ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಜೋ ರೂಟ್‌ಗೆ ಶಹಬ್ಬಾಸ್‌ಗಿರಿ ನೀಡಿದ ಬಿಸಿಸಿಐ ಬಾಸ್

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದಲ್ಲದೇ, ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ್ದಕ್ಕೆ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋ ರೂಟ್ ಅವರನ್ನು ಭಾರತದ ಮಾಜಿ ನಾಯಕ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೊಗಳಿದ್ದಾರೆ. ಈ ಮಹತ್ವದ ಮೈಲಿಗಲ್ಲು ತಲುಪಿದ ಇಂಗ್ಲೆಂಡ್‌ನ ಎರಡನೇ ಮತ್ತು ವಿಶ್ವದ 14ನೇ ಆಟಗಾರನಾಗಿದ್ದಾರೆ.
ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಲಾರ್ಡ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಎರಡನೇ ಇನಿಂಗ್ಸ್‌ನ 77ನೇ ಓವರ್‌ನಲ್ಲಿ ಟಿಮ್ ಸೌಥಿ ಅವರ ಎಸೆತದಲ್ಲಿ ಒಂದು ಫ್ಲಿಕ್ ಮೂಲಕ ಜೋ ರೂಟ್ ಟೆಸ್ಟ್ ಮಾದರಿಯಲ್ಲಿ 10,000 ರನ್ ಪೂರೈಸಿದರು. ಇದರೊಂದಿಗೆ ಅವರು ತಮ್ಮ 26ನೇ ಟೆಸ್ಟ್ ಶತಕವನ್ನೂ ತಲುಪಿದರು.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ, "ಜೋ ರೂಟ್... ಎಂತಹ ಆಟಗಾರ, ಒತ್ತಡದಲ್ಲಿ ಅದ್ಭುತ ಪ್ರದರ್ಶನ ಮತ್ತು ಸಾರ್ವಕಾಲಿಕ ಶ್ರೇಷ್ಠ ಆಟವೆಂದು," ಬರೆದಿದ್ದಾರೆ.

ಟೆಸ್ಟ್ ಕ್ರಿಕೆಟ್ ಅನ್ನು ಯಾವುದೂ ಮೀರಿಸುವುದಿಲ್ಲ
ಟೆಸ್ಟ್ ಕ್ರಿಕೆಟ್ ಬಗ್ಗೆ ಮಾತನಾಡುತ್ತಾ ಸೌರವ್ ಗಂಗೂಲಿ ಅವರು, "ನೀವು ಯಾವ ಸ್ವರೂಪದ ಕ್ರಿಕೆಟ್ ಬೇಕಾದರೂ ನೋಡಿರಿ, ನೀವು ಯಾವುದೇ ಬಣ್ಣದ ಜರ್ಸಿಯನ್ನು ಧರಿಸಿದ್ದರೂ, ಟೆಸ್ಟ್ ಕ್ರಿಕೆಟ್ ಅನ್ನು ಯಾವುದೂ ಮೀರಿಸುವುದಿಲ್ಲ. ಐಸಿಸಿ, ಟೆಸ್ಟ್ ಕ್ರಿಕೆಟ್ ಸ್ವರೂಪವನ್ನು ಎತ್ತರಕ್ಕೇರಿಸೋಣ," ಎಂದು ಬಿಸಿಸಿಐ ಅಧ್ಯಕ್ಷ ಮತ್ತು ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಅದೇ ರೀತಿ ಐಸಿಸಿ ಟ್ವೀಟ್ ಮಾಡಿ, "ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಎರಡನೇ ಇಂಗ್ಲೆಂಡ್ ಆಟಗಾರ ಮತ್ತು ಒಟ್ಟಾರೆ 14ನೇ ಆಟಗಾರ ಜೋ ರೂಟ್, ಎಂತಹ ಅದ್ಭುತ ಆಟಗಾರ,'' ಎಂದು ಶ್ಲಾಘಿಸಿದೆ.
ಅಲಸ್ಟೈರ್ ಕುಕ್ ಹೆಚ್ಚು ರನ್ ಗಳಿಸಿದ ಮೊದಲ ಇಂಗ್ಲೆಂಡ್ ಆಟಗಾರ
ಇನ್ನು ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ಜೋ ರೂಟ್ ಅವರನ್ನು ಶ್ಲಾಘಿಸಿದ್ದಾರೆ. ವಾಸಿಂ ಜಾಫರ್ ಕೂಡ ಟ್ವೀಟ್ ಮಾಡಿ, "ಜೋ ರೂಟ್ 10,000 ಟೆಸ್ಟ್ ರನ್‌ಗಳನ್ನು ತಲುಪಿದ್ದಾರೆ ಮತ್ತು ಅವರು ಕೇವಲ 31 ವರ್ಷಗಳಲ್ಲಿ ಈ ಸಾಧನೆ ಮಾಡಿದ್ದಾರೆ ಅವರಿಗೆ ಅಭಿನಂದನೆಗಳು," ಎಂದು ಹೇಳಿದ್ದಾರೆ.
ಇಂಗ್ಲೆಂಡ್‌ನ ಮಾಜಿ ನಾಯಕ ಅಲಸ್ಟೈರ್ ಕುಕ್ 10,000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಇಂಗ್ಲೆಂಡ್ ಆಟಗಾರ. ಅವರು 161 ಟೆಸ್ಟ್‌ಗಳಲ್ಲಿ 45.35 ಸರಾಸರಿಯಲ್ಲಿ 12,472 ಗಳಿಸಿದ್ದಾರೆ. ಅವರು ಸುದೀರ್ಘ ಆಟದ ಸ್ವರೂಪದಲ್ಲಿ 33 ಶತಕಗಳು ಮತ್ತು 57 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್ 15,921 ರನ್
ಈಗ ಈ ಮೈಲಿಗಲ್ಲನ್ನು ತಲುಪಿರುವ ಜೋ ರೂಟ್, ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ 10,000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಆಟಗಾರರ ಎಲೈಟ್ ಲೀಗ್‌ಗೆ ಸೇರಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (15,921), ರಿಕಿ ಪಾಂಟಿಂಗ್ (13,378), ಜಾಕ್ವೆಸ್ ಕಾಲಿಸ್ (13,289), ರಾಹುಲ್ ದ್ರಾವಿಡ್ (13,288) ಮತ್ತು ಅಲೆಸ್ಟೈರ್ ಕುಕ್ (12,472) ಜೋ ರೂಟ್‌ಗಿಂತ ಮುಂದಿದ್ದಾರೆ.
ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 277 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್, 5 ವಿಕೆಟ್‌ಗಳ ಅಂತರದಿಂದ ಗುರಿ ತಲುಪಿ ಜಯ ಸಾಧಿಸಿತು. ಇಂಗ್ಲೆಂಡ್ 78.5 ಓವರ್‌ಗಳಲ್ಲಿ 279/5 ರನ್ ಗಳಿಸಿತು. ಅದರಲ್ಲಿ ಜೋ ರೂಟ್ ಅಜೇಯ 115 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 132 ರನ್‌ಗಳಿಗೆ ಆಲೌಟ್
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 132 ರನ್‌ಗಳಿಗೆ ಆಲೌಟ್ ಆಯಿತು. ಆಲ್‌ರೌಂಡರ್ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (42*) ಮತ್ತು ಟಿಮ್ ಸೌಥಿ (26) ಮಾತ್ರ ಪ್ರತಿರೋಧ ತೋರಿದರು. ಮೊದಲ ಟೆಸ್ಟ್ ಪಂದ್ಯವಾಡಿದ ಇಂಗ್ಲೆಂಡ್ ಬೌಲರ್ ಮ್ಯಾಥ್ಯೂ ಪಾಟ್ಸ್ 13 ರನ್‌ಗೆ 4 ವಿಕೆಟ್ ಮತ್ತು ಅನುಭವಿ ಜೇಮ್ಸ್ ಆಂಡರ್ಸನ್ 66 ರನ್‌ಗೆ 4 ವಿಕೆಟ್ ಪಡೆದು ಮಿಂಚಿದರು. ಈ ಇಬ್ಬರ ವೇಗದ ಬೌಲಿಂಗ್‌ಗೆ ನ್ಯೂಜಿಲೆಂಡ್ ಬ್ಯಾಟಿಂಗ್ ಲೈನ್‌ಅಪ್ ನಡುಗಿತು.
ನಂತರ ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡ, ಟ್ರೆಂಟ್ ಬೌಲ್ಟ್ (3/21) ಮತ್ತು ಸೌಥಿ (4/55) ಬಿಗಿ ಬೌಲಿಂಗ್ ದಾಳಿಗೆ 141ಕ್ಕೆ ಆಲೌಟ್ ಆಯಿತು. ಒಂಬತ್ತು ರನ್‌ಗಳ ಅಲ್ಪ ಮುನ್ನಡೆ ಸಾಧಿಸಿತು. ಮೂರನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ (108) ಮತ್ತು ಟಾಮ್ ಬ್ಲಂಡೆಲ್ (96) ಈ ಇಬ್ಬರು ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ನಂತರ ನ್ಯೂಜಿಲೆಂಡ್ ತಂಡವು 285 ರನ್ ಗಳಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications