PAK vs ENG Test: ಇನಿಂಗ್ಸ್ ಮುನ್ನಡೆಯ ಕನಸಿನಲ್ಲಿ ಪಾಕಿಸ್ತಾನ
ಮುಲ್ತಾನ್: ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಣ ಎರಡನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಸ್ಥಿರ ಪ್ರದರ್ಶನ ನೀಡಿದ್ದು, ಇನಿಂಗ್ಸ್ ಮುನ್ನಡೆಯ ಕನಸು ಕಾಣುತ್ತಿವೆ.
ಬುಧವಾರ ಆರಂಭವಾದ ಎರಡನೇ ದಿನದಾಟದಲ್ಲಿ ಪಾಕ್ 5 ವಿಕೆಟ್‌ಗೆ 259 ರನ್‌ಗಳಿಂದ ಆಟ ಮುಂದುವರೆಸಿ, 366 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 6 ವಿಕೆಟ್‌ಗೆ 239 ರನ್ ಸೇರಿಸಿತು. ಇಂಗ್ಲೆಂಡ್ ಇನ್ನು 127 ರನ್‌ಗಳ ಇನಿಂಗ್ಸ್ ಹಿನ್ನಡೆಯನ್ನು ಅನುಭವಿಸುತ್ತಿದೆ. ಪಾಕ್‌ಗೆ ಮುನ್ನಡೆ ಸಾಧಿಸಲು ನಾಲ್ಕು ವಿಕೆಟ್ ಅವಶ್ಯಕತೆ ಇದೆ.

ಲೀಚ್‌ಗೆ ನಾಲ್ಕು ವಿಕೆಟ್
ಮೊದಲ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡದ ಭರವಸೆಯ ಆಟಗಾರರು ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಮೊಹಮ್ಮದ್ ರಿಜ್ವಾನ್ 41, ಸಲ್ಮಾನ್ ಅಘಾ 31, ಅಮೀರ್ ಜಮಾಲ್ 37, ನೋಮನ್ ಅಲಿ 32 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಇಂಗ್ಲೆಂಡ್ ಪರ ಜ್ಯಾಕ್ ಲೀಚ್‌ಗೆ ನಾಲ್ಕು ವಿಕೆಟ್, ಬ್ರೀಡನ್ ಕಾರ್ಸ್ 3 ವಿಕೆಟ್, ಮ್ಯಾಥ್ಯೂ ಪಾಟ್ಸ್ 2 ವಿಕೆಟ್ ಪಡೆದರು.
ಮೊದಲ ವಿಕೆಟ್‌ಗೆ ಭರ್ಜರಿ ಜೊತೆಯಾಟ
ಆರಂಭಿಕರಾದ ಜಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮೊದಲ ವಿಕೆಟ್‌ಗೆ 73 ರನ್ ಸೇರಿಸಿತು. ಜಾಕ್ ಕ್ರಾಲಿ 27 ರನ್ ಕಲೆ ಹಾಕುವಲ್ಲಿ ವಿಫಲರಾದರು. ನಾಯಕ ಓಲಿ ಪೋಪ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಹುಸಿಯಾಗಿಸಿದರು. ಇವರು 29 ರನ್‌ಗಳಿಗೆ ಆಟ ಮುಗಿಸಿದರು.
ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಜೋ ರೂಟ್ ಎರಡನೇ ಟೆಸ್ಟ್ ಪಂದ್ಯ ಮೊದಲ ಇನಿಂಗ್ಸ್‌ನಲ್ಲಿ 34 ರನ್‌ಗಳಿಗೆ ಔಟ್ ಆದರು. ಕಳೆದ ಪಂದ್ಯದಲ್ಲಿ ತ್ರಿಶತಕ ಬಾರಿಸಿದ್ದ ಹ್ಯಾರಿ ಬ್ರೂಕ್ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.
ಬೆನ್ ಡಕೆಟ್ ಶತಕ
ಓಪನರ್ ಬೆನ್ ಡಕೆಟ್ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 129 ಎಸೆತಗಳಲ್ಲಿ 16 ಬೌಂಡರಿ ಸೇರಿದಂತೆ 114 ರನ್ ಸಿಡಿಸಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications