For Quick Alerts
ALLOW NOTIFICATIONS  
For Daily Alerts
 

ಅಫ್ಘನ್ ವಿರುದ್ಧ ಕಣಕ್ಕೆ ಇಳಿಯುವುದು ಯಾರು? ಒಂದು ಸ್ಥಾನಕ್ಕೆ ಇಬ್ಬರ ಮಧ್ಯೆ ಪೈಪೋಟಿ

By ನಾಗೇಶ್

ಟೀಂ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ಬುಧವಾರ (ಅ 11) ಆಡಲಿದೆ. ಚೆನ್ನೈನ ಚಿಪಾಕ್ ಅಂಗಳದಲ್ಲಿ ಭರ್ಜರಿ ಪ್ರದರ್ಶನ, ನೀಡಿರುವ ಟೀಮ್ ಇಂಡಿಯಾ ವಿಶ್ವಕಪ್ ನಲ್ಲಿ ಗೆಲುವಿನ ಅಭಿಯಾನವನ್ನು ಆರಂಭಿಸಿದೆ. ಆಸ್ಟ್ರೇಲಿಯಾ ತಂಡವನ್ನು ಮಣಿಸಿ, ಆತ್ಮವಿಶ್ವಾಸದಿಂದಲೇ ಮುನ್ನುಗುತ್ತಿದೆ.

ಭಾರತ ತಂಡ ಅಫ್ಘಾನಿಸ್ತಾನಕ್ಕೆ ಸವಾಲನ್ನು ಎಸೆಯಲಿದೆ. ಉಭಯ ತಂಡಗಳ ನಡುವಿನ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಸ್ಪಿನ್ ಟ್ರ್ಯಾಕ್ ನಲ್ಲಿ ಅಮೋಘ ಪ್ರದರ್ಶನ ನೀಡಿರುವ ರೋಹಿತ್ ಪಡೆ ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ.

Between Two Who Will Play In Match Against Afghanistan In The ICC World Cup 2023

ಟೀಮ್ ಇಂಡಿಯಾ ಮೊದಲ ಗೆಲವಿನ ಬಳಿಕ, ಎರಡನೇ ಗೆಲುವಿನ ಹುಡುಕಾಟದಲ್ಲಿದೆ. ಅಫ್ಘನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವ ಲೆಕ್ಕಾಚಾರದೊಂದಿಗೆ ಅಂಗಳಕ್ಕೆ ಇಳಿಯುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಈ ಪಂದ್ಯ ಬುಧವಾರ ಮಧ್ಯಾಹ್ನ ನಡೆಯಲಿದೆ.

ಆದರೆ ಈ ಪಂದ್ಯಕ್ಕೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಯಾರು ಸ್ಥಾನ ಪಡೆಯುತ್ತಾರೆ ಎಂಬುದು ಎಲ್ಲರ ಗಮನ ಸೆಳೆದಿದೆ. ದೆಹಲಿ ಪಿಚ್ ಸ್ಪಿನ್ ಹಾಗೂ ವೇಗಿಗಳಿಗೂ ಸಹಾಯ ನೀಡಲಿದ್ದು, ಈ ಪಿಚ್ ನಲ್ಲಿ ಸ್ವಿಂಗ್ ಮಾಸ್ಟರ್ ಮೊಹಮ್ಮದ್ ಶಮಿ ಹಾಗೂ ಆರ್. ಅಶ್ವಿನ್ ನಡುವೆ ಒಂದು ಸ್ಥಾನಕ್ಕಾಗಿ ಫೈಟ್ ನಡೆಯುತ್ತಿದೆ.

ತವರಿನಲ್ಲಿ ನಡೆದ ಪಂದ್ಯದಲ್ಲಿ ಅಶ್ವಿನ್ ಸ್ಥಿರ ಪ್ರದರ್ಶನ

ತವರಿನಲ್ಲಿ ನಡೆದ ಪಂದ್ಯದಲ್ಲಿ ಅಶ್ವಿನ್ ಸ್ಥಿರ ಪ್ರದರ್ಶನ ನೀಡಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಅರುಣ್ ಜೆಟ್ಲಿ ಕ್ರೀಡಾಂಗಣದ ಪಿಚ್ ಮರ್ಮ ಅರಿತು, ಟೀಮ್ ಮ್ಯಾನೇಜ್ಮೆಂಟ್ ಆಟಗಾರರಿಗೆ ಮಣೆ ಹಾಕಲು ನಿರ್ಧರಿಸಿದೆ. ಬ್ಲೂಬಾಯ್ಸ್ ಮೂವರು ಸ್ಪಿನ್ ಬೌಲರ್ಸ್ ಜೊತೆಗೆ ಕಣಕ್ಕೆ ಇಳಿಯುತ್ತಾ ಅಥವಾ ಮೂವರು ಪೇಸರ್ ಜೊತೆಗೆ ಕಣಕ್ಕೆ ಇಳಿಯುತ್ತಾ ಎಂಬುದೇ ಎಲ್ಲರ ಚಿತ್ತ ಕದ್ದಿದೆ.

ಅಶ್ವಿನ್, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್

ಅಶ್ವಿನ್, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಮೊಹಮ್ಮದ್ ಶಮಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಎಕನಾಮಿಯಲ್ಲಿ ಬೌಲಿಂಗ್ ಮಾಡಿದ್ದರು.

ಭಾರತದ ಆಫ್ ಸ್ಪಿನ್ನರ್ 10 ಓವರ್ ಗಳಲ್ಲಿ 34 ರನ್ ನೀಡಿ, ಕ್ಯಾಮರೂನ್ ಗ್ರೀನ್ ಅವರ ವಿಕೆಟ್ ಪಡೆದರು. ಅಶ್ವಿನ್ ಬದಲಿಗೆ ಮೊಹಮ್ಮದ್ ಶಮಿಯನ್ನು ಆಡುವ 11 ರ ತಂಡದಲ್ಲಿ ಸ್ಥಾನ ಪಡೆಯುತ್ತಾರಾ ಕಾದು ನೋಡಬೇಕು. ವಾಸ್ತವವಾಗಿ, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸ್ಪಿನ್ನರ್ ಗಳಿಗೆ ಸಹಾಯವಾಗಲಿದೆ.

ಇದರ ಹೊರತಾಗಿ ಪಿಚ್ ಹೊಸ ಚೆಂಡಿನೊಂದಿಗೆ ವೇಗದ ಬೌಲರ್ ಗಳಿಗೆ ಸಹಾಯ ಮಾಡುತ್ತದೆ. ಭಾರತ ತಂಡ ಆಡುವ 11ರಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಮೈದಾನಕ್ಕಿಳಿಯುತ್ತದೆಯೇ ಅಥವಾ ಅಶ್ವಿನ್ ಬದಲಿಗೆ ಮೊಹಮ್ಮದ್ ಶಮಿ ಅಂಗಳಕ್ಕೆ ಇಳಿಯುತ್ತಾರಾ ಎಂಬುದು ಕುತೂಹಲಕಾರಿಯಾಗಿದೆ...

Story first published: Tuesday, October 10, 2023, 21:34 [IST]
Other articles published on Oct 10, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+