Ind Vs SA: ಇದು ನಾನು ನೋಡಿದ ಅತ್ಯುತ್ತಮ ಟಿ20 ಇನ್ನಿಂಗ್ಸ್ : ಗೌತಮ್ ಗಂಭೀರ್

ಟಿ20 ವಿಶ್ವಕಪ್ 2022ರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಟೀಂ ಇಂಡಿಯಾ 8.3 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 49 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದ್ದಾಗ, ಸೂರ್ಯಕುಮಾರ್ ಆಪಧ್ಭಾಂದವನಂತೆ ಆಸರೆಯಾದರು.
ಒಂದು ಕಡೆಯಲ್ಲಿ ದಕ್ಷಿಣ ಆಫ್ರಿಕಾ ವೇಗದ ಬೌಲಿಂಗ್‌ಗೆ ವಿಕೆಟ್‌ಗಳು ಉರುಳುತ್ತಿದ್ದರೂ ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ ಯಾವುದೇ ಭಯವಿಲ್ಲದೆ ರನ್ ಗಳಿಸುತ್ತಿದ್ದರು. ಲುಂಗಿ ಎನ್‌ಗಿಡಿ ಅಷ್ಟೊತ್ತಿಗಾಗಲೇ 3 ವಿಕೆಟ್ ಪಡೆದು ಭಾರತ ಬ್ಯಾಟಿಂಗ್ ಮೇಲೆ ಸವಾರಿ ಮಾಡಿದ್ದರು. ಅದಕ್ಕೆಲ್ಲ ಕೇರ್ ಮಾಡದ ಸೂರ್ಯಕುಮಾರ್ ಯಾದವ್ ಬೌಂಡರಿ, ಸಿಕ್ಸರ್ ಗಳನ್ನು ಹೊಡೆಯುವ ಮೂಲಕ ತಮ್ಮ ಅರ್ಧಶತಕವನ್ನು ಗಳಿಸಿದರು. ಅವರು ಅಂತಿಮವಾಗಿ 40 ಎಸೆತಗಳಲ್ಲಿ 68 ರನ್ ಗಳಿಸಿ ಔಟಾದರು.
ದಕ್ಷಿಣ ಆಫ್ರಿಕಾ ವಿರುದ್ಧ ಒತ್ತಡದ ಸನ್ನಿವೇಶದಲ್ಲಿ ನಿರ್ಭಯವಾಗಿ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ ಕೌಶಲ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತದ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಕೂಡ ಸೂರ್ಯ ಇನ್ನಿಂಗ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದನ್ನು ಟಿ20 ಕ್ರಿಕೆಟ್‌ನ ಶ್ರೇಷ್ಠ ಇನ್ನಿಂಗ್ಸ್ ಎಂದು ಕರೆದಿದ್ದಾರೆ.

ಹಾಡಿ ಹೊಗಳಿದ ಗೌತಮ್ ಗಂಭೀರ್
ದಕ್ಷಿಣ ಆಫ್ರಿಕಾದ ಬೌಲಿಂಗ್‌ನಲ್ಲಿನ ಅದ್ಭುತ ದಾಳಿಯನ್ನು ಎದುರಿಸುವ ವೇಳೆ, ಸೂರ್ಯಕುಮಾರ್ ಯಾದವ್ ಒಂದು ಕ್ಷಣವೂ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ವೇಗದ ಬೌಲಿಂಗ್ ಅನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡರು, ದಕ್ಷಿಣ ಆಫ್ರಿಕಾ ಫೀಲ್ಡಿಂಗ್‌ನೊಂದಿಗೆ ಆಟವಾಡಿದರು. ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಎಲ್ಲರೂ ಇನ್ನೊಂದು ತುದಿಯಲ್ಲಿ ಔಟ್ ಆಗುತ್ತಿದ್ದಾಗ, ಸೂರ್ಯಕುಮಾರ್ ಜವಾಬ್ದಾರಿ ವಹಿಸಿಕೊಂಡರು.
"ನಾನು ಇದಕ್ಕಿಂತ ಉತ್ತಮವಾದ ಟಿ20 ಇನ್ನಿಂಗ್ಸ್ ಅನ್ನು ನೋಡಿಲ್ಲ" ಎಂದು ಗೌತಮ್ ಗಂಭೀರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ. "ಇದು ಭಾರತೀಯ ಕ್ರಿಕೆಟಿಗನ ಅತ್ಯುತ್ತಮ ಟಿ20 ಇನ್ನಿಂಗ್ಸ್ ಆಗಿದೆ. ಒಂದೆಡೆ ವಿಕೆಟ್‌ಗಳೂ ಬಿದ್ದರೂ, ಈ ಪಿಚ್‌ನಲ್ಲಿ ಅಂತಹ ಬ್ಯಾಟಿಂಗ್ ಮಾಡಿದ್ದು ಶ್ರೇಷ್ಠ" ಎಂದು ಹೇಳಿದ್ದಾರೆ.

ಸೂರ್ಯಕುಮಾರ್ ಏಕಾಂಗಿ ಹೋರಾಟ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ದಕ್ಷಿಣ ಆಫ್ರಿಕಾ ವೇಗಿಗಳು ಶಾಕ್ ನೀಡಿದರು. ಕೆಎಲ್ ರಾಹುಲ್ ತಮ್ಮ ವೈಫಲ್ಯವನ್ನು ಮುಂದುವರೆಸಿದರು ಅವರು, 9 ರನ್ ಗಳಿಸಿ ಔಟಾದರು. ರೋಹಿತ್ ಶರ್ಮಾ 15 ರನ್, ವಿರಾಟ್ ಕೊಹ್ಲಿ 12 ರನ್ ಗಳಿಸಿ ಔಟಾದರು. ಸೂರ್ಯಕುಮಾರ್ ಒಬ್ಬರೇ ದಕ್ಷಿಣ ಆಫ್ರಿಕಾ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿದರು. 40 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್ ಗಳಿಸುವ ಮೂಲಕ ಭಾರತ 133 ರನ್ ಕಲೆಹಾಕಲು ಸಹಾಯ ಮಾಡಿದರು.
ಲುಂಗಿ ಎನ್‌ಗಿಡಿ 4 ಓವರ್ ಗಳಲ್ಲಿ 29 ರನ್ ನೀಡಿ 4 ವಿಕೆಟ್ ಪಡೆದರು. ವ್ಯಾಯ್ನ್ ಪ್ಯಾರ್ನೆಲ್ ಕೂಡ ಅತ್ಯುತ್ತಮ ಬೌಲಿಂಗ್ ಮಾಡಿದರು, 4 ಓವರ್ ಗಳಲ್ಲಿ ಕೇವಲ 15 ರನ್ ನೀಡಿ 3 ವಿಕೆಟ್ ಪಡೆದರು. ಮತ್ತೊಬ್ಬ ವೇಗಿ ಅನ್ರಿಚ್ ನೋಕಿಯಾ 4 ಓವರ್ ಗಳಲ್ಲಿ 23 ರನ್ ನೀಡಿ 1 ವಿಕೆಟ್ ಪಡೆದರು.

ಗೆಲ್ಲುವ ಅವಕಾಶ ಕೈಚೆಲ್ಲಿದ ಭಾರತ
134 ರನ್‌ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ 10 ಓವರ್ ಗಳಲ್ಲಿ 40 ರನ್ ಗಳಿಸಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಡೇವಿಡ್ ಮಿಲ್ಲರ್ ಮತ್ತು ಐಡೆನ್ ಮಾಕ್ರಮ್ ನಿಧಾನವಾಗಿ ರನ್ ಗಳಿಸುತ್ತಿದ್ದರು. ವಿರಾಟ್ ಕೊಹ್ಲಿ ಒಂದು ಸುಲಭದ ಕ್ಯಾಚ್ ಕೈಚೆಲ್ಲಿದರು. ನಾಯಕ ರೋಹಿತ್ ಶರ್ಮಾ ರನ್ ಔಟ್‌ಗಳ ಅವಕಾಶಗಳನ್ನು ಮಿಸ್ ಮಾಡಿದರು.
ಭಾರತದ ಕಳಪೆ ಫೀಲ್ಡಿಂಗ್‌ನಿಂದ ಜೀವದಾನ ಪಡೆದ ಇಬ್ಬರೂ ಬ್ಯಾಟರ್ ನಂತರ ವೇಗವಾಗಿ ರನ್ ಗಳಿಸಿದರು. ಬೌಂಡರಿಗಳನ್ನು ಗಳಿಸುವ ಮೂಲಕ ದಕ್ಷಿಣ ಆಫ್ರಿಕಾದ ಗೆಲುವನ್ನು ಸುಲಭವಾಗಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 19.3 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿಯನ್ನು ತಲುಪಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications