ಮುಲ್ತಾನ್ ಸ್ಟೇಡಿಯಂನಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಉಭಯ ತಂಡಗಳು ಅದ್ಭುತ ಪ್ರದರ್ಶನ ನೀಡಿದ್ದು, ಮುನ್ನಡೆ ಸಾಧಿಸಲು ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.
ಬುಧವಾರ ಎರಡನೇ ದಿನದಂದು ಪಾಕಿಸ್ತಾನ 366 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 239 ರನ್ ಕಲೆ ಹಾಕಿದೆ. ಇಂಗ್ಲೆಂಡ್ ಇನ್ನು 127 ರನ್‌ಗಳ ಇನಿಂಗ್ಸ್ ಹಿನ್ನಡೆ ಅನುಭವಿಸಿದೆ. ಇತ್ತ ಪಾಕಿಸ್ತಾನ ಮುನ್ನಡೆ ಸಾಧಿಸಿಲು ಕೇವಲ ನಾಲ್ಕು ವಿಕೆಟ್‌ಗಳನ್ನು ಪಡೆಯಬೇಕಾಗಿದೆ.

ಪಾಕಿಸ್ತಾನ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಆರಂಭಿಕ ಬ್ಯಾಟರ್ ಬೆನ್ ಡಕೆಟ್ ಅವರು ಅದ್ಭುತ ಶತಕ ಬಾರಿಸಿದ್ದಾರೆ. ಈ ಶತಕದೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಡಕೆಟ್ 129 ಎಸೆತೆಗಳಲ್ಲಿ 16 ಬೌಂಡರಿಗಳ ನೆರವಿನಿಂದ 114 ರನ್ ಗಳಿಸಿ ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಬೆನ್ ಡಕೆಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2000 ರನ್ ಗಳಿಸಿದ ಆಟಗಾರರ ಎನಿಸಿಕೊಂಡಿದ್ದಾರೆ. 2000 ಟೆಸ್ಟ್ ರನ್‌ಗಳ ಮೈಲಿಗಲ್ಲನ್ನು ತಲುಪಲು ಡಕೆಟ್‌ಗೆ 88 ರನ್‌ಗಳ ಅಗತ್ಯವಿತ್ತು. ಆದರೆ, ಪಾಕಿಸ್ತಾನ ವಿರುದ್ಧ ಶತಕ ಗಳಿಸುವ ಮೂಲಕ 2293 ಎಸೆತಗಳಲ್ಲಿ ಈ ಮೈಲಿಗಲ್ಲು ದಾಟಿದ್ದಾರೆ. ಇದಲ್ಲದೆ, ಡಕೆಟ್ ಕೇವಲ 47 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಇದಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2000 ರನ್ ಗಳಿಸಿದ ಆಟಗಾರನ ದಾಖಲೆ ನ್ಯೂಜಿಲೆಂಡ್‌ನ ವೇಗದ ಬೌಲರ್ ಟಿಮ್ ಸೌಥಿ ಅವರ ಹೆಸರಿನಲ್ಲಿತ್ತು. ಸೌಥಿ ಈ ಸಾಧನೆ ಮಾಡಲು 2418 ಎಸೆತಗಳನ್ನು ತೆಗೆದುಕೊಂಡಿದ್ದರು.
ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ನಲ್ಲಿ ಡಕೆಟ್, 1500 ರನ್‌ಗಳ ಗಡಿಯನ್ನು ದಾಟಿದ್ದಾರೆ. ಇದುವರೆಗೆ ಈ ಸಾಧನೆ ಮಾಡಿದ ಏಳು ಇಂಗ್ಲೆಂಡ್ ಆಟಗಾರರ ಕ್ಲಬ್‌ಗೆ ಸೇರಿಕೊಂಡಿದ್ದಾರೆ.
ಬೆನ್ ಡಕೆಟ್ ತಮ್ಮ 28ನೇ ಟೆಸ್ಟ್ ಪಂದ್ಯ ಮತ್ತು 51ನೇ ಇನ್ನಿಂಗ್ಸ್‌ನಲ್ಲಿ 42.20 ಸರಾಸರಿಯನ್ನು ಕಾಯ್ದುಕೊಂಡಿದ್ದಾರೆ. ಇದು ಅವರ ಟೆಸ್ಟ್ ಕ್ರಿಕೆಟ್‌ನ ಫಾರ್ಮ್ ಬಗ್ಗೆ ಹೇಳುತ್ತದೆ. ಇದುವರಗೆ ಇಂಗ್ಲೆಂಡ್ ಪರ ಅವರು ನಾಲ್ಕನೇ ಶತಕ ಮತ್ತು 11 ಅರ್ಧ ಶತಕಗಳನ್ನು ಗಳಿಸಿದ್ದಾರೆ.