ಭಾರತದಲ್ಲಿ ಆಫ್ಘನ್ ಪ್ರೀಮಿಯರ್ ಲೀಗ್ ಆಯೋಜಿಸಲು ಬಿಸಿಸಿಐ ನಕಾರ!

ಹೊಸದಿಲ್ಲಿ, ಜೂನ್ 18: ಕ್ರಿಕೆಟ್ ಅಭಿವೃದ್ಧಿಗೆ ಪ್ರೋತ್ಸಾಹಿಸಲು ಆಫ್ಘನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯನ್ನು ಭಾರತದಲ್ಲಿ ಆಯೋಜಿಸಲು ಅನುಮತಿ ಕೋರಿದ್ದ ಅಫಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮನವಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಳ್ಳಿ ಹಾಕಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
"ತನ್ನ ಟಿ20 ಕ್ರಿಕೆಟ್ ಲೀಗ್ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸಲು ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ಮನವಿ ಮಾಡಿತ್ತು. ನಮ್ಮದೇ ಆದ ಟಿ20 ಕ್ರಿಕೆಟ್ ಟೂರ್ನಿ ಇರುವಾಗ ಆಫ್ಘನ್ ಪ್ರೀಮಿಯರ್ ಲೀಗ್‌ಗೆ ಅನುಮತಿ ನೀಡುವುದು ಸರಿಯಲ್ಲ,'' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಸಂಸ್ಥೆಗೆ ತಿಳಿಸಿದ್ದಾರೆ.
ಅಫಘಾನಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಈ ವಿಚಾರವಾಗಿ ಬಿಸಿಸಿಐನ ಸಿಇಒ ರಾಹುಲ್ ಜೊಹ್ರಿ ಮತ್ತು ಕ್ರಿಕೆಟ್ ಕಾರ್ಯಚಟುವಟಿಕೆಗಳ ಪ್ರಧಾನ ನಿರ್ವಾಹಕ ಸಬಾ ಕರೀಮ್ ಅವರ ಬಳಿ ಮೇ 16ರಂದು ಮುಂಬೈನಲ್ಲಿ ನಡೆದ ಸಭೆಯೊಂದರಲ್ಲಿ ಮನವಿ ಮಾಡಿಕೊಂಡಿದ್ದರು.
ಇಷ್ಟೇ ಅಲ್ಲದೆ ಅಫಘಾನಿಸ್ತಾನ ಕ್ರಿಕೆಟ್ ಮಂಡಳಿಯ ಸಿಇಒ ಅಸಾದುಲ್ಲಾ ಖಾನ್, ಭಾರತದಲ್ಲಿ ಡೆಹರಾಡುನ್ ಮತ್ತು ಗ್ರೇಟರ್ ನೊಯ್ಡಾ ಹೊರತಾಗಿ ಮತ್ತೊಂದು ಕ್ರೀಡಾಂಗಣವನ್ನು ಅಫಘಾನಿಸ್ಥಾನಕ್ಕೆ ಮನೆಯಂಗಣವಾಗಿ ನೀಡುವಂತೆ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಬಿಸಿಸಿಐ ಕಿಂಚಿತ್ತೂ ತಕರಾರು ತೆಗೆಯದೆ ಲಖನೌ ಕ್ರೀಡಾಂಗಣವನ್ನು ಅಫಘಾನಿಸ್ಥಾನಕ್ಕೆ ಮೂರನೇ ತವರೂರಾಗಿ ನೀಡುವ ಆಲೋಚನೆಯಲ್ಲಿದೆ.
"ಡೆಹರಾಡುನ್‌ನಲ್ಲಿ ಯಾವುದೇ 5 ಸ್ಟಾರ್ ಹೋಟೆಲ್‌ಗಳು ಇಲ್ಲದೇ ಇರುವ ಕಾರಣ ಪಂದ್ಯಗಳನ್ನು ಆಯೋಜಿಸುವುದಕ್ಕೆ ತೊಂದರೆಯಾಗಲಿದೆ. ಹೀಗಾಗಿ ಲಖನೌ ಕ್ರೀಡಾಂಗಣವನ್ನು ನೀಡಿದರೆ ನೆರವಾಗಲಿದೆ,'' ಎಂದು ಖಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇನ್ನು ಚೊಚ್ಚಲ ಆವೃತ್ತಿಯ ಅಫಘಾನಿಸ್ತಾನ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯನ್ನು ಕಳೆದ ವರ್ಷ ಅಕ್ಟೋಬರ್ 5-21ರವರೆಗೆ ಶಾರ್ಜಾದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ 5 ತಂಡಗಳು ಸ್ಪರ್ಧಿಸಿ ಮೊಹಮ್ಮದ್ ನಬಿ ಸಾರಥ್ಯದ ಬಾಲ್ಖ್ ಲೆಜಂಡ್ಸ್ ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications