ಟಿ20 ವಿಶ್ವಕಪ್ ವಿಜೇತ ನಾಯಕ, ಸರಣಿ ಶ್ರೇಷ್ಠ ಆಟಗಾರನಿಗೆ ಶಾಕ್; ಅರಿಯದಂತಾಗಿದೆ BCCI ನಿಗೂಢ ನಡೆ!
ಭಾರತ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದು, ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಸರಣಿ ಮುಗಿದ ಬಳಿಕ ನಡೆದ ಟಿ20 ಸರಣಿಯಲ್ಲಿ ಬದಲಾದ ಟೀಮ್ ಇಂಡಿಯಾ ಕಾಣಿಸಿಕೊಂಡಿದೆ. ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ಸೂರ್ಯಕುಮಾರ್ ಯಾದವ್ ಈಗ ತಂಡಕ್ಕೆ ಬೇಡವಾಗಿದ್ದಾರೆ. ಟಿ20 ವಿಶ್ವಕಪ್‌ನ ಸರಣಿ ಶ್ರೇಷ್ಠ ಆಟಗಾರ ಸಂಜು ಸ್ಯಾಮ್ಸನ್ ಸಹ ತಂಡದಲ್ಲಿದ್ದರೂ ಸಹ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ, ಬಿಸಿಸಿಐ ಏನು ಮಾಡಲು ಹೊರಟಿದೆ ಎಂಬ ಚಿಂತೆ ಶುರುವಾಗುತ್ತದೆ.
ಬಿಸಿಸಿಐ ಯಾವ ಉದ್ದೇಶದಿಂದ ಈ ರೀತಿಯಾಗಿ ಮಾಡುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇಂಗ್ಲೆಂಡ್ ಸರಣಿಯ ಬಳಿಕ ಜಿಂಬಾಬ್ವೆ ಸರಣಿಯ ವೇಳೆಗೆ ಟೀಮ್ ಇಂಡಿಯಾ ಅರ್ಧದಷ್ಟು ಬದಲಾಗಿದೆ. ಇದಕ್ಕೆ ಕಾರಣ ಏನು? ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಟೀಮ್ ಇಂಡಿಯಾಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ ನಾಯಕ ಸೂರ್ಯಕುಮಾರ್ ಯಾದವ್ ಈಗ ಬಿಸಿಸಿಐಗೆ ಬೇಡವಾಗಿದ್ದಾರೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಇವರನ್ನು ನಾಯಕತ್ವದಿಂದ ಅಷ್ಟೇ ಕೈಬಿಡದೆ ಆಟಗಾರನಾಗಿಯೂ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಪರಿಣಾಮ ಟೀಮ್ ಇಂಡಿಯಾ ಐರ್ಲೆಂಡ್ ಪ್ರವಾಸದಲ್ಲಿ ಹೀನಾಯ ಸೋಲು ಕಂಡಿದ್ದು, ಆಡಿದ ಎರಡೂ ಪಂದ್ಯಗಳನ್ನು ಸೋತು, ಸರಣಿ ಕೈಚೆಲ್ಲಿದೆ.
ಟೀಮ್ ಇಂಡಿಯಾಕ್ಕೆ ವಿಶ್ವಕಪ್ ತೊಡಿಸಿದ ಹೀರೋ ಸಂಜು ಸ್ಯಾಮ್ಸನ್ ಟಿ20 ವಿಶ್ವಕಪ್ ಬಳಿಕ ಕೇವಲ ಮೂರು ಪಂದ್ಯಗಳನ್ನು ಆಡಿದ್ದಾರೆ. ಅವರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರಿಂದ ಅವರನ್ನು ಕೈ ಬಿಡಲಾಗಿದೆ. ಮ್ಯಾಂಚೆಸ್ಟರ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಟ್ಟು, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಆಡುವ ಅವಕಾಶ ಕಲ್ಪಿಸಲಾಯಿತು.

ಈ ವರ್ಷ ಮಿಂಚಿದ ಆಟಗಾರರು ಔಟ್?
ಈ ವರ್ಷದ ಆರಂಭದಲ್ಲಿ ತವರಿನಲ್ಲಿ ನಡೆದಿದ್ದ ಟಿ20 ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಟಿ20 ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ಸಂಜು ಸ್ಯಾಮ್ಸನ್ ಅವರನ್ನು ಸದ್ಯ ತಂಡದಿಂದ ಕೈ ಬಿಡಲಾಗಿದೆ. ಈ ಇಬ್ಬರೂ ಆಟಗಾರರು ಈ ವರ್ಷ ನಡೆದ ದೊಡ್ಡ ಟೂರ್ನಿಗಳಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಏಳು ಆಟಗಾರರಿಗೆ ಗೇಟ್ ಪಾಸ್
ಇಂಗ್ಲೆಂಡ್ ವಿರುದ್ಧ ಆಡುತ್ತಿರುವ ತಂಡದ ಏಳು ಆಟಗಾರರು ಜಿಂಬಾಬ್ವೆ ಪ್ರವಾಸದಲ್ಲಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಪ್ರಸಿದ್ಧ್, ಹರ್ಷಿತ್ ರಾಣಾ, ಅರ್ಶ್ದೀಪ್ ಸಿಂಗ್, ವಾಷಿಂಗ್ಟನ್ ಸುಂದರ್ ಮತ್ತು ರವಿ ಬಿಷ್ಣೋಯ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇವರ ಸ್ಥಾನದಲ್ಲಿ ರಿಂಕು ಸಿಂಗ್, ಮಾಯಾಂಕ್ ಯಾದವ್, ಪ್ರಭ್ಸಿಮ್ರಾನ್ ಸಿಂಗ್, ಯಶ್ ಠಾಕೂರ್, ಅಶೋಕ್ ಶರ್ಮಾ ಮತ್ತು ಹರ್ಷ್ ದುಬೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications