ಭುವನೇಶ್ವರ್ ಬೌಲಿಂಗ್‌ಗೆ ಫಿದಾ ಆದ ಗವಾಸ್ಕರ್: ಭೇಷ್ ಎಂದ ಗ್ರೇಮ್ ಸ್ಮಿತ್

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ತಂಡ ಸೋತರೂ ಅದ್ಭುತ ಪ್ರದರ್ಶನದ ಮೂಲಕ ಮಿಂಚಿದ್ದು ಅನುಭವಿ ವೇಗಿ ಭುವನೇಶ್ವರ್ ಕುಮಾರ್. ಭುವನೇಶ್ವರ್ ಕುಮಾರ್ 4 ಓವರ್ ಗಳಲ್ಲಿ 13 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.
ಭುವಿ ಬೌಲಿಂಗ್ ನೋಡಿದ ಬಳಿಕ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಮತ್ತು ಗ್ರೇಮ್ ಸ್ಮಿತ್ ಅವರು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭುವಿ ಭಾರತೀಯ ತಂಡದ ಭಾಗವಾಗಿರಬೇಕು ಎಂದು ಹೇಳಿದ್ದಾರೆ.
ಪವರ್‌ಪ್ಲೇ ಓವರ್‌ಗಳಲ್ಲಿ ಮೂರು ವಿಕೆಟ್ ಎಗರಿಸಿದ ಭುವಿ 2012ರ ಪದಾರ್ಪಣೆಯ ಟಿ20 ಪಂದ್ಯದಲ್ಲಿ ಮಾಡಿದ್ದ ಸಾಧನೆಯನ್ನ ಮತ್ತೊಮ್ಮೆ ಮಾಡಿದ್ರು. ರೀಜ್ಹಾ ಹೆಂಡ್ರಿಕ್ಸ್ (4), ಡ್ವೇನ್ ಪ್ರಿಟೋರಿಯಸ್ (4), ರಾಸ್ಸಿ ವ್ಯಾನ್ ಡಸ್ಸೆನ್ (1) ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾಗೆ ಭಾರೀ ಆಘಾತ ನೀಡಿದ್ರು. ಆರಂಭಿಕ ಪವರ್ ಪ್ಲೇ ಓವರ್‌ಗಳಲ್ಲಿ ಮೂರು ವಿಕೆಟ್ ಪಡೆದ ಭುವಿ ತನ್ನ ಕೆರಿಯರ್‌ನಲ್ಲಿ ಎರಡನೇ ಬಾರಿಗೆ ಈ ಸಾಧನೆ ಮಾಡಿದ್ರು. ಭುವನೇಶ್ವರ್ ಕುಮಾರ್ ಈ ಹಿಂದೆ 2012ರಲ್ಲಿ ಪವರ್‌ಪ್ಲೇಯಲ್ಲಿ 3 ವಿಕೆಟ್ ಪಡೆದಿದ್ದರು.
ಭುವನೇಶ್ವರ್ ಪ್ರದರ್ಶನ ನೋಡಿ ಮಾತನಾಡಿದ ಗ್ರೇಮ್ ಸ್ಮಿಮ್, ಭುವನೇಶ್ವರ್ ಕುಮಾರ್ ಅದ್ಭುತವಾಗಿ ಬೌಲಿಂಗ್ ಮಾಡಿದರು ಎಂದು ಹೊಗಳಿದ್ದಾರೆ. ಇದಕ್ಕಾಗಿ ನಾನು ರಿಷಬ್ ಪಂತ್ ನಾಯಕತ್ವವನ್ನು ಶ್ಲಾಘಿಸುತ್ತೇನೆ. ಚೆಂಡು ಫಲಕಾರಿಯಾದರೆ ಚೆಂಡು ಸ್ವಿಂಗ್ ಆಗುವುದಿಲ್ಲ ಎಂದು ಅರಿತ ಅವರು ಆರಂಭದಿಂದಲೇ 3 ಓವರ್ ಬೌಲ್ ಮಾಡಿದರು. ಆ ಬಳಿಕ ಭುವನೇಶ್ವರ್ ಕುಮಾರ್ ಬೌಲಿಂಗ್ ಮಾಡಿದ್ದರೆ ಇಷ್ಟೊಂದು ಪ್ರಭಾವ ಬೀರುತ್ತಿರಲಿಲ್ಲ. ಆಸ್ಟ್ರೇಲಿಯಾದಲ್ಲೂ ಈ ರೀತಿ ಚೆಂಡು ಚೆನ್ನಾಗಿ ಪುಟಿಯುತ್ತದೆ. ಹೀಗಾಗಿ ಟಿ20 ವಿಶ್ವಕಪ್ ಸರಣಿಯಲ್ಲಿ ದೊಡ್ಡ ಪ್ರಭಾವ ಬೀರಲಿದ್ದಾರೆ ಎಂದು ಸ್ಮಿತ್ ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವೇಳೆಯಲ್ಲಿ ಇಬ್ಬರು ಮಾಜಿ ಆಟಗಾರರು ರಿಷಭ್ ಪಂತ್ ನಾಯಕತ್ವದ ಕುರಿತು ಪ್ರಶ್ನಿಸಿದ್ದಾರೆ. ದಿನೇಶ್ ಕಾರ್ತಿಕ್ ಇರುವಾಗಲೇ, ಆಲ್‌ರೌಂಡರ್ ಅಕ್ಷರ್ ಪಟೇಲ್‌ರನ್ನ ಬ್ಯಾಟಿಂಗ್ ಕಳುಹಿಸಿದ್ದರ ಕುರಿತು ಟೀಕಿಸಿದ್ದು, ದಿನೇಶ್ ಕಾರ್ತಿಕ್ ಎಷ್ಟು ಪಂದ್ಯವನ್ನಾಡಿದ್ದಾರೆ ನೋಡಲಿ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications