Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನಿ ಪದಾರ್ಪಣೆಗೂ ಮುನ್ನವೇ ಸಚಿನ್ ಬ್ಯಾಟ್‌ನಿಂದ ಸಿಡಿದಿತ್ತು ಹೆಲಿಕಾಪ್ಟರ್ ಶಾಟ್: ವಿಡಿಯೋ

Before MS Dhonis international debut, Sachin Tendulkar played Helicopter shot

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ. ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ಮೂಲಕ ತನ್ನದೇ ಆದ ಶ್ರೇಷ್ಠ ಕೊಡುಗೆಯನ್ನು ನೀಡಿದ್ದಾರೆ ಎಂಎಸ್ ಧೋನಿ. ಅದರಲ್ಲೂ ಧೋನಿ ತನ್ನ ಹೆಲಿಕಾಫ್ಟರ್ ಶಾಟ್ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದರು.

ಧೋನಿಯ ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರಗಳಿದ್ದವು. ಅದರಲ್ಲಿ ಹೆಲಿಕಾಫ್ಟರ್ ಶಾಟ್ ಧೋನಿಯ ಸಿಗ್ನೇಚರ್ ಶಾಟ್ ಎನಿಸಿಕೊಂಡಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗಿಗಳು ಎಸೆಯುತ್ತಿದ್ದ ಭಯಾನಕ ಯಾರ್ಕರ್ ಎಸೆತಗಳಿಗೆ ಹೆಲಿಕಾಪ್ಟರ್ ಶಾಟ್ ಮೂಲಕ ಧೋನಿ ಉತ್ತರವನ್ನು ನೀಡುತ್ತಿದ್ದರು. ಲಸಿತ್ ಮಲಿಂಗ, ಜೇಮ್ಸ್ ಆಂಡರ್ಸನ್, ಜೆಮ್ಸ್ ಪಾಲ್ಕ್‌ನರ್ ಅವರಂತಾ ಬೌಲರ್‌ಗಳಿಗೂ ಕೂಡ ಧೋನಿಯ ಈ ವಿಶೇಷ ಶಾಟ್‌ನ ರುಚಿ ತೋರಿಸಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಹೊಡೆತವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ಹಾಗೂ ಜನಪ್ರಿಯ ಗೊಳಿಸಿದ ಕೀರ್ತಿ ಎಂಎಸ್ ಧೋನಿಗೆ ಸಲ್ಲುತ್ತದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಹೆಲಿಕಾಫ್ಟರ್ ಶಾಟ್ ಮೊದಲಿಗೆ ಬಾರಿಸಿದ್ದು ಎಂಎಸ್ ಧೋನಿ ಅಲ್ಲ. ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಗೂ ಮುನ್ನವೇ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೆಲಿಕಾಪ್ಟರ್ ಶಾಟ್ ಬಾರಿಸಿದ್ದರು.

ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಕಿರ್ಟ್ಲೆ ಎಸೆತಕ್ಕೆ ಸಚಿನ್ ತೆಂಡೂಲ್ಕರ್ ಹೆಲಿಕಾಫ್ಟರ್ ಶಾಟ್ ಮೂಲಕ ಡೀಪ್ ಮಿಡ್ ವಿಕೆಟ್ ಭಾಗದಲ್ಲಿ ಬೌಂಡರಿಗೆ ದಾರಿ ತೋರಿಸಿದ್ದರು. ಸಚಿನ್ ಬಾರಿಸಿದ ಈ ಹೆಲಿಕಾಫ್ಟರ್ ಶಾಟ್‌ನ ವಿಡಿಯೋದಲ್ಲಿ ಕಾಲ ಕೆಳಗೆ ಬಂದ ಚೆಂಡನ್ನು ಧೋನಿ ಶೈಲಿಯಲ್ಲಿಯೇ ಸಚಿನ್ ಬಾರಿಸಿ ಬೌಂಡರು ಗಿಟ್ಟಿಸಿಕೊಂಡಿದ್ದರು.

ಈ ಹೆಲಿಕಾಪ್ಟರ್ ಶಾಟ್‌ಅನ್ನು ಸಚಿನ್ ತೆಂಡೂಲ್ಕರ್ 2002ರ ಪ್ರಖ್ಯಾತ ನಾಟ್‌ವೆಸ್ಟ್ ಸರಣಿಯ ಐದನೇ ಪಂದ್ಯದಲ್ಲಿ ಭಾರಿಸಿದ್ದಾರೆ. ಎಂಎಸ್ ಧೋನಿ 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದರು.

Story first published: Monday, July 12, 2021, 19:20 [IST]
Other articles published on Jul 12, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+