Pahalgam Terror Attack: ಪಹಲ್ಗಾಮ್ ದಾಳಿ: ಬಿಸಿಸಿಐ ದೊಡ್ಡ ನಿರ್ಧಾರ?
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಅಲ್ಲಿಯ ಜನರ ಜೀವನದ ಜೊತೆ ಆಟವನ್ನು ಆಡಿದೆ. ಅಲ್ಲಿಗೆ ಬಂದಿದ್ದ ಪ್ರಯಾಣಿಕರ ಜೀವವನ್ನು ತೆಗೆದುರುವ ಉಗ್ರರ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ. ಈಗ ಕ್ರಿಕೆಟ್ ಅಂಗಳದಲ್ಲೂ ಈ ದಾಳಿಯ ಸೌಂಡ್ ಕೇಳಿ ಬರುತ್ತಿದೆ. ಪಿಎಸ್‌ಎಲ್ ನೇರ ಪ್ರಸಾರದ ಡಿಜಿಟಲ್ ಹಕ್ಕನ್ನು ಹೊಂದಿದ್ದ ಫ್ಯಾನ್ ಕೋಡ್ ಪಾಕಿಸ್ತಾನ ಸೂಪರ್ ಲೀಗ್ ಪ್ರಸಾರದಿಂದ ಹಿಂದೆ ಸರೆದಿದೆ. ಡ್ರೀಮ್ ಇಲೆವೆನ್ ಕಂಪನಿ ಸಹ ತನ್ನ ಆಪ್‌ನಲ್ಲಿ ಪಿಎಸ್‌ಎಲ್‌ಗೆ ಸಪೋರ್ಟ್ ಮಾಡುವುದಿಲ್ಲ ಎಂದು ತಿಳಿಸಿದೆ. ಈ ಮಧ್ಯೆ ಇನ್ನೊಂದು ದೊಡ್ಡ ಸುದ್ದಿಯೊಂದು ಬರುತ್ತಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಸರಣಿಗಳು ನಡೆಯದೇ ವರ್ಷಗಟ್ಟಲೇ ಕಳೆದಿವೆ. ಈ ಎರಡೂ ತಂಡಗಳು ಈಗ ಐಸಿಸಿ ಹಾಗೂ ಏಷ್ಯನ್ ಕಪ್ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿ ಆಗುತ್ತಿವೆ. ಈ ವೇಳೆ ಭಾರತ ಹಾಗೂ ಪಾಕಿಸ್ತಾನ ತಂಡಗಳನ್ನು ಒಂದೇ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಈ ಪಂದ್ಯವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ರು. ಆದರೆ ಈ ಬಗ್ಗೆ ಬಿಸಿಸಿಐ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.

ಮುಂಬರುವ ಐಸಿಸಿ ಟೂರ್ನಿಗಳಲ್ಲಿ ಒಂದೇ ಗುಂಪಿನಲ್ಲಿ ಇಡಬಾರದು ಎಂದು ಕೋರಿ ಬಿಸಿಸಿಐ, ಐಸಿಸಿಗೆ ಪತ್ರವನ್ನು ಬರೆದಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಈ ತೀರ್ಮಾನವನ್ನು ತೆಗೆದುಕೊಳ್ಳುವಲ್ಲಿಐಸಿಸಿ ಸಫಲವಾದಲ್ಲಿ ದೊಡ್ಡ ನಿರ್ಧಾರವಾಗಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ. ಆದ್ರೆ ಈ ವಿಷಯ ಎಷ್ಟು ಸತ್ಯಕ್ಕೆ ಹತ್ತಿರವಾಗಿದೆ ಎಂಬುದು ಇನ್ನು ಬಹಿರಂಗವಾಗಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಏನೇ ಕ್ರಮ ಕೈಗೊಂಡಲ್ಲಿ ಅದಕ್ಕೆ ಬಿಸಿಸಿಐ ಬಧ್ಧವಾಗಿರುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ರಾಜೀವ್ ಶುಕ್ಲಾ ಈಗಾಗಲೇ ಹೇಳಿದ್ದಾರೆ.
ಐಸಿಸಿ ಈವೆಂಟ್ ಯಾವಾಗ?
ಮುಂದಿನ ವರ್ಷ ಭಾರತ ಐಸಿಸಿ ಟಿ20 ವಿಶ್ವಕಪ್‌ಗೆ ಆತಿಥ್ಯವನ್ನು ವಹಿಸಲಿದೆ. ಈವರ್ಷದ ಕೊನೆಯಲ್ಲಿ ಭಾರತದಲ್ಲಿ ಮಹಿಳಾ ವಿಶ್ವಕಪ್ ನಡೆಯಲಿದೆ. ಈ ವೇಳೆ ಮಹಿಳಾ ವಿಶ್ವಕಪ್ ವೇಳೆ ಯಾವುದೇ ಗುಂಪುಗಳಿಲ್ಲ. ಎಲ್ಲ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಆಗಲಿವೆ. ಪಾಕಿಸ್ತಾನ ತಂಡ ತನ್ನ ಪಂದ್ಯಗಳನ್ನು ಎಲ್ಲಿ ಆಡಬೇಕೆಂದು ಇನ್ನೂ ನಿರ್ಧರಿಸಲಾಗಿಲ್ಲ.

ಭಾರತ ಇದೇ ವರ್ಷದ ಸೆಪ್ಟಂಬರ್‌ನಲ್ಲಿ ಏಷ್ಯಾಕಪ್ ಆಯೋಜಿಸುವ ಸಾಧ್ಯತೆ ಇದೆ. ಈ ಟೂರ್ನಿ ತಟಸ್ಥ ಸ್ಥಳದಲ್ಲಿ ಆಯೋಜಿಸುವ ಸಾಧ್ಯತೆ ಇದೆ. ಈ ಪಂದ್ಯಾವಳಿಯನ್ನು ಶ್ರೀಲಂಕಾ ಅಥವಾ ದುಬೈನಲ್ಲಿ ಆಯೋಜಿಸಬಹುದು ಎಂದು ನಂಬಲಾಗಿದೆ.
ತಟಸ್ಥ ಸ್ಥಳದಲ್ಲಿ ಪಂದ್ಯ
ಇತ್ತೀಚಿಗೆ ಪಾಕ್ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಿತ್ತು. ಈ ಟೂರ್ನಿಯನ್ನು ಆಡಲು ಭಾರತ ಪಾಕ್‌ಗೆ ಪ್ರವಾಸವನ್ನು ಬೆಳೆಸಿರಲಿಲ್ಲ. ಈ ವೇಳೆ ಪಿಸಿಬಿ ಹಾಗೂ ಐಸಿಸಿ ನಡುವೆ ಚರ್ಚೆಗಳು ನಡೆದಿದ್ದವು. ಅಲ್ಲದೆ ಭಾರತ ತನ್ನ ಎಲ್ಲ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಿತ್ತು. ಅಲ್ಲದೆ ಉಭಯ ದೇಶಗಳು ಐಸಿಸಿ ಟೂರ್ನಿಯನ್ನು ಆಯೋಜಿಸದರೆ, ಭಾರತ ಹಾಗೂ ಪಾಕ್ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಲು ನಿರ್ಧರಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications