Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಗುವಿನ ನಿರೀಕ್ಷೆಯಲ್ಲಿ ಜೋ ರೂಟ್, ಇಂಗ್ಲೆಂಡ್‌ಗೆ ಬೆನ್ ಸ್ಟೋಕ್ಸ್ ನಾಯಕ?

Ben Stokes likely to lead England vs West Indies in 1st Test

ಲಂಡನ್, ಜೂನ್ 30: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ತಂಡದ ನಾಯಕತ್ವವನ್ನು ಆಲ್ ರೌಂಡರ್ ಬೆನ್ ಸ್ಟೋಕ್ಸ್ ವಹಿಸಿಕೊಳ್ಳುವ ಸಾಧ್ಯತೆಯಿದೆ. ಮುಂದಿನ ವಾರ ಇತ್ತಂಡಗಳ ನಡುವಿನ ಮೊದಲ ಟೆಸ್ಟ್ ಆರಂಭವಾಗಲಿದ್ದು, ಇದೇ ವೇಳೆ ಇಂಗ್ಲೆಂಡ್‌ನ ಎಂದಿನ ನಾಯಕ ಜೋ ರೂಟ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಜೋ ರೂಟ್ ತನಗೆ ಅನುಕೂಲವಾಗುವಾಗ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ. ಆದರೆ ಅದಕ್ಕೂ ಮುನ್ನ ರೂಟ್ ಒಂದು ವಾರದವರೆಗೆ ಮತ್ತೆ ಐಸೊಲೇಶನ್‌ನಲ್ಲಿರಬೇಕಾಗುತ್ತದೆ. ಜುಲೈ 8ರಂದು ಸೌತಾಂಪ್ಟನ್‌ನ ರೋಸ್ ಬೌಲ್‌ನಲ್ಲಿ ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ.

ಸದ್ಯ ಇಂಗ್ಲೆಂಡ್ ತಂಡದ ಉಪನಾಯಕರಾಗಿರುವ ಬೆನ್ ಸ್ಟೋಕ್ಸ್, ತಾತ್ಕಾಲಿಕವಾಗಿ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ. ಇಂಗ್ಲೆಂಡ್-ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯದ ವೇಳೆ ವಿಂಡೀಸ್ ಆಟಗಾರರು ವರ್ಣಬೇಧ ನೀತಿಯ ಪ್ರತಿಭಟನಾರ್ಥವಾಗಿ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಲೋಗೋ ಇರುವ ಟಿ ಶರ್ಟ್ ಧರಿಸಲಿದ್ದಾರೆ.

'ಮುಂದಿನ ಇಂಗ್ಲೆಂಡ್ ನಾಯಕನಾಗಿ ಜನ ಎದುರು ನೋಡುವ ನಾಯಕರ ಸಾಲಿನಲ್ಲಿ ನಾನಿಲ್ಲ. ನಾನು ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ. ಹಾಗಂತ ನಾಯಕನಾಗುವುದು ನನ್ನ ಗುರಿಯಲ್ಲ. ಪಂದ್ಯ ಗೆಲ್ಲುವುದೇ ನನ್ನ ನಿಜವಾದ ಗುರಿ,' ಎಂದು ಸ್ಟೋಕ್ಸ್ ಸೋಮವಾರ ಹೇಳಿಕೊಂಡಿದ್ದಾರೆ.

Story first published: Tuesday, June 30, 2020, 14:43 [IST]
Other articles published on Jun 30, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+