ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಟೆಸ್ಟ್ ನಾಯಕನಾಗಿ ನೇಮಕವಾಗುತ್ತಿದ್ದಂತೆಯೇ ಕೌಂಟಿ ಕ್ರಿಕೆಟ್‌ನಲ್ಲಿ ಅಬ್ಬರಿಸಿದ ಬೆನ್ ಸ್ಟೋಕ್ಸ್

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿ ನೇಮಕವಾಗುತ್ತಿದ್ದಂತೆಯೇ ಎಡಗೈ ಆಟಗಾರ ಬೆನ್ ಸ್ಟೋಕ್ಸ್ ಮೇ 6ರ ಶುಕ್ರವಾರದಂದು ವೋರ್ಸೆಸ್ಟರ್‌ನ ನ್ಯೂ ರೋಡ್‌ನ ಕೌಂಟಿ ಗ್ರೌಂಡ್‌ನಲ್ಲಿ ವೋರ್ಸೆಸ್ಟರ್‌ಶೈರ್ ವಿರುದ್ಧದ ಡರ್ಹಾಮ್‌ನ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ 64 ಎಸೆತಗಳಲ್ಲಿ ಶತಕ ಬಾರಿಸಿ ಗಮನ ಸೆಳೆದರು.

ಬೆನ್ ಸ್ಟೋಕ್ಸ್ ಶತಕ ಬಾರಿಸುತ್ತಿದ್ದಂತೆಯೇ ಸೌತ್‌ಪಾವ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಡರ್ಹಾಮ್ ಬ್ಯಾಟರ್ ಪಾಲ್ ಕಾಲಿಂಗ್‌ವುಡ್‌ನ ವೇಗದ ಶತಕದ ದಾಖಲೆಯನ್ನು ಮುರಿದರು. 2005ರಲ್ಲಿ ಇಂಗ್ಲೆಂಡ್‌ನ ಮಾಜಿ ಬ್ಯಾಟರ್ ಕಾಲಿಂಗ್‌ವುಡ್ ಸೋಮರ್‌ಸೆಟ್ ವಿರುದ್ಧ 75 ಎಸೆತಗಳಲ್ಲಿ ಶತಕ ಬಾರಿಸಿದ್ದರು.

Ben Stokes Who Scored A Fastest Century in County Cricket in 64 Balls

ಡರ್ಹಾಮ್ ಸ್ಕೋರ್ 360/4 ಆಗಿದ್ದಾಗ ಬೆನ್ ಗಿಬ್ಬನ್ ಅವರ ಬೌಲಿಂಗ್‌ನಲ್ಲಿ ನಾಯಕ ಸ್ಕಾಟ್ ಬೋರ್ತ್‌ವಿಕ್ ಅವರನ್ನು ಔಟ್ ಮಾಡಿದ ನಂತರ ಬೆನ್ ಸ್ಟೋಕ್ಸ್ ಬ್ಯಾಟಿಂಗ್‌ಗೆ ಇಳಿದರು. ಅಲ್ಲಿಂದ ನಂತರ, ಎಡಗೈ ಆಟಗಾರನು ತನ್ನ ಕ್ಲಾಸ್ ಆಟ ಪ್ರದರ್ಶಿಸಿದನು.

ಆಸ್ಟ್ರೇಲಿಯದ ಸ್ಟಾರ್ ಆಟಗಾರ ಭಾರತದ ಡಿಶ್‌ನ ಫೋಟೋ ಹಂಚಿಕೊಂಡು ಹೇಳಿದ್ದೇನು?ಆಸ್ಟ್ರೇಲಿಯದ ಸ್ಟಾರ್ ಆಟಗಾರ ಭಾರತದ ಡಿಶ್‌ನ ಫೋಟೋ ಹಂಚಿಕೊಂಡು ಹೇಳಿದ್ದೇನು?

47 ಎಸೆತಗಳಲ್ಲಿ ಅರ್ಧ ಶತಕವನ್ನು ಪೂರೈಸಿದ ಬೆನ್ ಸ್ಟೋಕ್ಸ, ನಂತರ 18 ವರ್ಷ ವಯಸ್ಸಿನ ಜೋಶ್ ಬೇಕರ್ ಅವರ ಬೌಲಿಂಗ್‌ಗೆ ಬೆಂಡೆತ್ತಿದರು. ಜೋಶ್ ಬೇಕರ್ ಎಸೆದ 117ನೇ ಓವರ್‌ನಲ್ಲಿ, ಸ್ಟೋಕ್ಸ್ ಮೊದಲ ಐದು ಎಸೆತಗಳಲ್ಲಿ ಐದು ಸಿಕ್ಸರ್‌ಗಳನ್ನು ಒಳಗೊಂಡಂತೆ 34 ರನ್‌ಗಳಿಗೆ ಆಫ್‌ಸ್ಪಿನ್ನರ್‌ಗೆ ಸಿಡಿಸಿದರು.

Ben Stokes Who Scored A Fastest Century in County Cricket in 64 Balls

ಸಿಕ್ಸರ್‌ಗಳ ಸುರಿಮಳೆ ಸುರಿಸಿದ ಸ್ಟೋಕ್ಸ್
117ನೇ ಓವರ್‌ನ ಐದನೇ ಎಸೆತದಲ್ಲಿ, ಬೆನ್ ಸ್ಟೋಕ್ಸ್ ಮತ್ತೊಂದು ಪ್ರಥಮ ದರ್ಜೆ ಶತಕವನ್ನು ಗಳಿಸಿದರು. ಅದರ ನಂತರ, ಬೆನ್ ಸ್ಟೋಕ್ಸ್ ಮತ್ತೊಬ್ಬ ಬೌಲರ್ ಜಾಕ್ ಲೀಚ್‌ಗೆ ಅವರ ಮೇಲೆ ದಾಳಿ ಮಾಡಿ ನಾಲ್ಕು ಸಿಕ್ಸರ್‌ಗಳನ್ನು ಚಚ್ಚಿದರು.

ಈ ಲೇಖನ ಪ್ರಕಟವಾಗುವ ಹೊತ್ತಿಗೆ, ಬೆನ್ ಸ್ಟೋಕ್ಸ್ 88 ಎಸೆತಗಳಲ್ಲಿ ಎಂಟು ಬೌಂಡರಿಗಳು ಮತ್ತು 17 ಸಿಕ್ಸರ್‌ಗಳೊಂದಿಗೆ 161 ರನ್ ಗಳಿಸಿದ್ದರು. ಅವರ ಶತಕದ ನೆರವಿನಿಂದ ಡರ್ಹಾಮ್ 550 ರನ್‌ಗಳ ಗಡಿಯನ್ನು ಆರಾಮವಾಗಿ ದಾಟಿತು.

ಶತಕದಂಚಿನಲ್ಲಿದ್ದ ವಾರ್ನರ್ ಗೆ ಬ್ಯಾಟಿಂಗ್ ಅವಕಾಶವನ್ನು ನೀಡದ ಪೊವೆಲ್ ಹೇಳಿದ್ದೇನು? | Oneindia Kannada

ಜೋ ರೂಟ್ ಅವರು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿ ಕೆಳಗಿಳಿಯುತ್ತಿದ್ದಂತಯೇ ಟೆಸ್ಟ್ ತಂಡದ ಚುಕ್ಕಾಣಿಯನ್ನು ಬೆನ್ ಸ್ಟೋಕ್ಸ್ ಅವರಿಗೆ ವಹಿಸಲಾಗಿದೆ. ನ್ಯೂಜಿಲೆಂಡ್ ವಿರುದ್ಧ ಮುಂಬರುವ ಟೆಸ್ಟ್ ಸರಣಿಗೂ ಮೊದಲು ಬೆನ್ ಸ್ಟೋಕ್ಸ್‌ರನ್ನು ನಾಯಕರಾಗಿ ನಿಯೋಜಿಸಲಾಗಿದೆ.

Story first published: Friday, May 6, 2022, 22:24 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X