ಇಂಡಿಯನ್ ಪ್ರೀಮಿಯರ್ ಲೀಗ್ 2017ರ ಟಾಪ್ 10 ಖರೀದಿ
ನಿರೀಕ್ಷೆಯಂತೆ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮನ್ ಈ ಬಾರಿಯ ಐಪಿಎಲ್ ಹರಾಜು ವೇಳೆ, ಬೆನ್ ಸ್ಟೋಕ್ಸ್ ಅತಿ ಗರಿಷ್ಠ ಮೊತ್ತವನ್ನು (14.5 ಕೋಟಿ ರು.) ತಮ್ಮದಾಗಿಸಿಕೊಂಡು ಪುಣೆ ತಂಡವನ್ನು ಸೇರಿಕೊಂಡಿದ್ದಾರೆ.
ದಿನದ ಅಚ್ಚರಿಗಳಲ್ಲಿ ಇಂಗ್ಲೆಂಡ್ ನವರೇ ಆದ ಟಿಮಲ್ ಮಿಲ್ಸ್ ಅವರು 12 ಕೋಟಿ ರು. ಗಳಿಸಿ ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ದಿನದ ಹರಾಜಿನಲ್ಲಿ ಒಂದು ಬಿಲಿಯನ್ ಮೊತ್ತ ದಾಟಿದ ಎರಡನೇ ಆಟಗಾರ (ಬೆನ್ ಸ್ಟೋಕ್ಸ್ ನಂತರ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.[ಐಪಿಎಲ್ 2017 ಹರಾಜು : ಮಾರಾಟವಾದ ಆಟಗಾರರ ಪೂರ್ಣ ಪಟ್ಟಿ]
ಇನ್ನು, ಭಾರತೀಯ ಆಟಗಾರರಲ್ಲಿ ವರುಣ್ ಅರುಣ್ 2.80 ಕೋಟಿ ರು. ಪಡೆದು ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿಗೆ ಸೇರ್ಪಡೆಗೊಂಡಿದ್ದಾರೆ. ಮಧ್ಯಾಹ್ನದವರೆಗಿನ ಹರಾಜಿನಲ್ಲಿ ವರುಣ್ ಅವರೇ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಕ್ರಿಕೆಟರ್ ಆಗಿದ್ದರು. ಅವರ ನಂತರ, ಸ್ಥಾನ ಕರ್ನಾಟಕ ಕೆ. ಗೌತಮ್ (2 ಕೋಟಿ ರು., ಮುಂಬೈ ಇಂಡಿಯನ್ಸ್), ಅಂಕಿತ್ ಚೌಧರಿ (2 ಕೋಟಿ ರು, ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು) ಸೇರಿಕೊಂಡಿದ್ದಾರೆ.['ಫ್ಯುಮ' ಕಂಪನಿ ಜತೆ ವಿರಾಟ್ ಕೊಹ್ಲಿ 100 ಕೋಟಿ ರು. ಡೀಲ್!]
ಇನ್ನುಳಿದಂತೆ, ಉತ್ತರ ಪ್ರದೇಶದ ಪ್ರತಿಭೆ ಕರ್ಣ್ ಶರ್ಮಾ ಅವರು, 3.20 ಕೋಟಿ ರು.ಗಳಿಗೆ ಮುಂಬೈ ಇಂಡಿಯನ್ಸ್ ಸೇರ್ಪಡೆಗೊಂಡು ಅತಿ ಹೆಚ್ಚು ಮೊತ್ತ ಪಡೆದ ಭಾರತೀಯ ಆಟಗಾರನೆಂಬ ಹೆಗ್ಗಳಿಕೆ ಪಡೆದರು.
ದಿನದ ಹರಾಜಿನಲ್ಲಿ ಭಾರತೀಯ ಆಟಗಾರರ ಬಗ್ಗೆ ಎರಡು ಅಚ್ಚರಿಗಳು ನಡೆದು ಎಲ್ಲರ ಹುಬ್ಬೇರುವಂತೆ ಮಾಡಿದವು. ಇದರಲ್ಲೊಂದು, ಹರಾಜಿಗೂ ಮುನ್ನ ಭಾರೀ ನಿರೀಕ್ಷೆ ಮೂಡಿಸಿದ್ದ ವೇಗಿ ಇಶಾಂತ್ ಶರ್ಮಾ ಅವರು ಹರಾಜಾಗದೇ ಉಳಿದಿದ್ದು. ಮತ್ತೊಂದು, ಹರಾಜಿಗೂ ಮುನ್ನ ಒಮ್ಮೆಯೂ ಕೇಳಿಬರದ ಹೆಸರಾಗಿದ್ದ ತಮಿಳುನಾಡಿನ ಹೊಸ ಟಿ20 ಸ್ಟಾರ್ ಟಿ. ನಟರಾಜನ್. ಅವರು 3 ಕೋಟಿ ರು. ಮೊತ್ತಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಸೇರ್ಪಡೆಗೊಂಡಿದ್ದು. ಈ ಎರಡೂ ಅಂಶಗಳು ಭಾರತೀಯ ಆಟಗಾರರ ವಿಚಾರದಲ್ಲಿ ದಿನದ ಅಚ್ಚರಿಗಳು.[12 ಕೋಟಿ ರು. ಮೊತ್ತಕ್ಕೆ ಆರ್ ಸಿಬಿ ಸೇರಿದ ಟಿಮಲ್ ಮಿಲ್ಸ್ ಯಾರು?]

ಭರ್ಜರಿ ಮೊತ್ತ
ಹೆಸರು - ಬೆನ್ ಸ್ಟೋಕ್ಸ್ (ಇಂಗ್ಲೆಂಡ್)
ಸೇರಿದ ತಂಡ - ರೈಸಿಂಗ್ ಪುಣೆ ಸೂಪರ್ ಜೈಂಟ್ಸ್
ಸ್ಥಾನ - ಬ್ಯಾಟ್ಸ್ ಮನ್
ಪಡೆದ ಬೆಲೆ - 14.50 ಕೋಟಿ ರು.

ಬೌಲಿಂಗ್ ಬಲ ಹೆಚ್ಚಳ
ಹೆಸರು - ಟಿಮಲ್ ಮಿಲ್ಸ್ (ಇಂಗ್ಲೆಂಡ್)
ಸೇರಿದ ತಂಡ - ರಾಯಲ್ ಚಾಲೆಂಜರ್ಸ್ ಬೆಂಗಳೂರು
ಸ್ಥಾನ - ವೇಗದ ಬೌಲರ್
ಪಡೆದ ಬೆಲೆ - 12 ಕೋಟಿ ರು.

ಕೋಲ್ಕತಾಕ್ಕೆ ಖುಷಿ
ಹೆಸರು - ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್)
ಸೇರಿದ ತಂಡ - ಕೋಲ್ಕತಾ ನೈಟ್ ರೈಡರ್ಸ್
ಸ್ಥಾನ - ಮಧ್ಯಮ ವೇಗಿ
ಪಡೆದ ಬೆಲೆ - 5 ಕೋಟಿ ರು.

ಕಾಗಿಸೋಗೆ ಅವಕಾಶ
ಹೆಸರು - ಕಾಗಿಸೋ ರಬಾಡಾ (ದಕ್ಷಿಣ ಆಫ್ರಿಕಾ)
ಸೇರಿದ ತಂಡ - ಡೆಲ್ಲಿ ಡೇರ್ ಡೇವಿಲ್ಸ್
ಸ್ಥಾನ - ವೇಗದ ಬೌಲರ್
ಪಡೆದ ಬೆಲೆ - 5 ಕೋಟಿ ರು.

ಡೆವಿಲ್ಸ್ ಕೈಗೆ ಸಿಕ್ತು!
ಹೆಸರು - ಪ್ಯಾಟ್ರಿಕ್ ಕುಮಿನ್ಸ್ (ಆಸ್ಟ್ರೇಲಿಯಾ)
ಸೇರಿದ ತಂಡ - ಡೆಲ್ಲಿ ಡೇರ್ ಡೆವಿಲ್ಸ್
ಸ್ಥಾನ - ವೇಗದ ಬೌಲರ್
ಪಡೆದ ಬೆಲೆ - 4.50 ಕೋಟಿ ರು.

ಕೋಲ್ಕತಾಕ್ಕೆ ಮತ್ತಷ್ಟು ಶಕ್ತಿ
ಹೆಸರು - ಕ್ರಿಸ್ ವೋಕ್ಸ್ (ಇಂಗ್ಲೆಂಡ್)
ಸೇರಿದ ತಂಡ - ಕೋಲ್ಕತಾ ನೈಟ್ ರೈಡರ್ಸ್
ಸ್ಥಾನ - ಆಲ್ರೌಂಡರ್
ಪಡೆದ ಬೆಲೆ - 4.20 ಕೋಟಿ ರು.

ಆಫ್ಘನ್ ಮೊದಲ ಪ್ರತಿಭೆ
ಹೆಸರು - ರಶೀದ್ ಖಾನ್ ಅರ್ಮಾನ್ (ಆಫ್ಘಾನಿಸ್ತಾನ)
ಸೇರಿದ ತಂಡ - ಸನ್ ರೈಸರ್ಸ್ ಹೈದರಾಬಾದ್
ಸ್ಥಾನ - ಸ್ಪಿನ್ನರ್
ಪಡೆದ ಬೆಲೆ - 4 ಕೋಟಿ ರು.

ಹರಿದುಬಂದ ನಥಾನ್ ಪ್ರವಾಹ
ಹೆಸರು - ನಥಾನ್ ಕಾಲ್ಟರ್ ಡಿ ನೈಲ್ (ಆಸ್ಟ್ರೇಲಿಯಾ)
ಸೇರಿದ ತಂಡ - ಕೋಲ್ಕತಾ ನೈಟ್ ರೈಡರ್ಸ್
ಸ್ಥಾನ - ಸ್ಪಿನ್ನರ್
ಪಡೆದ ಬೆಲೆ - 3.50 ಕೋಟಿ ರು.

ಕರ್ಣನಿಗೆ ಬಂಪರ್
ಹೆಸರು - ಕರ್ಣ ಶರ್ಮಾ (ಭಾರತ - ಉತ್ತರ ಪ್ರದೇಶ)
ಸೇರಿದ ತಂಡ - ಮುಂಬೈ ಇಂಡಿಯನ್ಸ್
ಸ್ಥಾನ - ಆಲ್ರೌಂಡರ್
ಪಡೆದ ಬೆಲೆ - 3.20 ಕೋಟಿ ರು.

ಲೈಮ್ ಲೈಟಿಗೆ ಬಂದ ಆಟಗಾರ
ಹೆಸರು - ಟಿ. ನಟರಾಜನ್ (ಭಾರತ - ತಮಿಳುನಾಡು)
ಸೇರಿದ ತಂಡ - ಕಿಂಗ್ಸ್ ಇಲೆವೆನ್ ಪಂಜಾಬ್
ಸ್ಥಾನ - ಬ್ಯಾಟ್ಸ್ ಮನ್
ಪಡೆದ ಬೆಲೆ - 3 ಕೋಟಿ ರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications