ದಕ್ಷಿಣ ಆಫ್ರಿಕಾ ಸರಣಿಗೆ ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟ
ಬೆಂಗಳೂರು, ಸೆ. 11: ಮಹಾತ್ಮಾ ಗಾಂಧಿ ಹಾಗೂ ನೆಲ್ಸನ್ ಮಂಡೇಲ ಸ್ಮರಣಾರ್ಥ ನಡೆಯಲಿರುವ 'ಫ್ರೀಡಂ ಟ್ರೋಫಿ' ಗಾಗಿ ದಕ್ಷಿಣ ಆಫ್ರಿಕಾ ತಂಡ ಪ್ರಕಟವಾದ ಬೆನ್ನಲ್ಲೇ ಭಾರತ ತಂಡದ 30 ಮಂದಿ ಸಂಭಾವ್ಯ ಆಟಗಾರರ ತಂಡ ಪ್ರಕಟವಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ಪ್ರಕಟಿಸಿರುವ 30 ಮಂದಿಗಳ ತಂಡಕ್ಕೆ ಗೌತಮ್ ಗಂಭೀರ್ , ಯುವರಾಜ್ ಸಿಂಗ್, ವೀರೇಂದರ್ ಸೆಹ್ವಾಗ್ ಹಾಗೂ ರಾಬಿನ್ ಉತ್ತಪ್ಪ ಅವರ ಹೆಸರನ್ನು ಪರಿಗಣಿಸಿಲ್ಲ. ವೇಗಿ ಮಹಮ್ಮದ್ ಶಮಿ, ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಇನ್ನೂ ಗಾಯದ ಸಮಸ್ಯೆಯಿಂದ ಗುಣಮುಖರಾಗಿಲ್ಲದ್ದರೂ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ತಂಡವು ಭಾರತ ಪ್ರವಾಸದ ವೇಳೆ 3 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು, 5 ಏಕದಿನ ಪಂದ್ಯಗಳು ಹಾಗೂ 4 ಟೆಸ್ಟ್ ಕ್ರಿಕೆಟ್ ಗಳನ್ನು ಆಡಲಿದೆ. ಸೆಪ್ಟೆಂಬರ್ 29ರಂದು ದೆಹಲಿಯಲ್ಲಿ ಟಿ20 ಅಭ್ಯಾಸ ಪಂದ್ಯದೊಂದಿಗೆ ದಕ್ಷಿಣ ಆಫ್ರಿಕಾದ ಪ್ರವಾಸ ಅರಂಭಗೊಳ್ಳಲಿದೆ. [ಭಾರತ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾದ 'ಮೂರು' ತಂಡ ಪ್ರಕಟ]

30 ಮಂದಿ ಸಂಭಾವ್ಯ ತಂಡದಲ್ಲಿ 12 ಜನ ಬ್ಯಾಟ್ಸ್ ಮನ್, 3 ವಿಕೆಟ್ ಕೀಪರ್ . ಒಬ್ಬ ಆಲ್ ರೌಂಡರ್, 14 ಜನ ಬೌಲರ್ (8 ಜನ ವೇಗಿಗಳು ಹಾಗೂ 6 ಜನ ಸ್ಪಿನ್ನರ್ಸ್) ಇದ್ದಾರೆ. ಕರ್ನಾಟಕದ ಕೆಎಲ್ ರಾಹುಲ್, ಸ್ಟುವರ್ಟ್ ಬಿನ್ನಿ, ಕರುಣ್ ನಾಯರ್, ಮನೀಶ್ ಪಾಂಡೆ ಆಯ್ಕೆಯಾಗಿದ್ದಾರೆ. ಸೆ.21ರಿಂದ ಬೆಂಗಳೂರಿನಲ್ಲಿ ತರಬೇತಿ ಆರಂಭವಾಗಲಿದೆ.
ತಂಡ ಇಂತಿದೆ: ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಶಿಖರ್ ಧವನ್, ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಸ್ಟುವರ್ಟ್ ಬಿನ್ನಿ, ವೃದ್ಧಿಮಾನ್ ಸಹಾ, ನಮನ್ ಓಜಾ, ಆರ್ ಅಶ್ವಿನ್, ಅಮಿತ್ ಮಿಶ್ರಾ, ಹರ್ಭಜನ್ ಸಿಂಗ್, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ವರುಣ್ ಅರೋನ್, ಕರುಣ್ ನಾಯರ್, ಸುರೇಶ್ ರೈನಾ, ಮಹಮ್ಮದ್ ಶಮಿ, ಅಕ್ಷರ್ ಪಟೇಲ್, ಪ್ರಗ್ನಾನ್ ಓಜಾ, ರವೀಂದ್ರ ಜಡೇಜ, ಮೋಹಿತ್ ಶರ್ಮ, ಕರಣ್ ಶರ್ಮ, ಅಂಬಟಿ ರಾಯುಡು, ಧವಳ್ ಕುಲಕರ್ಣಿ, ಕೇಧಾರ್ ಜಾಧವ್, ಮನೀಶ್ ಪಾಂಡೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications