ಆಸ್ಟ್ರೇಲಿಯಾ ಮಾಧ್ಯಮಗಳ ಗೋಳಾಟ: ದೆಹಲಿ ಟೆಸ್ಟ್ ಆಸಿಸ್ ಸ್ಟಾರ್ ಆಟಗಾರನಿಗೆ ನಿರ್ಣಾಯಕ ಎಂದ ಆಕಾಶ್ ಚೋಪ್ರ

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ಸಾಧಿಸಿ ಭರ್ಜರಿ ಆತ್ಮವಿಶ್ವಾಸದಲ್ಲಿದೆ. ಆದರೆ ಮತ್ತೊಂದೆಡೆ ಆಸ್ಟ್ರೇಲಿಯಾ ತಂಡ ಮೊದಲ ಪಂದ್ಯದಲ್ಲೇ ಆಘಾತಕಾರಿ ಸೋಲು ಅನುಭವಿಸಿರುವ ಕಾರಣ ದೊಡ್ಡ ಹಿನ್ನಡೆ ಅನುಭವಿಸಿದೆ. ಇದೀಗ ದೆಹಲಿ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿರುವ ಆಸ್ಟ್ರೇಲಿಯಾ ತಂಡ ಗೆಲ್ಲಬೇಕಾದ ಒತ್ತಡದಲ್ಲಿದೆ.
ಈ ಸಂದರ್ಭದಲ್ಲಿ ದೆಹಲಿಯ ಪಂದ್ಯ ಆಸ್ಟ್ರೇಲುಯಾದ ಓರ್ವ ಆಟಗಾರನ ಪಾಲಿಗೆ ಬಹಳ ನಿರ್ಣಾಯಕಲ ಪಂದ್ಯವಾಗಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯೆ ನೀಡಿದ್ದಾರೆ. ಅದು ಬೇರೆ ಯಾರೂ ಅಲ್ಲ ಆಸಿಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್. ಭಾರತದ ನೆಲದಲ್ಲಿ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಾರ್ನರ್ ವಿರುದ್ಧ ಆಸ್ಟ್ರೇಲಿಯಾದ ಮಾಧ್ಯಮಗಳು ಮುಗಿಬಿದ್ದಿವೆ. ಹೀಗಾಗಿ ದೆಹಲಿ ಪಂದ್ಯದಲ್ಲಿ ವಾರ್ನರ್ ಮೇಲೆ ಬಹಳ ದೊಡ್ಡ ಒತ್ತಡವಿದೆ ಎಂದಿದ್ದಾರೆ ಆಕಾಶ್ ಚೋಪ್ರ.

ಲಯ ಕಳೆದುಕೊಂಡ ಅಸಿಸ್ ದಾಂಡಿಗ
ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಸಂಪೂರ್ಣವಾಗಿ ಲಯ ಕಳೆದುಕೊಂಡಂತೆ ಭಾಸವಾಗಿದ್ದರು. ಆ ಪಂದ್ಯದಲ್ಲಿ ಅವರು ಒಟ್ಟು 11 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಶಮಿ ಅವರಿಗೆ 10 ರನ್‌ಗಳಿಸಿದ್ದಾಗ ಎಲ್‌ಬಿಡ್ಲ್ಯು ಆಗಿ ವಿಕೆಟ್ ಕಳೆದುಕೊಂಡ ವಾರ್ನರ್ ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್‌ಗೆ ಬಲಿಯಾಗಿದ್ದರು. ಈ ಪ್ರದರ್ಶನದ ಬಳಿಕ ವಾರ್ನರ್ ಅವರನ್ನು ಆಡುವ ಬಳಗದಿಂದ ಹೊರಗಿಡಬೇಕು ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ಕಟುವಾಗಿ ಟೀಕಿಸಲು ಆರಂಭಿಸಿದೆ. ಇದನ್ನು ಉಲ್ಲೇಖಿಸಿ ಆಕಾಶ್ ಚೋಪ್ರ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಆಸಿಸ್ ಮಾಧ್ಯಮಗಳ ಗೋಳಾಟವನ್ನು ಉಲ್ಲೇಖಿಸಿದ ಚೋಪ್ರ
"ಆಸ್ಟ್ರೇಲಿಯಾ ಮಾಧ್ಯಮಗಳು ಈಗಾಗಲೇ ಡೇವಿಡ್ ವಾರ್ನರ್ ಅವರನ್ನು ಹೊರಗಿಡಬೇಕು ಎಂದು ಗೋಳಾಟವನ್ನು ಆರಂಭಿಸಿದೆ. ಹೀಗಾಗಿ ಅವರ ಮೇಲೆ ಒತ್ತಡ ಹೆಚ್ಚಾಗಿದೆ. ಭಾರತದಲ್ಲಿ ಅವರು ಹೆಚ್ಚಾಗಿ ರನ್‌ಗಳಿಸಿಲ್ಲ. ಆವರ ವಿರುದ್ಧ ಅಶ್ವಿನ್ ಅದ್ಭುತ ದಾಖಲೆ ಹೊಂದಿದ್ದಾರೆ. ಹೀಗಾಗಿ ವಾರ್ನರ್‌ಗೆ ದೆಹಲಿ ಟೆಸ್ಟ್ ಬಹಳ ನಿರ್ಣಾಯಕ ಪಂದ್ಯವಾಗಿರಲಿದೆ" ಎಂದಿದ್ದಾರೆ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ.
IPL 2023 SRH Captain: ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೇ ಈತನೇ ಸೂಕ್ತ ನಾಯಕ ಎಂದ ರವಿಚಂದ್ರನ್ ಅಶ್ವಿನ್

ಖವಾಜಾ ಮೇಲೂ ಒತ್ತಡ ಎಂದ ಚೋಪ್ರ
ಇನ್ನು ಆಸ್ಟ್ರೇಲಿಯಾದ ಮತ್ತೋರ್ವ ಆರಂಭಿಕ ಆಟಗಾರ ಉಸ್ಮಾನ್ ಖವಾಜ ಕೂಡ ಮೊದಲ ಟೆಸ್ಟ್ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ನಾಗ್ಪುರ ಟೆಸ್ಟ್‌ನ ಎರಡು ಪಂದ್ಯದಲ್ಲಿಯೂ ಉಸ್ಮಾನ್ ಖವಾಜ ವೈಫಲ್ಯ ಅನುಭವಿಸಿದ್ದಾರೆ. 2022ರಲ್ಲಿ ಅಮೋಘ ಪ್ರದರ್ಶನ ನೀಡಿದ ಖವಾಜ ಕ್ಯಾಲೆಂಡರ್ ವರ್ಷದಲ್ಲಿ 1000ಕ್ಕೂ ಅಧಿಕ ರನ್‌ಗಳಿದಿದ್ದಾರೆ. ಅದರಲ್ಲೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 3 ಟೆಸ್ಟ್‌ಗಳಲ್ಲಿ 496 ರನ್‌ಗಳನ್ನು ಗಳಿಸಿದ್ದರು. ಆದರೆ ಭಾರತದಲ್ಲಿ ಮೊದಲ ಪಂದ್ಯದಲ್ಲಿಯೇ ಖವಾಸ ಅತ್ಯಂತ ಕಳಪೆ ಪ್ರದರ್ಶನ ನೀಡಿ ನಿರಾಸೆ ಅನುಭವಿಸಿದ್ದರು.

ಪಾಕ್‌ನಲ್ಲಿ ಅಬ್ಬರಿಸಿದ್ದ ಖವಾಜ
"ಪಾಕಿಸ್ತಾನದಲ್ಲಿ ರನ್ ಮಳೆ ಸುರಿಸಿದ್ದ ಬಳಿಕ ಖವಾಜ ಭಾರತಕ್ಕೆ ಪ್ರವಾಸ ಕೈಗೊಂಡಿದ್ದರು. ಕಳೆದ ಸುಮಾರು 12 ತಿಂಗಳಿನಿಂದ ಅವರು ಅಮೋಘ ಫಾರ್ಮ್‌ನಲ್ಲಿದ್ದರು. ಆದರೆ ಭಾರತಕ್ಕೆ ಬಂದ ಕೂಡಲೇ ಅವರು ತಣ್ಣಗಾಗಿದ್ದಾರೆ. ಈಗ ಮತ್ತೊಮ್ಮೆ ಎಲ್ಲರ ಚಿತ್ತ ಅವರ ಮೇಲೆ ಬೀಳಲಿದೆ. ಇನ್ನು ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲ್ಯಾಬುಶೈನ್ ಆಸ್ಟ್ರೇಲಿಯಾ ಬ್ಯಾಟಿಂಗ್‌ನ ಇಬ್ಬರು ಪ್ರಮುಖ ಪಿಲ್ಲರ್‌ಗಳಾಗಿದ್ದಾರೆ" ಎಂದಿದ್ದಾರೆ ಆಕಾಶ್ ಚೋಪ್ರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications