For Quick Alerts
ALLOW NOTIFICATIONS  
For Daily Alerts
 

BCCI ಆಯ್ಕೆ ಸಮಿತಿಗೆ ಟೀಮ್ ಇಂಡಿಯಾದ ಇಬ್ಬರು ಬೌಲರ್‌ಗಳ ಎಂಟ್ರಿ; ಯಾರು ಗೊತ್ತಾ?

ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯಲ್ಲಿ ಶೀಘ್ರದಲ್ಲಿ ಎರಡು ಬದಲಾವಣೆ ಆಗಲಿದೆ. ಈ ಬಾರಿ ಟೀಮ್ ಇಂಡಿಯಾದ ಮಾಜಿ ಬೌಲರ್‌ಗಳು ಇಬ್ಬರು ಆಯ್ಕೆ ಸಮಿತಿಗೆ ಎಂಟ್ರಿ ನೀಡುವ ಸಾಧ್ಯತೆ ಇದೆ. ಈ ಸಮಿತಿಯನ್ನು ಅಜಿತ್ ಅಗರ್ಕರ್‌ ಮುನ್ನಡೆಸುತ್ತಿದ್ದು, ಈ ತಂಡಕ್ಕೆ ರುದ್ರ ಪ್ರತಾಪ್ ಸಿಂಗ್ ಮತ್ತು ಪ್ರಗ್ಯಾನ್ ಓಜಾ ಅವರ ಸೇರಲಿದ್ದಾರೆ.

ಆಯ್ಕೆ ಸಮಿತಿಯ ಸದಸ್ಯರಾಗಿರುವ ಎಸ್. ಶರತ್ ಮತ್ತು ಸುಬ್ರೋಟೊ ಬ್ಯಾನರ್ಜಿ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಟೀಮ್ ಇಂಡಿಯಾದ ಮಾಜಿ ಆಟಗಾರರು ಇವರ ಸ್ಥಾನವನ್ನು ತುಂಬಲಿದ್ದಾರೆ. ಮಹೇಂದ್ರ ಸಿಂಗ್ ನಾಯಕತ್ವದಲ್ಲಿ 2007ರಲ್ಲಿ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಆಗಿದ್ದಾಗ ಆ ತಂಡದ ಸದಸ್ಯರಾಗಿದ್ದ ಆರ್‌ಪಿ ಸಿಂಗ್ ಈಗ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

BCCI set to appoint two former India bowlers RP Singh and Pragyan Ojha to selection panel

ದೇಶೀಯ ಟೂರ್ನಿಗಳಲ್ಲಿ ಉತ್ತರ ಪ್ರದೇಶಕ್ಕಾಗಿ ಆಡುವ ಆರ್‌ಪಿ ಸಿಂಗ್, ಉತ್ತಮ ಎಡಗೈ ಬೌಲರ್‌. ಇವರು ಆಯ್ಕೆ ಸಮಿತಿಗೆ ಎಂಟ್ರಿ ಪಡೆಯಲು ಕೇಂದ್ರ ವಲಯದಿಂದ ಅರ್ಜಿ ಸಲ್ಲಿಸಿದ್ದಾರೆ. ಪ್ರಗ್ಯಾನ್ ಓಜಾ ದಕ್ಷಿಣ ವಲಯದಿಂದ ಆಯ್ಕೆ ಸಮಿತಿ ಸೇರಲಿದ್ದಾರೆ. ಇವರಿಬ್ಬರ ಹೆಸರುಗಳನ್ನು ಬಿಸಿಸಿಐನ ವಾರ್ಷಿಕ ಮಹಾಸಭೆಗೂ ಮೊದಲು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಆರ್‌ಪಿ ಸಿಂಗ್ ಸಾಧನೆ

ಆರ್‌ಪಿ ಸಿಂಗ್ ಗುಜರಾತ್‌ ಪರವೂ ದೇಶೀಯ ಟೂರ್ನಿಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇವರು ಪಾರ್ಥಿವ್ ಪಟೇಲ್‌ ನಾಯಕತ್ವದಲ್ಲಿ ತಂಡ ರಣಜಿ ಚಾಂಪಿಯನ್‌ ಆಗಿದ್ದಾಗ ಆರ್‌ಪಿ ಗುಜರಾತ್‌ ಪರ ಬೌಲ್ ಮಾಡಿದ್ದರು. ಇವರು ಭಾರತದ ಪರ 14 ಟೆಸ್ಟ್‌ ಪಂದ್ಯ, 58 ಏಕದಿನ, 10 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ 14 ಟೆಸ್ಟ್‌ ಪಂದ್ಯಗಳಲ್ಲಿ 40 ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ. ಇನ್ನು ಏಕದಿನ ಪಂದ್ಯಗಳಲ್ಲಿ 33.96 ರ ಸರಾಸರಿಯಲ್ಲಿ 69 ಹಾಗೂ 15 ಟಿ20 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಇನ್ನು ಇವರು ಐಪಿಎಲ್‌ನಲ್ಲಿ ಆಡಿದ 82 ಪಂದ್ಯಗಳಲ್ಲಿ 90 ವಿಕೆಟ್‌ಗಳನ್ನು ಪಡೆದಿದ್ದಾರೆ.

ಪ್ರಗ್ಯಾನ್‌ ಓಜಾ ಅರ್ಜಿ

ಖಾಲಿ ಇರುವ ಎರಡು ಹುದ್ದೆಗಳಲ್ಲಿ ಪ್ರಗ್ಯಾನ್‌ ಓಜಾ ಸಹ ಒಂದು ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು ದಕ್ಷಿಣ ವಲಯದಿಂದ ಅರ್ಜಿ ಸಲ್ಲಿಸಿದ್ದಾರೆ. ಪ್ರಗ್ಯಾನ್‌ ಓಜಾ ಟೀಮ್ ಇಂಡಿಯಾದ ನುರಿತ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರು. ಇವರು ಭಾರತದ ಪರ 24 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 113 ವಿಕೆಟ್‌ ಪಡೆದಿದ್ದಾರೆ. ಇನ್ನು 18 ಏಕದಿನ ಪಂದ್ಯಗಳಲ್ಲಿ 21 ವಿಕೆಟ್‌ ಕಬಳಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಓಜಾ ಹೆಚ್ಚಿನ ಸಮಯ ಹೈದರಾಬಾದ್ ಪರ ಆಡಿದ್ದಾರೆ. ಅವರು ಬಂಗಾಳ ಮತ್ತು ಬಿಹಾರವನ್ನು ಸಹ ಪ್ರತಿನಿಧಿಸಿದ್ದಾರೆ.

ಟೀಮ್ ಇಂಡಿಯಾ ಸದ್ಯ ಏಷ್ಯಾ ಕಪ್‌ನಲ್ಲಿ ಆಡುತ್ತಿದ್ದು, ಇದಾದ ಬಳಿಕ ತವರಿನಲ್ಲಿ ವಿಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದಕ್ಕಾಗಿ ತಂಡವನ್ನು ಇನ್ನು ಪ್ರಕಟಿಸಬೇಕಿದೆ.

Story first published: Wednesday, September 17, 2025, 12:14 [IST]
Other articles published on Sep 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+