PKL 2025: ಪೈರೇಟ್ಸ್ ಸವಾಲು ಮೀರಿದ ಬುಲ್ಸ್‌ಗೆ ಮೊದಲ ಜಯ
12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ತನ್ನ ಸೋಲಿನ ಸರಪಳಿಯನ್ನು ಕೊನೆಗೊಳಿಸಿದೆ. ಪ್ರಸಕ್ತ ಆವೃತ್ತಿಯ 17ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 38-30 ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಬೆಂಗಳೂರು ಬುಲ್ಸ್ ಮೊದಲ ಗೆಲುವಿನ ಸಿಹಿಯನ್ನು ಕಂಡಿತು. ಬುಲ್ಸ್ ತಂಡದ ಪರ ಅಲಿರೆಜಾ ಮಿರ್ಜಾಯನ್ ಹಾಗೂ ಆಶೀಶ್ ಮಲಿಕ್ ಭರ್ಜರಿ ಜಯ ಸಾಧಿಸಿತು. ಬುಲ್ಸ್ ತಾನಾಡಿದ ನಾಲ್ಕನೇ ಪಂದ್ಯದಲ್ಲಿ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿತು.
ಪಾಟ್ನಾ ಪೈರೇಟ್ಸ್ ವಿರುದ್ಧದ ಪಂದ್ಯದಲ್ಲಿ ಬುಲ್ಸ್ ದಾಳಿಯಲ್ಲಿ 17 ಅಂಕಗಳನ್ನು ಕಲೆ ಹಾಕಿದರೆ, ಟ್ಯಾಕಲ್‌ನಲ್ಲಿ 13 ಅಂಕ ಸೇರಿಸಿತು. ಇನ್ನು ಪಾಟ್ನಾ 14 ಅಂಕಗಳನ್ನು ಸೇರಿಸಿದರೆ, ರಕ್ಷಣಾ ವಿಭಾಗದಲ್ಲಿ ಕೇವಲ 6 ಅಂಕವನ್ನು ಸಂಪಾದಿಸಿತು. ಒಟ್ಟಾರೆ ಪಾಟ್ನಾ ಎರಡು ಬಾರಿ ಬುಲ್ಸ್ ಒಂದು ಬಾರಿ ಆಲೌಟ್ ಆಯಿತು.

ಬುಲ್ಸ್ ಮೊದಲಾವಧಿಯ ಆಟದಲ್ಲಿ 18-15 ಅಂಕಗಳ ಮುನ್ನಡೆ ಸಾಧಿಸಿತ್ತು. ಈ ವೇಳೆ ಬುಲ್ಸ್ ರೈಡಿಂಗ್ ಹಾಗೂ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿತು. ಈ ವೇಳೆ ಒಮ್ಮೆ ಬೋನಸ್ ಅಂಕವನ್ನು ಸಹ ಕಲೆ ಹಾಕಿತು. ಮೊದಲ 20 ನಿಮಿಷದ ಆಟದಲ್ಲಿ ಪಾಟ್ನಾ ದಾಳಿಯಲ್ಲಿ 9 ಹಾಗೂ ಟ್ಯಾಕಲ್‌ನಲ್ಲಿ 4 ಅಂಕ ಸೇರಿಸಿತು. ಇನ್ನು ಬುಲ್ಸ್ ತಂಡವನ್ನು ಪಾಟ್ನಾ ಒಮ್ಮೆ ಅಂಗಳ ಖಾಲಿ ಮಾಡಿ 2 ಅಂಕ ಸೇರಿಸಿತು.ಎರಡನೇ ಅವಧಿಯ ಆಟದಲ್ಲಿ ಬುಲ್ಸ್ ತಂಡದ ದಾಳಿಕೋರರು ಅಮೋಘ ದಾಳಿಯನ್ನು ಮಾಡಿದರು. ಈ ವೇಳೆ ಎದುರಾಳಿ ಆಟಗಾರರನ್ನು ಬುಲ್ಸ್ 12 ಆಟಗಾರರನ್ನು ಅಂಗಳದಿಂದ ಹೊರ ಹಾಕಿತು. ಇನ್ನು ಬೆಂಗಳೂರು ಪಾಟ್ನಾ ತಂಡದ ದಾಳಿ ಕೋರರನ್ನು ಹಿಡಿಯುವಲ್ಲಿ 6 ಬಾರಿ ಸಫಲವಾಯಿತು.
ಬುಲ್ಸ್ ತಂಡದ ಪರ ಅಲಿರೆಜಾ ಮಿರ್ಜಾಯನ್ 18 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ, 9 ಟಚ್ ಪಾಯಿಂಟ್, 1 ಬೋನಸ್ ಪಾಯಿಂಟ್ ಸೇರಿಸಿ ಅಬ್ಬರಿಸಿದರು. ಆಶೀಶ್ ಸಹ 18 ಬಾರಿ ದಾಳಿ ನಡೆಸಿ 8 ಅಂಕ ಕಲೆ ಹಾಕಿದರು. ಪರಾಜಿತ ತಂಡದ ಪರ ಅಯಾನ್ 10 ಅಂಕ ಕಲೆ ಹಾಕಿದರು.

ಟೈಟನ್ಸ್‌ಗೆ ಜ
ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 37-28 ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆಯನ್ನು ಗುಜರಾತ್ ಬೀರಿತು. ಗುಜರಾತ್ ತಂಡದ ಪರ ನಿತೀನ್ 8, ರಾಕೇಶ್ 6 ಅಂಕಗಳನ್ನು ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಪರಾಜಿತ ತಂಡದ ಪರ ಪವನ್ ಶೇರಾವತ್ 6 ಅಂಕ ಸೇರಿಸಿ ಸೋಲಿನಲ್ಲಿ ಮಿಂಚಿದರು.
ಭಾನುವಾರ ನಡೆಯುವ ಪಂದ್ಯದಲ್ಲಿ ಬಂಗಾಳ ವಾರಿಯರ್ಸ್ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಕಾದಾಟ ನಡೆಸಲಿವೆ, ಇನ್ನು ದಬಾಂಗ್ ದೆಹಲಿ ಕೆಸಿ, ಜೈಪೂರ್ ಪಿಂಕ್ ಪ್ಯಾಂಥರ್ಸ್ ತಂಡವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications