For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್: ಕ್ರಿಸ್‌ ಗೇಲ್ ಹಿಂದಿಕ್ಕಲಿದ್ದಾರೆ ಭುವನೇಶ್ವರ್ ಕುಮಾರ್!

Bhuvneshwar Kumar on verge of surpassing Chris Gayle in elite list

ಪೋರ್ಟ್ ಆಫ್‌ ಸ್ಪೇನ್, ಆಗಸ್ಟ್ 14: ಪೋರ್ಟ್ ಆಫ್‌ ಸ್ಪೇನ್ ಸ್ಟೇಡಿಯಂನಲ್ಲಿ ಬುಧವಾರ (ಆಗಸ್ಟ್ 14) ನಡೆಯಲಿರುವ ಭಾರತ-ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಪಂದ್ಯ ಹಲವಾರು ದಾಖಲೆಗಳಿಗೆ ಕಾರಣವಾಗಲಿದೆ. ಇದೇ ಪಂದ್ಯದಲ್ಲಿ ಭಾರತದ ವೇಗಿ ಭುವನೇಶ್ವರ್ ಕುಮಾರ್, ವೆಸ್ಟ್ ಇಂಡೀಸ್ ಬ್ಯಾಟಿಂಗ್ ದೈತ್ಯ ಕ್ರಿಸ್‌ ಗೇಲ್ ಅವರ ದಾಖಲೆಯೊಂದನ್ನು ಮುರಿಯಲಿದ್ದಾರೆ.

ಟ್ರಿನಿಡಾಡ್‌ನ ಪೋರ್ಟ್ ಆಫ್‌ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿರುವ ಭಾರತ vs ವೆಸ್ಟ್ ಇಂಡೀಸ್ ಪಂದ್ಯದಲ್ಲಿ ರೋಹಿತ್ ಶರ್ಮಾ, ಕುಲದೀಪ್ ಯಾದವ್, ವಿರಾಟ್ ಕೊಹ್ಲಿ ಇನ್ನೂ ಹಲವಾರ ಕ್ರಿಕೆಟಿಗರು ಹೊಸ ಮೈಲಿಗಲ್ಲು ಸ್ಥಾಪಿಸಲು ಅವಕಾಶವಿದೆ. ಇದೇ ಪಂದ್ಯದಲ್ಲಿ ಗೇಲ್ ಹೆಸರಿನಲ್ಲಿರುವ ದಾಖಲೆ, ಭುವಿ ಅವರಿಂದ ಬದಿಗೆ ಸರಿಯಲಿದೆ.

ಭಾರತ vs ವೆಸ್ಟ್ ಇಂಡೀಸ್, 3ನೇ ಏಕದಿನ, Live ಸ್ಕೋರ್‌ಕಾರ್ಡ್

1
46249

ಸ್ಫೋಟಕ ಬ್ಯಾಟಿಂಗ್‌ಗಾಗಿ ವಿಶ್ವದ ಅಪಾಯಕಾರಿ ಬ್ಯಾಟ್ಸ್ಮನ್‌ ಆಗಿ ಗುರುತಿಸಿಕೊಂಡಿರುವ ಕ್ರಿಸ್‌ ಗೇಲ್ ಚೆಂಡು ಕೂಡ ಎಸೆಯಬಲ್ಲರು. ಸ್ಪಿನ್ ಬೌಲರ್ (ಬಲಗೈ ಆಫ್‌ಬ್ರೇಕ್) ಆಗಿರುವ ಗೇಲ್ ಪೋರ್ಟ್ ಆಫ್‌ ಸ್ಪೇನ್ ಸ್ಟೇಡಿಯಂನಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಒಟ್ಟು 15 ವಿಕೆಟ್‌ ದಾಖಲೆ ಹೊಂದಿದ್ದಾರೆ.

ಪೋರ್ಟ್ ಆಫ್‌ ಸ್ಪೇನ್ ನಲ್ಲಿನ ಏಕದಿನ ಪಂದ್ಯಗಳಲ್ಲಿ 'ಯುನಿವರ್ಸ್ ಬಾಸ್' ಗೇಲ್ 20 ಪಂದ್ಯಗಳಲ್ಲಿ 93 ಓವರ್‌ ಗಳಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದರೆ, ಭುವಿ ಇದೇ ಮೈದಾನದಲ್ಲಿ 6 ಪಂದ್ಯಗಳಲ್ಲಿ 34 ಓವರ್‌ ಎಸೆದು 15 ವಿಕೆಟ್‌ಗಳೊಂದಿಗೆ ಗೇಲ್ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ. ಯುವಿಗೆ ಇನ್ನೊಂದು ವಿಕೆಟ್ ಲಭಿಸಿದರೂ ಗೇಲ್ ದಾಖಲೆ ಬದಿಗೆ ಸರಿಯಲಿದೆ.

ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿನ ಏಕದಿನದಲ್ಲಿ ಅತ್ಯಧಿಕ ವಿಕೆಟ್ ದಾಖಲೆ ವಿಂಡೀಸ್‌ನ ಕರ್ಟ್ಲಿ ಆ್ಯಂಬ್ರೋಸ್‌ ಹೆಸರಿನಲ್ಲಿದೆ. ಆ್ಯಂಬ್ರೋಸ್ 21 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ಇನ್ನು ವಿಂಡೀಸ್‌ನ ಮರ್ವಿನ್ ಡಿಲ್ಲನ್ (8 ಪಂದ್ಯಗಳಲ್ಲಿ 15 ವಿಕೆಟ್), ಗೇಲ್, ಭುವಿ, ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಷ್ (20 ಪಂದ್ಯಗಳಲ್ಲಿ 15 ವಿಕೆಟ್‌) ಅನಂತರದ ಸ್ಥಾನಗಳಲ್ಲಿದ್ದಾರೆ.

Story first published: Wednesday, August 14, 2019, 13:34 [IST]
Other articles published on Aug 14, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+