For Quick Alerts
ALLOW NOTIFICATIONS  
For Daily Alerts
 

Team India: ತಂಡದಲ್ಲಿ ಬೀಸಲಿದೆ ಸುಂಟರಗಾಳಿ: ಇದರ ಆರ್ಭಟಕ್ಕೆ ಹಂಚಿ ಹೋಗಲಿದೆ ಜವಾಬ್ದಾರಿ

ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಗಾಳಿ ಬೀಸುವ ಸಾಧ್ಯತೆ ಇದೆ. ಈ ಗಾಳಿಗೆ ಅದೆಷ್ಟು ಆಟಗಾರರ ಲಕ್‌ ಬದಲಿಸುತ್ತದೋ ಕಾದು ನೋಡಬೇಕಿದೆ. ಆದರೆ ಇಂತಹದ್ದೊಂದು ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳಲಿದೆ ಎಂಬ ಸುದ್ದಿ ನಿಜಕ್ಕೂ ಅಭಿಮಾನಿಗಳಲ್ಲಿ ಹರ್ಷ ತಂದಿದೆ. ಈ ರೀತಿ ಬದಲಾವಣೆಗಳ ಬಗ್ಗೆ ಬಹುದಿನಗಳ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಬಿಸಿಸಿಐ ಕೊಂಚ ತಲೆ ಕೆಡಿಸಿಕೊಂಡಂತೆ ಕಾಣುತ್ತಿದೆ. ಹಾಗಿದ್ದರೆ ಬಿಸಿಸಿಐ ಮಾಡಲು ಹೊರಟಿರುವ ಚೇಂಜ್ ಆದ್ರೂ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್‌ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಈ ವೇಳೆ ಟೀಮ್ ಇಂಡಿಯ ಆಟಗಾರರು ಚಾಂಪಿಯನ್ಸ್‌ ಟ್ರೋಫಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿ ನಡೆಸಿದ್ದಾರೆ. ಈ ಸಮಯದಲ್ಲಿ ಬಿಸಿಸಿಐ ನಾಯಕತ್ವಕ್ಕೆ ಸಂಬಂಧಿಸಿದಂತೆ ಹೊಸ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ನಿರ್ಧಾರ ನಿಜಕ್ಕೂ ಪ್ರಸ್ತುತವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಜಾರಿಯಾಗುವ ಸಾಧ್ಯತೆ ಇದೆ. ಬಿಸಿಸಿಐ ತನ್ನ ನಿಲುವಿಗೆ ವಿರುದ್ಧವಾದ ನಿಯಮವನ್ನು ಜಾರಿಗೊಳಿಸವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ.

BCCI Plans Three Captains for Team India Kohli for Tests Hardik for ODIs SKY for T20s

ಬಿಸಿಸಿಐ ಪ್ಲ್ಯಾನ್‌ ಏನು?

ಬಿಸಿಸಿಐ ಮೂರು ಫಾರ್ಮೆಟ್‌ಗಳಿಗೆ ಮೂವರು ಬೇರೆ ಬೇರೆ ನಾಯಕರ ಹುಡುಕಾಟ ನಡೆಸಿದೆ. ಇದೇ ಸಮಯದಲ್ಲಿ ಸದ್ಯ ಟೀಮ್ ಇಂಡಿಯಾದಲ್ಲಿ ಕೊಂಚ ಜವಾಬ್ದಾರಿಯನ್ನು ವಂಚಿತರಾಗಿರುವ ಹಾರ್ದಿಕ್ ಪಾಂಡ್ಯ ಅವರಿಗೂ ಬಿಸಿಸಿಐ ದೊಡ್ಡ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ. ಟೀಮ್ ಇಂಡಿಯಾ ಮೂರು ಫಾರ್ಮೆಟ್‌ಗಳಿಗೆ ಮೂವರು ನಾಯಕರನ್ನು ಪಡೆಯಲಿದೆ ಎಂದು ಬಿಸಿಸಿಐ ಮೂಲಗಳು ಕ್ರಿಕ್‌ ಬ್ಲಾಗರ್‌ಗೆ ತಿಳಿಸಿವೆ. ಹಾಗಿದ್ದಾರೆ ಯಾವ ಆಟಗಾರರನ್ನು ಟಾರ್ಗೆಟ್‌ ಮಾಡಿ ಬಿಸಿಸಿಐ ಈ ಹೇಳಿಕೆ ನೀಡಿರಬಹುದು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಯಾರಿಗೆ ಏನು ಜವಾಬ್ದಾರಿ?

ಟೀಮ್ ಇಂಡಿಯಾ ಗೆಲುವಿನ ಟ್ರ್ಯಾಕ್‌ ಬರಲು ಬೇಕಾದ ಇನ್ ಸೈಡ್‌ ಬದಲಾವಣೆಗಳನ್ನು ಮಾಡಲು ಮುಂದಾದಂತೆ ಕಾಣುತ್ತಿದೆ. ಅದರಂತೆ ಈಗಾಗಲೇ ಟೀಮ್ ಇಂಡಿಯಾದಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸಿದ ಆಟಗಾರರಿಗೆ ದೊಡ್ಡ ಜವಾಬ್ದಾರಿ ನೀಡುವ ಸಂಭವವಿದೆ.

ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕರಾಗಬೇಕು ಎಂಬ ಬಯಕೆಯನ್ನು ಹೊಂದಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ. ಕೊಹ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಕಳಪೆ ಫಾರ್ಮ್‌ನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಫಾರ್ಮ್ ಆಧರಿಸಿ ಜವಾಬ್ದಾರಿ ನೀಡುವ ಬಗ್ಗೆಯೂ ಚರ್ಚೆಗಳು ನಡೆದಿರುವು ಕುತೂಹಲಕಾರಿಯಾಗಿದೆ.

BCCI Plans Three Captains for Team India Kohli for Tests Hardik for ODIs SKY for T20s

ಹಾರ್ದಿಕ್ ಪಾಂಡ್ಯ ಏಕದಿನ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಕೋಚ್‌ ಗಂಭೀರ್‌ ಸಹ ಇದ್ದನೇ ಬಯಸುತ್ತಿದ್ದಾರೆ. ಅಂದಹಾಗೆ ಚಾಂಪಿಯನ್ಸ್‌ ಟ್ರೋಫಿ ಬಳಿಕ ಈ ಬಗ್ಗೆ ಮಹತ್ವದ ತೀರ್ಮಾನ ಹೊರ ಬೀಳುವ ಸಾಧ್ಯತೆ ಇದೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ ನಾಯಕರಾಗಿ ಸ್ಥಿರ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್‌ ಯಾದವ್‌ ಈ ಫಾರ್ಮೆಟ್‌ನಲ್ಲಿ ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದೆ.

Story first published: Saturday, February 8, 2025, 11:45 [IST]
Other articles published on Feb 8, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+