ಭಾರತ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾದ 'ಮೂರು' ತಂಡ ಪ್ರಕಟ
ಜೋಹಾನ್ಸ್ ಬರ್ಗ್, ಸೆ. 10: ಮಹಾತ್ಮಾ ಗಾಂಧಿ ಹಾಗೂ ನೆಲ್ಸನ್ ಮಂಡೇಲ ಸ್ಮರಣಾರ್ಥ ನಡೆಯಲಿರುವ 'ಫ್ರೀಡಂ ಟ್ರೋಫಿ' ಗಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ. ಭಾರತ ವಿರುದ್ಧದ ಆಡಲಿರುವ ಹರಿಣಗಳ ಟೆಸ್ಟ್ ತಂಡದಲ್ಲಿ ಮೂವರು ಸ್ಪಿನ್ನರ್ ಗಳನ್ನು ಸೇರಿಸಿಕೊಂಡಿರುವುದು ವಿಶೇಷ.
ಲೆಗ್ ಸ್ಪಿನ್ನರ್ ಇಮ್ರಾನ್ ತಾಹೀರ್, ಆಫ್ ಸ್ಪಿನ್ನರ್ ಗಳಾದ ಡ್ಯಾನ್ ಪಿಡ್ತ್, ಸೈಮನ್ ಹರ್ಮಾರ್ ಅವರು ಹಶೀಂ ಆಮ್ಲಾ ನೇತೃತ್ವದ ಟೆಸ್ಟ್ ತಂಡದ 15 ಜನ ಸದಸ್ಯರಲ್ಲಿ ಸೇರಿದ್ದಾರೆ. [ಬೆಂಗಳೂರಲ್ಲಿ ಎಬಿ ಡಿವಿಲೆಯರ್ಸ್ ಸ್ಪೆಷಲ್ '100']
ದಕ್ಷಿಣ ಆಫ್ರಿಕಾ ತಂಡವು ಭಾರತ ಪ್ರವಾಸದ ವೇಳೆ 3 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು, 5 ಏಕದಿನ ಪಂದ್ಯಗಳು ಹಾಗೂ 4 ಟೆಸ್ಟ್ ಕ್ರಿಕೆಟ್ ಗಳನ್ನು ಆಡಲಿದೆ. ಸೆಪ್ಟೆಂಬರ್ 29ರಂದು ದೆಹಲಿಯಲ್ಲಿ ಟಿ20 ಅಭ್ಯಾಸ ಪಂದ್ಯದೊಂದಿಗೆ ದಕ್ಷಿಣ ಆಫ್ರಿಕಾದ ಪ್ರವಾಸ ಅರಂಭಗೊಳ್ಳಲಿದೆ. [ಹರಿಣಗಳ ಮೇಲೆ ಹರಿಹಾಯ್ದ ಬಾಂಗ್ಲಾ ಹುಲಿಗಳು]
ಟೆಸ್ಟ್ ತಂಡಕ್ಕೆ ಹಶೀಂ ಆಮ್ಲಾ ನಾಯಕರಾಗಿದ್ದರೆ, ಏಕದಿನ ತಂಡಕ್ಕೆ ಎಬಿ ಡಿವಿಲೆಯರ್ಸ್ ಹಾಗೂ ಟಿ20 ಅಂತಾರಾಷ್ಟ್ರೀಯ ತಂಡಕ್ಕೆ ಫಾಫ್ ಡುಪ್ಲೆಸಿಸ್ ಅವರು ನಾಯಕರಾಗಿದ್ದಾರೆ.
ರಿಲೆ ರೋಸೋ ಗಾಯಗೊಂಡಿರುವುದರಿಂದ ಟಿ20 ತಂಡಕ್ಕೆ ಸೇರಿಸಿಕೊಂಡಿಲ್ಲ, ಏಕದಿನ ಸರಣಿ ವೇಳೆಗೆ ಸಂಪೂರ್ಣ ಗುಣಮುಖರಾಗುವ ಭರವಸೆ ಇದೆ. ರೋಸೋ ಬದಲಿಗೆ ಖಾಯಾ ಜೋಂಡೊ ಆಡಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹೇಳಿದೆ. ಭಾರತ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ತಂಡಗಳು ಹಾಗೂ ಸಂಪೂರ್ಣ ವೇಳಾಪಟ್ಟಿ ಇಲ್ಲಿವೆ...

ಭಾರತ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ
ಹಶೀಂ ಅಮ್ಲಾ (ನಾಯಕ), ಎಬಿ ಡಿವಿಲೆಯರ್ಸ್ (ಉಪ ನಾಯಕ), ತೆಂಬಾ ಬವುಮಾ, ಜೆಪಿ ಡುಮಿನಿ, ಫಾಫ್ ಡು ಪ್ಲೆಸಿಸ್, ಡೀನ್ ಎಲ್ಗಾರ್, ಸಿಮಾನ್ ಹರ್ಮಾರ್, ಇಮ್ರಾನ್ ತಾಹೀರ್, ಮಾರ್ನೆ ಮಾರ್ಕೆಲ್, ವೆರ್ನಾನ್ ಫಿಲ್ಯಾಂಡರ್, ಡ್ಯಾನ್ ಪಿಡ್ತ್, ಕಾಗಿಸೋ ರಬಾಡ, ಡೇಲ್ ಸ್ಟೈನ್, ಸ್ಟಿಯಾನ್ ವಾನ್ ಜಿಲ್, ಡೇನ್ ವಿಲಾಸ್ (ವಿಕೆಟ್ ಕೀಪರ್)

ಭಾರತ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ಏಕದಿನ ತಂಡ
ಎಬಿ ಡಿ ವಿಲೆಯರ್ಸ್ (ನಾಯಕ), ಕೈಲಿ ಅಬಾಟ್, ಹಶೀಂ ಆಮ್ಲಾ, ಫರ್ಹಾನ್ ಬೆಹರ್ದೀನ್, ಕ್ವಿಂಟಾನ್ ಡಿ ಕಾಕ್ (ವಿಕೆಟ್ ಕೀಪರ್), ಜೆಪಿ ಡುಮಿನಿ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹೀರ್, ಡೇವಿಡ್ ಮಿಲ್ಲರ್, ಮಾರ್ನೆ ಮಾರ್ಕೆಲ್, ಕ್ರಿಸ್ ಮೋರಿಸ್, ಅರೋನ್ ಫಂಗಿಸೋ, ಕಾಗಿಸೋ ರಬಾಡ, ರಿಲೇ ರೋಸೋ, ಡೇಲ್ ಸ್ಟೈನ್.

ಭಾರತ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ಟಿ 20 ತಂಡ
ಫಾಫ್ ಡು ಪ್ಲೆಸಿಸ್(ನಾಯಕ), ಕೈಲಿ ಅಬಾಟ್, ಹಶೀಂ ಆಮ್ಲಾ, ಫರ್ಹಾನ್ ಬೆಹರ್ದೀನ್, ಕ್ವಿಂಟಾನ್ ಡಿ ಕಾಕ್ (ವಿಕೆಟ್ ಕೀಪರ್), ಮರ್ಚಾಂಟ್ ಡಿ ಲಾಂಗ್, ಎಬಿ ಡಿ ವಿಲೆಯರ್ಸ್, ಜೆಪಿ ಡುಮಿನಿ, ಇಮ್ರಾನ್ ತಾಹೀರ್, ಎಡ್ಡಿ ಲೆಲಿ, ಡೇವಿಡ್ ಮಿಲ್ಲರ್, ಕ್ರಿಸ್ ಮೋರಿಸ್, ಕಾಗಿಸೋ ರಬಾಡ, ಡೇವಿಡ್ ವೀಸೆ, ಖಾಯಾ ಜೊಂಡೊ.

ಪ್ರವಾಸದ ವೇಳಾಪಟ್ಟಿ -ಟಿ20, ಏಕದಿನ ಪಂದ್ಯ
* ಸೆಪ್ಟೆಂಬರ್ 29: ಟಿ20 ಅಭ್ಯಾಸ ಪಂದ್ಯ, ನವದೆಹಲಿ.
* ಅಕ್ಟೋಬರ್ 2: 1ನೇ ಟಿ20, ಧರ್ಮಶಾಲ.
* ಅ. 5 : 2ನೇ ಟಿ20, ಕಟಕ್
* ಅ. 8 : 3ನೇ ಟಿ20. ಕೋಲ್ಕತ್ತಾ.
****
* ಅ. 11 : 1ನೇ ಏಕದಿನ ಪಂದ್ಯ, ಕಾನ್ಪುರ
* ಅ. 14 : 2ನೇ ಏಕದಿನ ಪಂದ್ಯ, ಇಂದೋರ್
* ಅ. 18 : 3ನೇ ಏಕದಿನ ಪಂದ್ಯ, ರಾಜ್ ಕೋಟ್.
* ಅ.22 : 4ನೇ ಏಕದಿನ ಪಂದ್ಯ, ಚೆನ್ನೈ
* ಅ.25 : 5ನೇ ಏಕದಿನ ಪಂದ್ಯ, ಮುಂಬೈ

ಟೆಸ್ಟ್ ಪಂದ್ಯ ವೇಳಾಪಟ್ಟಿ
* ಅಕ್ಟೋಬರ್ 30-31(ಶುಕ್ರವಾರದಿಂದ ಶನಿವಾರ) : ಪ್ರವಾಸ ಪಂದ್ಯ, ಮುಂಬೈ, ದಕ್ಷಿಣ ಆಫ್ರಿಕಾ vs ಅಧ್ಯಕ್ಷೀಯ ಮಂಡಳಿ XI
* ನವೆಂಬರ್ 14-18 (ಗುರುವಾರದಿಂದ ಸೋಮವಾರ): ಎರಡನೇ ಟೆಸ್ಟ್ ಪಂದ್ಯ, ಬೆಂಗಳೂರು.
* ನವೆಂಬರ್ 25-29 (ಶನಿವಾರದಿಂದ ಬುಧವಾರ): ಮೂರನೇ ಟೆಸ್ಟ್ ಪಂದ್ಯ, ನಾಗ್ಪುರ.
* ಡಿಸೆಂಬರ್ 03- 07 (ಗುರುವಾರದಿಂದ ಸೋಮವಾರ): 4ನೇ ಟೆಸ್ಟ್ ಪಂದ್ಯ, ನವದೆಹಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications