ಪಾಪ ಬೂಮ್ರಾ! ಆಡಲು ಮೊಬೈಲ್ ಇಲ್ಲದೆ ಒಂಟಿಯಾದರು: ಟ್ವಿಟ್ಟರ್‌ನಲ್ಲಿ ತಮಾಷೆ

ನವದೆಹಲಿ, ನವೆಂಬರ್ 2: ಕಳೆದ ಅ.30ರಂದು ಬಿಸಿಸಿಐನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಮಾಡಿದ ಟ್ವೀಟ್ ಸಾಕಷ್ಟು ವೈರಲ್ ಆಗಿದೆ. ಅದರ ಬಗ್ಗೆ ಟ್ವಿಟ್ಟರ್‌ನಲ್ಲಿ ತಮಾಷೆಯ ಪೋಸ್ಟ್‌ಗಳು ಹರಿದಾಡುತ್ತಿವೆ.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವಾಡಲು ಮುಂಬೈಗೆ ತೆರಳಿದ್ದ ಭಾರತ ಕ್ರಿಕೆಟ್ ತಂಡದ ಆಟಗಾರರು ವಿಮಾನ ನಿಲ್ದಾಣದಲ್ಲಿ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆಡುವುದರಲ್ಲಿ ಮಗ್ನರಾಗಿ ಕಾಯುತ್ತಿರುವ ಚಿತ್ರವನ್ನು ಬಿಸಿಸಿಐ ಪ್ರಕಟಿಸಿತ್ತು.
'ಮುಂಬೈನಿಂದ ವಿಮಾನ ಹೊರಡುವ ಪ್ರಕಟಣೆ ಕಾಯುವ ವೇಳೆಗೆ ಕೆಲವರು ಬಹು ಜನಪ್ರಿಯ ಬಹು ಆಟಗಾರರ ಗೇಮ್‌ಅನ್ನು ಆಡುತ್ತಿದ್ದಾರೆ' ಎಂದು ಅದರಲ್ಲಿ ಬರೆಯಲಾಗಿತ್ತು.
ಜತೆಗೆ ನಮ್ಮ ಕ್ರಿಕೆಟಿಗರು ಅಷ್ಟು ಆಸಕ್ತಿಯಿಂದ ಆಡುತ್ತಿರುವ ಆಟ ಯಾವುದು ಇರಬಹುದು ಊಹಿಸಿ ಎಂದು ಕ್ರಿಕೆಟ್ ಪ್ರೇಮಿಗಳಿಗೆ ಸವಾಲನ್ನೂ ಒಡ್ಡಿತ್ತು.
ಈ ಫೋಟೊಗೆ ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿವೆ. ಹೆಚ್ಚಿನ ಟ್ವಿಟ್ಟಿಗರು ಅದನ್ನು ಪಬ್‌ಜಿ ಗೇಮ್ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಆದರೆ, ಈ ಟ್ವೀಟ್‌ಗಳಲ್ಲಿ ಹೆಚ್ಚಿನ ಟ್ವೀಟ್‌ಗಳು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿವೆ. ಇದಕ್ಕೆ ಕಾರಣ, ಮೊಬೈಲ್‌ನಲ್ಲಿ ಮುಳುಗಿರುವ ಎಲ್ಲರ ಮಧ್ಯೆ ಅಸಹಾಯಕರಂತೆ ಕುಳಿತಿರುವ ಜಸ್ ಪ್ರೀತ್ ಬೂಮ್ರಾ.
ಊಹೆ ಮಾಡಿ ನೋಡೋಣ
ಬಿಸಿಸಿಐ ಟ್ವೀಟ್ ಮಾಡಿದ್ದ ಈ ಪೋಸ್ಟ್‌ನಲ್ಲಿ ಎಲ್ಲರೂ ಬಹು-ಆಟಗಾರರ ಗೇಮ್ ಆಡುತ್ತಿದ್ದಾರೆ. ಅದು ಯಾವ ಆಟ ಇರಬಹುದು ಗೆಸ್ ಮಾಡಿ ಎಂದು ಬಿಸಿಸಿಐ ಕೇಳಿತ್ತು. ಆದರೆ, ಮೊಬೈಲ್‌ನಲ್ಲಿ ಆಡುತ್ತಿರುವ ಎಲ್ಲ ಆಟಗಾರರ ನಡುವೆ ಗಮನ ಸೆಳೆದಿದ್ದು ಕೈಯಲ್ಲಿ ಮೊಬೈಲ್ ಇಲ್ಲದೆ ಬೇಸರದಿಂದ ಕುಳಿತಿದ್ದ ವೇಗಿ ಜಸ್ ಪ್ರೀತ್ ಬೂಮ್ರಾ. ಬೂಮ್ರಾ ಅವರ ಮುಖ ಭಾವ ತಮಾಷೆಯ ವಸ್ತುವಾಗಿದೆ.
ಮೊಬೈಲ್ ಇಲ್ಲದ ಮಗು
ಕುಟುಂಬದ ಎಲ್ಲ ಸದಸ್ಯರೂ ಒಂದೆಡೆ ಸೇರುವ ಗೆಟ್ ಟುಗೆದರ್‌ನಲ್ಲಿ ಮೊಬೈಲ್ ಫೋನ್ ಹೊಂದಿರದ ಮಗುವಿನ ಸ್ಥಿತಿ ಬೂಮ್ರಾ ಅವರದ್ದಾಗಿದೆ ಎಂದು ಸೃಷ್ಟಿ ಎಂಬುವವರು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.
ಭಾರತ Vs ವೆಸ್ಟ್ ಇಂಡೀಸ್: ಹಲವು ಹೊಸ ದಾಖಲೆಗಳನ್ನು ಬರೆದ ಭಾರತ
ಸಣ್ಣಪುಟ್ಟ ವಿಚಾರಗಳು
ಈ ಎಲ್ಲ ಸಣ್ಣ ಪುಟ್ಟ ಆಟಗಳನ್ನು ಆಡುವುದಕ್ಕಿಂತ ತಾನು ದೊಡ್ಡವನು ಎಂಬುದನ್ನು ತೋರಿಸಿಕೊಳ್ಳುವಂತೆ ಬೂಮ್ರಾ ಕಾಣಿಸುತ್ತಿದ್ದಾರೆ ಎಂದು ದೇಬೋದಿಪ್ತ ಪೌಲ್ ಪೌಲ್ ಜೋಕ್ ಮಾಡಿದ್ದಾರೆ.
ಫೋನ್ ಚಾರ್ಜ್ ಮಾಡಲು ಮರೆತಾಗ
ನೀವು ಮೊಬೈಲ್ ಫೋನ್ ಚಾರ್ಜ್ ಮಾಡಲು ಮರೆತಾಗ ಮತ್ತು ಪವರ್ ಬ್ಯಾಂಕ್ ಕೂಡ ಕೊಂಡೊಯ್ಯಲು ಮರೆತಾಗ ಏನಾಗುತ್ತದೆಯೋ ಹಾಗೆ ಬೂಮ್ರಾ ಸ್ಥಿತಿ ಎಂದು ಮೃಗಾಂಗ್ ಗುಪ್ತಾ ಹಾಸ್ಯ ಮಾಡಿದ್ದಾರೆ.
ಮಿಂಚಿನ ವೇಗದಲ್ಲಿ ಸ್ಟಂಪಿಂಗ್, ಧೋನಿಗೆ ಸರಿಸಾಟಿ ಯಾರು ಇಲ್ಲ!
ಊಟಕ್ಕೆ ಹೋದಾಗ
ನಾನು ಊಟಕ್ಕೆ ಹೋದಾಗ ಜತೆಗಾರರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಮುಳುಗಿದ್ದಾಗ ಹೇಗಿರುತ್ತದೆಯೋ ಹಾಗೆ ಇದು ಎಂದು ಬೂಮ್ರಾ ಅವರ ಸ್ಥಿತಿಯನ್ನು ಫ್ರಾಂಟಿಕ್ ಫಾಕ್ಸ್ ಹೋಲಿಸಿದ್ದಾರೆ.
ಬೇಸರದ ಗಳಿಗೆ
ನಿಮ್ಮ ಸ್ನೇಹಿತರೆಲ್ಲರೂ ಪಬ್‌ಜಿ ಆಡುವುದರಲ್ಲಿ ಬಿಜಿಯಾಗಿದ್ದಾರೆ. ನಿಮ್ಮ ಮೊಬೈಲ್ ಬ್ಯಾಟರಿ ಕೇವಲ 2% ಇದ್ದಾಗ ಹೀಗೆ ಆಗುತ್ತದೆ ಎಂದು ಕ್ರಿಕ್ ಫಿಟ್ ವೆಬ್‌ಸೈಟ್ ಟ್ವೀಟ್ ಮಾಡಿದೆ.
ಬೂಮ್ರಾಗೆ ಬೋರ್
ಗೊಂದಲ, ಚಿಂತಾಕ್ರಾಂತ ಮತ್ತು ಬೇಸರಗೊಂಡಿರುವ ಬೂಮ್ರಾ, ಸ್ನೇಹಿತರ ಜತೆ ಊಟಕ್ಕೆ ಹೋದಾಗ ಎಲ್ಲರೂ ಹರಟೆ ಮಧ್ಯೆ ಟೇಬಲ್‌ಗಳ ಮೇಲೆ, ಸಿನಿಮಾ ಮಧ್ಯಂತರಗಳಲ್ಲಿ, ರೈಲು ಪ್ರಯಾಣಗಳಲ್ಲಿ ಮತ್ತು ಮೀಟಿಂಗ್ ಶುರುವಾಗುವ ಮುನ್ನ ನಾನು ಹೇಗಿರುತ್ತೇನೋ ಹಾಗೆಯೇ ಕಾಣಿಸುತ್ತಿದ್ದಾರೆ ಎಂದು ಯಾಸ್ಮಿನ್ ಎ. ಚೌಧುರಿ ಟ್ವೀಟ್ ಮಾಡಿದ್ದಾರೆ.
ನಾನೂ ಆಡುವುದಿಲ್ಲ
ಇದು ನಾನು ಮತ್ತು ನನ್ನ ಗೆಳೆಯರ ಗುಂಪು. ನಾವು ಭೇಟಿಯಾದಾಗ ನಾನು ಹೀಗೆಯೇ ಕೂರುವುದು. ಏಕೆಂದರೆ ನಾನು ಪಬ್‌ಜಿ ಆಡುವುದಿಲ್ಲ ಎಂದು ಸಾರ್ಕಾಸಮ್ ಹೆಸರಿನ ಖಾತೆ ತಮಾಷೆ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications