Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ ಡೇ & ನೈಟ್ ಟೆಸ್ಟ್ ಆಯೋಜನೆಗೆ ಬಿಸಿಸಿಐ ಯೋಜನೆ

india vs srilanka test

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಬಳಿಕ ಶ್ರೀಲಂಕಾ ವಿರುದ್ಧ ಡೇ & ನೈಟ್ ಟೆಸ್ಟ್ ಆಯೋಜನೆಗೆ ಯೋಜನೆ ನಡೆಸಿದೆ. ಅದ್ರಲ್ಲೂ ಬೆಂಗಳೂರಿನಲ್ಲಿ ನಡೆಯಲಿರುವ ಭಾರತ-ಶ್ರೀಲಂಕಾ ನಡುವಿನ ಟೆಸ್ಟ ಪಂದ್ಯವನ್ನ ಪಿಂಕ್ ಚೆಂಡಿನಲ್ಲಿ ಆಡಿಸಲು ತಯಾರಿ ಮಾಡಿಕೊಂಡಿದೆ.

ಮುಂಬರುವ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸುವ ಅವಕಾಶ ನೀಡುವ ಬಗ್ಗೆಯು ಚಿಂತನೆರ ನಡೆಸಿದೆ ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತ್ತಾದಲ್ಲಿ ನಡೆಯಲಿರುವ ಮೂರು ಟಿ20 ಪಂದ್ಯದಲ್ಲಿ ಶೇಕಡಾ 75ರಷ್ಟು ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅವಕಾಶ ನೀಡುವ ಸಾಧ್ಯತೆ ಇದೆ.

ಶ್ರೀಲಂಕಾ ಭಾರತಕ್ಕೆ ಆಗಮಿಸುವ ಮೊದಲು ಭಾರತ-ವಿಂಡೀಸ್ ತಂಡಗಳು T20 ಗಳನ್ನು ಆಡುತ್ತವೆ . ಸಂಪೂರ್ಣ ಬಯೋ ಬಬಲ್‌ನಲ್ಲಿ ಆಟಗಾರರು ಇರಲಿದ್ದು, ಎಲ್ಲಾ ಪಂದ್ಯಗಳು ಕೋಲ್ಕತ್ತಾದಲ್ಲೇ ನಡೆಯಲಿದೆ. ಇದಾದ ಬಳಿಕ ಶ್ರೀಲಂಕಾ ಮತ್ತು ಭಾರತ ಎರಡು ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಮೊದಲ ಟೆಸ್ಟ್ ಅನ್ನು ಬೆಂಗಳೂರಿನಲ್ಲಿ ನಿಗದಿಪಡಿಸಲಾಗಿದ್ದು, ಇದನ್ನ ಡೇ & ನೈಟ್ ಟೆಸ್ಟ್ ಆಗಿ ನಡೆಸಲು ಬೋರ್ಡ್ ನಿರ್ಧರಿಸುತ್ತದೆ.

ವಿರಾಟ್ ಕೊಹ್ಲಿಗೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಟೆಸ್ಟ ಪಂದ್ಯವು 100ನೇ ಟೆಸ್ಟ್ ಪಂದ್ಯವಾಗಿದ್ದು, ಮೊದಲ ಟೆಸ್ಟ್ ಪಂದ್ಯ ಪಿಂಕ್ ಬಾಲ್‌ನಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ.

ಏಕೆಂದರೆ ಸದ್ಯಕ್ಕೆ ವೇಳಾಪಟ್ಟಿ ಪ್ರಕಾರ ಮೊಹಾಲಿ, ಧರ್ಮಶಾಲಾ ಮತ್ತು ಲಕ್ನೋದಲ್ಲಿ T20 ಪಂದ್ಯಗಳನ್ನು ಆಡುವ ಮೊದಲು ಬೆಂಗಳೂರು ಮತ್ತು ಮೊಹಾಲಿಯಲ್ಲಿ ಎರಡು ಟೆಸ್ಟ್‌ಗಳನ್ನು ಆಡುತ್ತಾರೆ. ಪ್ರಯಾಣದ ಪ್ರಮಾಣವನ್ನು ಕಡಿತಗೊಳಿಸಲು, ಮಂಡಳಿಯು ಮೊಹಾಲಿ ಮತ್ತು ಧರ್ಮಶಾಲಾದಲ್ಲಿ ಹೆಚ್ಚಿನ ಪಂದ್ಯಗಳನ್ನ ಆಡಲು ಪರಿಗಣಿಸುತ್ತಿದೆ.

"ಪ್ರವಾಸವನ್ನು ಪ್ರಾರಂಭಿಸಲು ಮೊದಲ ಎರಡು T20 ಗಳನ್ನು ಧರ್ಮಶಾಲಾದಲ್ಲಿ ಆಡುವ ಅವಕಾಶವಿದೆ, ಸರಣಿಯು ಮೂರನೇ T20 ಪಂದ್ಯ ಮತ್ತು ಮೊದಲ ಟೆಸ್ಟ್‌ಗಾಗಿ ಮೊಹಾಲಿಗೆ ಸ್ಥಳಾಂತರಗೊಳ್ಳುತ್ತದೆ. ಲಕ್ನೋ T20 ಆತಿಥ್ಯವನ್ನು ಕಳೆದುಕೊಳ್ಳಬಹುದು.

Story first published: Wednesday, February 2, 2022, 21:05 [IST]
Other articles published on Feb 2, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+