ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ Vs ವೆಸ್ಟ್ ಇಂಡೀಸ್: ಹಲವು ಹೊಸ ದಾಖಲೆಗಳನ್ನು ಬರೆದ ಭಾರತ

INDIA v/s WES INDIES :ಗೆದ್ದು ಹೊಸ ದಾಖಲೆ ಬರೆದ ಭಾರತ | Oneindia Kannada
India Vs West Indies 4th odi mumbai facts and statistics

ಮುಂಬೈ, ಅಕ್ಟೋಬರ್ 30: ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮಹತ್ವದ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ 224 ರನ್‌ಗಳ ಅಂತರದ ಭಾರಿ ಗೆಲುವು ದಾಖಲಿಸಿದೆ.

ರೋಹಿತ್ ಶರ್ಮಾ- ಅಂಬಟಿ ರಾಯುಡು ಅವರ ಅಮೋಘ ಇನ್ನಿಂಗ್ಸ್ ನೆರವಿನಿಂದ ಮತ್ತು ಬೌಲರ್‌ಗಳ ನಿಖರ ದಾಳಿಯಿಂದ ಭಾರತಕ್ಕೆ ಈ ಬೃಹತ್ ಗೆಲುವು ಒಲಿದಿದೆ. ಬ್ಯಾಟಿಂಗ್‌ನಲ್ಲಿ ಮಿಂಚಿದ ರೋಹಿತ್, ಫೀಲ್ಡಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದರು.

ಭಾರತ-ವಿಂಡೀಸ್: 21ನೇ ಏಕದಿನ ಶತಕ, ಹೊಸ ದಾಖಲೆ ಬರೆದ ರೋ'ಹಿಟ್'!ಭಾರತ-ವಿಂಡೀಸ್: 21ನೇ ಏಕದಿನ ಶತಕ, ಹೊಸ ದಾಖಲೆ ಬರೆದ ರೋ'ಹಿಟ್'!

ಅಪರೂಪಕ್ಕೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ವಿರಾಟ್ ಕೊಹ್ಲಿ, ಕೀರನ್ ಪೊವೆಲ್ ಅವರನ್ನು ರನೌಟ್ ಮಾಡಿದ ಬಗೆ, ಶಾಯ್ ಹೋಪ್ ಅವರನ್ನು ಡೈರೆಕ್ಟ್ ಹಿಟ್ ಮೂಲಕ ಕುಲದೀಪ್ ಯಾದವ್ ಪೆವಿಲಿಯನ್‌ಗೆ ಮರಳಿಸಿದ್ದು, ಯುವ ವೇಗಿ ಖಲೀಲ್ ಅಹ್ಮದ್ ಚುರುಕಿನ ಬೌಲಿಂಗ್ ಎಲ್ಲವೂ ಭಾರತದ ಗೆಲುವನ್ನು ಸುಗಮವಾಗಿಸಿದವು.

ವೆಸ್ಟ್ ಇಂಡೀಸ್ ತಂಡದಲ್ಲಿ ಹಿಂದಿನ ಪಂದ್ಯಗಳಲ್ಲಿ ಅಬ್ಬರಿಸಿ ಭಾರತದ ಬೌಲಿಂಗ್ ದಾಳಿಯನ್ನು ಚೆಂಡಾಡಿದ್ದ ಶಾಯ್ ಹೋಪ್, ಶಿಮ್ರೊನ್ ಹೆಟ್ಮೇರ್ ಬೇಗನೆ ಔಟಾದರೆ, ನಾಯಕ ಜೇಸನ್ ಹೋಲ್ಡರ್ ಏಕಾಂಗಿಯಾಗಿ ಹೋರಾಟ ನಡೆಸಿ ಅರ್ಧ ಶತಕದೊಂದಿಗೆ ಅಜೇಯರಾಗಿ ಉಳಿದರು.

ರೋಹಿತ್, ರಾಯುಡು ಶತಕ: ವಿಂಡೀಸ್ ವಿರುದ್ಧ ಭಾರತಕ್ಕೆ 224 ರನ್ ಜಯರೋಹಿತ್, ರಾಯುಡು ಶತಕ: ವಿಂಡೀಸ್ ವಿರುದ್ಧ ಭಾರತಕ್ಕೆ 224 ರನ್ ಜಯ

ಈ ಪಂದ್ಯ ಕೆಲವು ವಿಶಿಷ್ಟ ಅಂಕಿ ಅಂಶದ ದಾಖಲೆಗಳನ್ನು ಸೃಷ್ಟಿಸಿದೆ. ಅಂತಹ ಕೆಲವು ಅಂಕಿ ಅಂಶಗಳನ್ನು ನೋಡೋಣ.

ಭಾರತದ ದೊಡ್ಡ ಗೆಲುವುಗಳು

ಭಾರತದ ದೊಡ್ಡ ಗೆಲುವುಗಳು

257 vs ಬರ್ಮುಡಾ, ಪೋರ್ಟ್‌ ಆಫ್ ಸ್ಪೇನ್, 2007
256 vs ಹಾಂಕಾಂಗ್, ಕರಾಚಿ, 2008
224 vs ವೆಸ್ಟ್ ಇಂಡೀಸ್, ಮುಂಬೈ, 2018 *
200 vs ಬಾಂಗ್ಲಾದೇಶ, ಢಾಕಾ, 2003
190 vs ನ್ಯೂಜಿಲೆಂಡ್, ವಿಜಾಗ್, 2016

ಎದುರಾಳಿ ತಂಡಕ್ಕಿಂತ ವೈಯಕ್ತಿಕ ಗರಿಷ್ಠ ರನ್

ಎದುರಾಳಿ ತಂಡಕ್ಕಿಂತ ವೈಯಕ್ತಿಕ ಗರಿಷ್ಠ ರನ್

ಸಚಿನ್ ತೆಂಡೂಲ್ಕರ್ (152) v ನಮೀಬಿಯಾ (130), ಪೀಟರ್ಸ್ ಬರ್ಗ್, 2003
ಯುವರಾಜ್ ಸಿಂಗ್ (102*) v ಬಾಂಗ್ಲಾದೇಶ (76), ಢಾಕಾ, 2003
ರೋಹಿತ್ ಶರ್ಮಾ (264) v ಶ್ರೀಲಂಕಾ (251),ಕೋಲ್ಕತ್ತಾ, 2014
ರೋಹಿತ್ ಶರ್ಮಾ (162) v ವೆಸ್ಟ್ ಇಂಡೀಸ್ (153), ಮುಂಬೈ, 2018*
ವೆಸ್ಟ್ ಇಂಡೀಸ್ ವಿರುದ್ಧ ರೋಹಿತ್ ಶರ್ಮಾ 9 ರನ್‌ಗಳಿಂದ ಜಯಗಳಿಸಿದ್ದಾರೆ ಎಂಬ ತಮಾಷೆಯ ಸಂದೇಶಗಳು ಹರಿದಾಡುತ್ತಿವೆ. ಬ್ಯಾಟ್ಸ್‌ಮನ್‌ ಗಳಿಸಿದ ವೈಯಕ್ತಿಕ ಗರಿಷ್ಠ ರನ್‌ಗಿಂತಲೂ ಎದುರಾಳಿ ತಂಡ ಕಡಿಮೆ ಮೊತ್ತ ದಾಖಲಿಸಿದ ಇಂತಹ ಅನೇಕ ನಿದರ್ಶನಗಳು ನಡೆದಿವೆ. ಅದರ ಕೆಲವು ಉದಾಹರಣೆಗಳು ಇಲ್ಲಿವೆ.

ಚಾಲ್ತಿ ಆಟಗಾರರಲ್ಲಿ ಅತ್ಯಧಿಕ ರನ್: ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ

ವೆಸ್ಟ್ ಇಂಡೀಸ್ ವಿರುದ್ಧ ಗರಿಷ್ಠ ರನ್

ವೆಸ್ಟ್ ಇಂಡೀಸ್ ವಿರುದ್ಧ ಗರಿಷ್ಠ ರನ್

219 ವೀರೇಂದ್ರ ಸೆಹ್ವಾಗ್, ಇಂದೋರ್, 2011
162 ರೋಹಿತ್ ಶರ್ಮಾ, ಮುಂಬೈ, 2018
157* ವಿರಾಟ್ ಕೊಹ್ಲಿ, ವಿಜಾಗ್, 2018
152* ರೋಹಿತ್ ಶರ್ಮಾ, ಗುವಾಹಟಿ, 2018
141* ಸಚಿನ್ ತೆಂಡೂಲ್ಕರ್, ಸಿಂಗಪುರ, 2006
140 ವಿರಾಟ್ ಕೊಹ್ಲಿ, ಗುವಾಹಟಿ, 2018
ಇದರಲ್ಲಿ ನಾಲ್ಕು ಶತಕಗಳು ಇದೇ ಸರಣಿಯಲ್ಲಿ ಬಂದಿದೆ.

ಏಕದಿನದಲ್ಲಿ ಅತಿ ಹೆಚ್ಚು 150+ ರನ್

ಏಕದಿನದಲ್ಲಿ ಅತಿ ಹೆಚ್ಚು 150+ ರನ್

7 ರೋಹಿತ್ ಶರ್ಮಾ
5 ಸಚಿನ್ ತೆಂಡೂಲ್ಕರ್/ ಡೇವಿಡ್ ವಾರ್ನರ್
4 ಸನತ್ ಜಯಸೂರ್ಯ/ ಕ್ರಿಸ್ ಗೇಲ್/ ಹಶೀಮ್ ಆಮ್ಲಾ/ ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ ಒಂದೇ ಸರಣಿಯಲ್ಲಿ 150+ ರನ್ ಬಾರಿಸಿದ ಎರಡನೆಯ ಆಟಗಾರ ಎನಿಸಿದ್ದಾರೆ. ಜಿಂಬಾಬ್ವೆಯ ಹ್ಯಾಮಿಲ್ಟನ್ ಮಸಕಜ 2009ರಲ್ಲಿ ಕೀನ್ಯಾ ವಿರುದ್ಧ ಎರಡು ಬಾರಿ 150+ ರನ್ ಬಾರಿಸಿದ್ದರು.

