Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊರೊನಾವೈರಸ್ ಪರೀಕ್ಷೆಗಳಿಗಾಗಿ 10 ಕೋ.ರೂ. ವ್ಯಯಿಸಲಿದೆ ಬಿಸಿಸಿಐ

BCCI set to spend around Rs 10 crore for 20,000 plus tests during IPL

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ನಡೆಯಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ವೇಳೆ ಸುಮಾರು 20,000 ಕೋವಿಡ್ 19 ಪರೀಕ್ಷೆಗಳನ್ನು ನಡೆಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಯೋಚಿಸಿದೆ.

ಐಪಿಎಲ್‌ಗೆ ಸಂಬಂಧಿಸಿ ಭಾರತದಲ್ಲಿ ನಡೆದ ಪರೀಕ್ಷೆಗಳ ಖರ್ಚನ್ನು ಆಯಾ 8 ಫ್ರಾಂಚೈಸಿಗಳು ವ್ಯಯಿಸಿದ್ದವು. ತಂಡಗಳು ಯುಎಇಗೆ ತಲುಪಿದಲ್ಲಿಂದ ಅಂದರೆ ಆಗಸ್ಟ್ 20ರಿಂದ ನಡೆದ ಪರೀಕ್ಷೆಗಳ ಖರ್ಚನ್ನು ಬಿಸಿಸಿಐ ನೋಡಿಕೊಳ್ಳಲಿದೆ. ಕೊರೊನಾ ಪರೀಕ್ಷೆಗಳಿಗಾಗಿ ಬಿಸಿಸಿಐ ಸುಮಾರು 10 ಕೋ.ರೂ. ಬಜೆಟ್ ಹೊಂದಿದೆ.

'ಪರೀಕ್ಷೆಗಳನ್ನು ನಡೆಸಲು ನಾವು ಯುಎಇ ಮೂಲದ ವಿಪಿಎಸ್ ಹೆಲ್ತ್‌ಕೇರ್ ಅನ್ನು ತೊಡಗಿಸಿಕೊಂಡಿದ್ದೇವೆ. ಕೊರೊನಾ ಪರೀಕ್ಷೆಗಳಿಗಾಗಿ ನಾವು ನಿರ್ದಿಷ್ಟ ಸಂಖ್ಯೆಯನ್ನು ಇಟ್ಟುಕೊಂಡಿಲ್ಲ. ಅದು 20,000ಕ್ಕೂ ಹೆಚ್ಚಬಹುದು. ತೆರಿಗೆಯೂ ಸೇರಿ ಪ್ರತೀ ಪರೀಕ್ಷೆಯ ವೆಚ್ಚವಾಗಿ ಬಿಸಿಸಿಐ 200 ಎಇಡಿ (3,970 ರೂ.) ವ್ಯಯಿಸಲಿದೆ,' ಎಂದು ಐಪಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾತು ಮುಂದುವರೆಸಿದ ಅಧಿಕಾರಿ, 'ಹೀಗಾಗಿ ಬಿಸಿಸಿಐ ಕೋವಿಡ್ ಪರೀಕ್ಷೆಗಳಿಗಾಗಿ ಸುಮಾರು 10 ಕೋ.ರೂ. ವ್ಯಯಿಸಲಿದೆ. ಕಂಪನಿಯ ಭಾಗವಾಗಿರುವ ಸುಮಾರು 75 ಹೆಲ್ತ್ ಕೇರ್ ಕಾರ್ಯಕರ್ತರು ಐಪಿಎಲ್ ಪರೀಕ್ಷೆ ಪ್ರಕ್ರಿಯೆಯ ಭಾಗವಾಗಿರಲಿದ್ದಾರೆ,' ಎಂದರು.

Story first published: Wednesday, September 2, 2020, 9:58 [IST]
Other articles published on Sep 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+