟಗಾರನೂ ದುಲೀಪ್ ಟ್ರೋಫಿಯ ಮೂರು ತಂಡಗಳಲ್ಲಿ ಸ್ಥಾನ ಪಡೆದಿಲ್ಲ. ಕರ್ನಾಟಕದವರಾದ ಗಣೇಶ್ ಸತೀಶ್ ಇಂಡಿಯಾ ಬ್ಲೂ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಅವರು ರಣಜಿಯಲ್ಲಿ ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಆಗಸ್ಟ್ 15ರಿಂದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಆರಂಭವಾಗಲಿದ್ದು, ಅದೇ ಸಮಯಕ್ಕೆ ದುಲೀಪ್ ಟ್ರೋಫಿ ಪಂದ್ಯಗಳು ಸಹ ನಡೆಯುವುದರಿಂದ ಕರ್ನಾಟಕದ ಆಟಗಾರರನ್ನು ಆಯ್ಕೆ ಮಾಡಿಲ್ಲ.
ಆದರೆ ಕೆಪಿಎಲ್ ಹರಾಜಿನಲ್ಲಿ ದಾಖಲೆಯ 8.30 ಲಕ್ಷ ಮೊತ್ತಕ್ಕೆ ಶಿವಮೊಗ್ಗ ಲಯನ್ಸ್ ಪಾಲಾಗಿದ್ದ ಅಭಿಮನ್ಯು ಮಿಥುನ್, ಕೆಪಿಎಲ್‌ನ ಪಂದ್ಯಗಳಲ್ಲಿ ಆಡುವುದು ಅನುಮಾನ. ಅವರು ಇಂಡಿಯಾ ರೆಡ್ ತಂಡದ ಪರ ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications