Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಪ್ಪಂದದ ಆಟಗಾರರಿಗೆ ಶೀಘ್ರವೆ ಕೌಶಲ ಆಧಾರಿತ ತರಬೇತಿ ಶಿಬಿರ: ಬಿಸಿಸಿಐ

BCCI to organise skill-based camp for contracted players

ನವದೆಹಲಿ, ಮೇ 18: ನಾಲ್ಕನೇ ಹಂತದ ಕೊರೊನಾವೈರಸ್ ಲಾಕ್‌ಡೌನ್ ಮಾರ್ಗ ಸೂಚಿಗಳನ್ನು ಸರ್ಕಾರ ಘೋಷಿಸಿದ ಬಳಿಕ, ಒಪ್ಪಂದದ ಆಟಗಾರರಿಗೆ ಸ್ಥಳೀಯ ಮಟ್ಟದಲ್ಲಿ ಕೌಶಲ ಆಧಾರಿತ ತರಬೇತಿ ಶಿಬಿರ ಆರಂಭಿಸಲು ಯೋಚಿಸಲಾಗಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇಂಡಿಯಾದ (ಬಿಸಿಸಿಐ) ಖಜಾಂಚಿ ಅರುಣ್ ಧೃಮಾಲ್ ಭಾನುವಾರ (ಮೇ 17) ಹೇಳಿದ್ದಾರೆ.

ಮಿನಿಸ್ಟ್ರಿ ಆಫ್ ಹೋಮ್ ಅಫೇರ್ಸ್ (ಎಂಎಚ್‌ಎ) ಮಾರ್ಗಸೂಚಿಯಂತೆ ಸ್ಟೇಡಿಯಂಗಳನ್ನು ತೆರೆಯಲಾಗಿದೆ. ಆದರೆ ವೀಕ್ಷಕರಿಗೆ ಅನುಮತಿ ನೀಡಲಾಗಿಲ್ಲ. ಇದರರ್ಥ ಪ್ರಯಾಣ ನಿರ್ಬಂಧ ಸಲುವಾಗಿ ತರಬೇತಿಯಲ್ಲಿ ಪಾಲ್ಗೊಳ್ಳಲಾಗದ ಆಟಗಾರರು ವೈಯಕ್ತಿಕ ತರಬೇತಿ ಆರಂಭಿಸಬಹುದು ಎಂಬುದಾಗಿದೆ.

'ಕೊರೊನಾವೈರಸ್‌ಗೆ ಸಂಬಂಧಿಸಿ ಭಾನುವಾರ ಗೃಹ ಸಚಿವಾಲಯ ರಾಷ್ಟ್ರದಾದ್ಯಂತ ನೀಡಿರುವ ಹೊಸ ಮಾರ್ಗಸೂಚಿಗಳ ಪಟ್ಟಿಯನ್ನು ಬಿಸಿಸಿಐ ಪಡೆದುಕೊಂಡಿದೆ,' ಎಂದು ಬಿಸಿಸಿಐ ಪತ್ರಿಕಾ ಪ್ರಕಟನೆಯ ಮೂಲಕ ಧೃಮಾಲ್ ತಿಳಿಸಿದ್ದಾರೆ.

'ಮೇ 31ರವರೆಗೂ ವಿಮಾನಯಾನ ಮತ್ತು ಜನರ ಓಡಾಟಕ್ಕೆ ಸಂಬಂಧಿಸಿದ ನಿರ್ಬಂಧವನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐಯು ತನ್ನ ಕಾಂಟ್ರ್ಯಾಕ್ಟೆಡ್ ಆಟಗಾರರಿಗೆ ಕೌಶಲ ಆಧಾರಿತ ತರಬೇತಿ ಶಿಬಿರ ಆಯೋಜಿಸುವತ್ತ ಎದುರು ನೋಡುತ್ತಿದೆ,' ಎಂದು ಧೃಮಾಲ್ ಮಾಹಿತಿ ನೀಡಿದ್ದಾರೆ.

Story first published: Monday, May 18, 2020, 8:23 [IST]
Other articles published on May 18, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+