#4 ಬ್ಯಾಟ್ಸ್‌ಮನ್ ಶತಕ

#4 ಬ್ಯಾಟ್ಸ್‌ಮನ್ ಶತಕ

104* ಮನೀಶ್ ಪಾಂಡೆ v ಆಸ್ಟ್ರೇಲಿಯಾ, ಸಿಡ್ನಿ, 2016
150 ಯುವರಾಜ್ ಸಿಂಗ್ v ಇಂಗ್ಲೆಂಡ್, ಕಟಕ್, 2017
100* ಅಂಬಟಿ ರಾಯುಡು v ವೆಸ್ಟ್ ಇಂಡೀಸ್, ಮುಂಬೈ, 2018
2015ರ ವಿಶ್ವಕಪ್ ಬಳಿಕ ಭಾರತ ತಂಡದಲ್ಲಿ ನಾಲ್ಕನೆಯ ಕ್ರಮಾಂಕದ ಆಟಗಾರ ಗಳಿಸಿ ಮೂರನೇ ಶತಕವಿದು.

ಕಡಿಮೆ ಇನ್ನಿಂಗ್ಸ್‌ಗಳಲ್ಲಿ 21ನೇ ಏಕದಿನ ಶತಕ

ಕಡಿಮೆ ಇನ್ನಿಂಗ್ಸ್‌ಗಳಲ್ಲಿ 21ನೇ ಏಕದಿನ ಶತಕ

116 ಹಶೀಮ್ ಆಮ್ಲಾ
138 ವಿರಾಟ್ ಕೊಹ್ಲಿ
183 ಎಬಿ ಡಿವಿಲಿಯರ್ಸ್
186 ರೋಹಿತ್
200 ಸಚಿನ್ ತೆಂಡೂಲ್ಕರ್
217 ಸೌರವ್ ಗಂಗೂಲಿ

ಐಪಿಎಲ್ ಕ್ರಿಕೆಟ್: ಆರ್‌ಸಿಬಿ ತಂಡ ಸೇರಿಕೊಂಡ ಆಸ್ಟ್ರೇಲಿಯಾದ ಆಲ್‌ರೌಂಡರ್

ಏಕದಿನದಲ್ಲಿ ಭಾರತದ ಪರ ಗರಿಷ್ಠ ಸಿಕ್ಸರ್

ಏಕದಿನದಲ್ಲಿ ಭಾರತದ ಪರ ಗರಿಷ್ಠ ಸಿಕ್ಸರ್

211 ಎಂಎಸ್ ಧೋನಿ
196 ರೋಹಿತ್ ಶರ್ಮಾ *
195 ಸಚಿನ್ ತೆಂಡೂಲ್ಕರ್
189 ಸೌರವ್ ಗಂಗೂಲಿ
153 ಯುವರಾಜ್ ಸಿಂಗ್

ಆರಂಭಿಕ ಜೋಡಿಯ ಜತೆಯಾಟ

ಆರಂಭಿಕ ಜೋಡಿಯ ಜತೆಯಾಟ

6609 ಸಚಿನ್ ತೆಂಡೂಲ್ಕರ್ - ಸೌರವ್ ಗಂಗೂಲಿ
3920 ರೋಹಿತ್ ಶರ್ಮಾ - ಶಿಖರ್ ಧವನ್
3919 ಸಚಿನ್ ತೆಂಡೂಲ್ಕರ್ - ವೀರೇಂದ್ರ ಸೆಹ್ವಾಗ್
1870 ಗೌತಮ್ ಗಂಭೀರ್ - ವೀರೇಂದ್ರ ಸೆಹ್ವಾಗ್
1680 ಸುನಿಲ್ ಗವಾಸ್ಕರ್ - ಕೆ ಶ್ರೀಕಾಂತ್

ವೆಸ್ಟ್ ಇಂಡೀಸ್‌ಗೆ ದೊಡ್ಡ ಅಂತರದ ಸೋಲು

ವೆಸ್ಟ್ ಇಂಡೀಸ್‌ಗೆ ದೊಡ್ಡ ಅಂತರದ ಸೋಲು

257 vs ದಕ್ಷಿಣ ಆಫ್ರಿಕಾ, ಸಿಡ್ನಿ, 2015
224 vs ಭಾರತ, ಮುಂಬೈ, 2018 *
209 vs ದಕ್ಷಿಣ ಆಫ್ರಿಕಾ, ಕೇಪ್ ಟೌನ್, 2004
204 vs ನ್ಯೂಜಿಲೆಂಡ್, ಕ್ರೈಸ್ಟ್ ಚರ್ಚ್, 2017
186 vs ಇಂಗ್ಲೆಂಡ್, ಬ್ರಿಡ್ಜ್ ಟೌನ್, 2017

Story first published: Tuesday, October 30, 2018, 12:48 [IST]
Other articles published on Oct 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X