ಸೊನ್ನೆಗೆ ಸಚಿನ್ ವಿಕೆಟ್ ಪಡೆದ ಕ್ಷಣವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ: ಭುವನೇಶ್ವರ್ ಕುಮಾರ್

ಟೀಮ್ ಇಂಡಿಯಾದಲ್ಲಿ ವೇಗಿ ಭುವನೇಶ್ವರ್ ಕುಮಾರ್ ತನ್ನ 19ನೇ ವಯಸ್ಸಿನಲ್ಲಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಸೊನ್ನೆಗೆ ಔಟ್ ಮಾಡುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದರು. ರಣಜಿ ಕ್ರಿಕೆಟ್‌ನಲ್ಲಿ ಸಚಿನ್ ಆವರೆಗೂ ಒಂದು ಬಾರಿಯೂ ಸೊನ್ನೆಗೆ ಔಟಾದ ನಿದರ್ಶನವಿರಲಿಲ್ಲ. ಯುವ ವೇಗಿ ಆ ಸಾಧನೆಯನ್ನು ಮಾಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ರಣಜಿ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಡಕ್‌ಔಟ್ ಆದ ಏಕಮಾತ್ರ ನಿದರ್ಶನವದು. ಹೀಗಾಗಿ ಭುವನೇಶ್ವರ್ ಪಾಲಿಗೆ ಆ ಕ್ಷಣ ಸಹಜವಾಗಿದೆ ಅತ್ಯಂತ ವಿಶೇಷವಾದ ಸಂದರ್ಭ. ಆ ವಿಶೇಷ ಕ್ಷಣದ ಬಗ್ಗೆ ಭುವನೇಶ್ವರ್ ಕುಮಾರ್ ಹೇಳಿಕೊಂಡಿದ್ದಾರೆ. ಆ ಸಂದರ್ಭವನ್ನು ನಾನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಸಚಿನ್ ವಿಕೆಟ್ ಪಡೆಯುವ ಅವಕಾಶ ನನ್ನ ಪಾಲಿಗೆ ದೊರಕಿದ್ದು ನನ್ನ ಅದೃಷ್ಟ. ಆ ವಿಶೇಷ ಕ್ಷಣವನ್ನು ನಾನು ಪದಗಳಲ್ಲಿ ವಿವರಿಸಲು ಅಸಾಧ್ಯ. ಅಂತಾ ಸಂದರ್ಭಗಳನ್ನು ನಾವು ಅನುಭವಿಸಲು ಮಾತ್ರವೇ ಸಾಧ್ಯ. ಅದನ್ನು ವಿವರಿಸುವುದು ಅಸಾಧ್ಯ ಎಂದು ಭುವನೇಶ್ವರ್ ಕುಮಾರ್ ಹೇಳಿದ್ದಾರೆ.
ಆ ವಿಶೇಷ ವಿಕೆಟ್‌ನ ಕೀರ್ತಿ ಉತ್ತರ ಪ್ರದೇಶ ರಣಜಿ ತಂಡದ ನಾಯಕರಾಗಿದ್ದ ಮೊಹಮದ್ ಕೈಫ್‌ಗೆ ಸೇರಬೇಕು. ಸಚಿನ್ ವಿಕೆಟ್ ಪಡೆಯಲಿ ಸಾಧ್ಯವಾಗುವ ರೀತಿ ಕೈಫ್ ಫೀಲ್ಡಿಂಗ್ ನಿಲ್ಲಿಸಿದ್ದರು. ಸಾಮಾನ್ಯವಾಗಿ ಅಂದು ಸಚಿನ್ ಕ್ಯಾಚ್ ನೀಡಿದ ಭಾಗದಲ್ಲಿ ಫೀಲ್ಡಿಂಗ್ ನಿಲ್ಲಿಸುವುದಿಲ್ಲ. ಆದರೆ ಕೈಫ್ ಅಲ್ಲಿ ಓರ್ವ ಫೀಲ್ಡರ್ ನಿಲ್ಲಿಸಿ ವಿಕೆಟ್ ಸಚಿಮ್ ವಿಕೆಟ್ ಪಡೆಯುವಂತೆ ಮಾಡಿದ್ದರು. ಹೀಗಾಗಿ ಈ ವಿಕೆಟ್‌ನ ಕೀರ್ತಿ ಅವರಿಗೂ ಸಲ್ಲಬೇಕು ಎಂದು ಭುವನೇಶ್ವರ್ ಕುಮಾರ್ ಹೇಳಿದ್ದಾರೆ.
2009ರ ರಣಜಿಯ ಮುಂಬೈ ಮತ್ತು ಉತ್ತರ ಪ್ರದೇಶಗಳ ನಡುವಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ವಿಕೆಟನ್ನು ಭುವಿ ಸೊನ್ನೆಗೆ ಪಡೆದಿದ್ದರು. ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದ ಸಚಿನ್ ವಿಕೆಟನ್ನು ಭವಿ ತಮ್ಮ ಸ್ಪೆಲ್‌ನ 14ನೇ ಎಸೆತದಲ್ಲಿ ಪಡೆದುಕೊಂಡಿದ್ದರು. ವೇಗವಾಗಿ ಬಂದಿದ್ದ ಎಸೆತವನ್ನು ಡಿಫೆನ್ಸ್ ಮಾಡಲು ಹೋಗಿ ಬ್ಯಾಟ್‌ನ ಎಡ್ಜ್‌ಗೆ ಬಡಿದ ಚೆಂಡು ಪ್ಯಾಡ್‌ಗೆ ತಗುಲಿ ಗಾಳಿಯಲ್ಲಿ ಹಾರಿತ್ತು. ಡೀಪ್ ಶಾರ್ಟ್‌ಲೆಗ್‌ನಲ್ಲಿ ನಿಂತಿದ್ದ ಫೀಲ್ಡರ್ ಆ ಚೆಂಡನ್ನು ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications