
ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ದಿಗ್ಗಜ ಆಟಗಾರ ಕಪಿಲ್ ದೇವ್‌ರ ನಾಯಕತ್ವದ ಗುಣಗಳನ್ನ ಅನುಸರಿಸಿ ಎಂದು ಭಾರತದ ಮಾಜಿ ಆಟಗಾರ ಬಲ್ವಿಂದರ್ ಸಿಂಗ್ ಸಂದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಸಲಹೆ ನೀಡಿದ್ದಾರೆ.
ಟೀಂ ಇಂಡಿಯಾ ಲಿಮಿಟೆಡ್ ಓವರ್ ನಾಯಕ ರೋಹಿತ್ ಶರ್ಮಾ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಡುವೆ ಎಲ್ಲವೂ ಸರಿಯಿಲ್ಲವೆಂಬಂತೆ ವರದಿ ಬಿತ್ತರವಾದ ಬಳಿಕ, ಕೊಹ್ಲಿ ಸ್ವತಃ ಇತ್ತೀಚೆಗೆ ನಮ್ಮ ನಡುವೆ ಆ ತರಹದ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲವೆಂದು ಸ್ಪಷ್ಟಪಡಿಸಿದ್ರು.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸದ್ಯ ಟೀಂ ಇಂಡಿಯಾದ ಉಭಯ ಫಾರ್ಮೆಟ್ ನಾಯಕರಾಗಿದ್ದು, ದಿಗ್ಗಜ ಕಪಿಲ್ ದೇವ್ ಅವರ ಹೆಜ್ಜೆಗಳನ್ನು ಅನುಸರಿಸಲು ಸಲಹೆ ನೀಡಿದ್ದಾರೆ. 1983ರ ವಿಶ್ವಕಪ್‌ನಲ್ಲಿ ಭಾರತ ತಂಡವನ್ನ ಅಮೋಘವಾಗಿ ಮುನ್ನಡೆಸಿದ್ದ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತವು ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನ ಮಣಿಸಿತು. ಅದಾಗಲೇ ವೆಸ್ಟ್ ಇಂಡೀಸ್ ಎರಡು ಬಾರಿ ವಿಶ್ವ ಚಾಂಪಿಯನ್ ಆಗುವ ಮೂಲಕ ಪ್ರಬಲ ತಂಡವಾಗಿತ್ತು.
ಕಪಿಲ್ ದೇವ್ ಅವರ ಕ್ರಿಕೆಟ್ ಹೆಗ್ಗುರುತನ್ನ ನೋಡಿ ಕಲಿಯಿರಿ ಎಂದು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಹೇಳಿದರು. ಮೆನ್ ಇನ್ ಬ್ಲೂ ಮುಂದಿನ ಎರಡು ವರ್ಷಗಳಲ್ಲಿ ಎರಡೂ ವಿಶ್ವಕಪ್‌ಗಳನ್ನು ಗೆಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು.
"ಕಪಿಲ್ ಅವರಂತೆ ಬ್ಯಾಟ್ ಮಾಡಿ. ಕಪಿಲ್ ನಂತಹ ಫೀಲ್ಡಿಂಗ್ ಮಾಡಿ. ಕಪಿಲ್‌ರ ನಾಯಕತ್ವ ಗುಣಗಳನ್ನು ಅನುಸರಿಸಿದ್ರೆ ನೀವು ಮುಂದಿನ ವರ್ಷ ಟಿ20 ವಿಶ್ವಕಪ್ ಮತ್ತು 2023ರಲ್ಲಿ 50 ಓವರ್‌ಗಳ ವಿಶ್ವಕಪ್ ಅನ್ನೂ ಗೆಲ್ಲಬಹುದು ಎಂದು ಸಂಧು ಝೀ ನ್ಯೂಸ್‌ನಲ್ಲಿ ಹೇಳಿದ್ದಾರೆ.
1983ರ ವಿಶ್ವಕಪ್ ವೇಳೆಯಲ್ಲಿ ವಿವಾದಗಳ ಕುರಿತಾಗಿ ಹೇಗೆ ತಪ್ಪಿಸಿಕೊಳ್ಳುತ್ತಿದ್ರಿ ಎಂದು ಕೇಳಿದ ಪ್ರಶ್ನೆಗೆ, ಪ್ರತಿಕ್ರಿಯಿಸಿದ ಸಂದು, ಆಗ ಸಾಮಾಜಿಕ ಜಾಲತಾಣಗಳು ಇಲ್ಲದ ಕಾರಣ ವಿವಾದ ತಪ್ಪಿಸುವುದು ಸುಲಭವಾಯಿತು. "ಅಂದಿನ ಕಾಲದಲ್ಲಿ ನಮ್ಮಲ್ಲಿ ಸೋಷಿಯಲ್ ಮೀಡಿಯಾ ಇರಲಿಲ್ಲ. ವಿವಾದಗಳು ಕ್ರೀಡಾಪಟುಗಳ ಭಾಗವಾಗಿದೆ. ಒಬ್ಬನು ತನ್ನ ಆಟವನ್ನು ಆಡುತ್ತಾನೆ ಮತ್ತು ಮುಂದೆ ಸಾಗುತ್ತಿರುತ್ತಾನೆ. ಆದರೆ ಕಥೆಗಳನ್ನು ಮಾಡುವ ಜನರಿದ್ದಾರೆ'' ತಲೆಕೆಡಿಸಿಕೊಳ್ಳಬಾರದು ಎಂದು ಉತ್ತರಿಸಿದ್ದಾರೆ.
ಇತ್ತೀಚಿನ ಭಾರೀ ಹೈವೋಲ್ಟೇಜ್ ಚಿತ್ರ 83 ರಲ್ಲಿ, ನಟ ರಣವೀರ್ ಸಿಂಗ್ ಭಾರತದ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಪಂಜಾಬಿ ನಟ, ಆಮಿ ವಿರ್ಕ್, ಈ ಮಧ್ಯೆ, ಬಹುನಿರೀಕ್ಷಿತ ಚಿತ್ರದಲ್ಲಿ ಸಂಧು ಪಾತ್ರವನ್ನು ನಿರ್ವಹಿಸಿದ್ದಾರೆ.