ಬೆಂಗಳೂರು ಟೆಸ್ಟ್ ಪಂದ್ಯದ ಕೊನೆ ದಿನದ ಟಿಕೆಟ್ ಹಣ ವಾಪಸ್: ಕೆಎಸ್ ಸಿಎ
ಬೆಂಗಳೂರು, ಮಾರ್ಚ್ 7: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ದಿನಗಳ ಕಾಲ ನಡೆಯಬೇಕಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯವು ನಾಲ್ಕೇ ದಿನಗಳಲ್ಲಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಐದನೇ ದಿನದಾಟದ ಟಿಕೆಟ್ ಖರೀದಿಸಿದ್ದ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಹಣ ವಾಪಸ್ ನೀಡುವುದಾಗಿ ಕರನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಪ್ರಕಟಿಸಿದೆ.
ಆನ್ ಲೈನ್ ಟಿಕೆಟ್ ಕೊಂಡವರಿಗೆ ಆನ್ ಲೈನ್ ಮೂಲಕ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರಿನಲ್ಲಿ ಟಿಕೆಟ್ ಕೊಂಡವರಿಗೆ ಚಿನ್ನಸ್ವಾಮಿ ಕ್ರೀಡಾಂಗಣದ ಅದೇ ಕೌಂಟರ್ ಗಳಲ್ಲೇ ಹಣ ವಾಪಸ್ ನೀಡಲಾಗುವುದು.[ಟೀಂ ಇಂಡಿಯಾ ಗೆಲುವಿಗೂ ಸಿದ್ದರಾಮಯ್ಯ ಟ್ವೀಟ್ ಗೂ ಲಿಂಕ್!]

ಆನ್ ಲೈನ್ ಮೂಲಕ ಹಣ ಹಿಂದಕ್ಕೆ ನೀಡುವ ಪ್ರಕ್ರಿಯೆಯನ್ನು ಇನ್ನು ಮೂರು ದಿನಗಳಲ್ಲಿ ಆರಂಭಿಸಲಾಗುವುದು. ಇನ್ನು, ಕೌಂಟರ್ ನಲ್ಲಿ ಹಣ ಹಿಂದಿರುಗಿಸುವ ಕಾರ್ಯವನ್ನು ಭಾನುವಾರ (ಮಾರ್ಚ್ 12)ರಂದು ಹಮ್ಮಿಕೊಳ್ಳಲಾಗಿದ್ದು, ಅಂದು ಅಭಿಮಾನಿಗಳು ಕೌಂಟರ್ ಗೆ ಆಗಮಿಸಿ ತಮ್ಮಲ್ಲಿರುವ ಟಿಕೆಟ್ ನೈಜ ಪ್ರತಿಯನ್ನು ನೀಡಿ ಹಣವನ್ನು ಹಿಂಪಡೆಯಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications