For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಕೊರೊನಾ ಪಾಸಿಟಿವ್

Glen maxwell

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಮತ್ತು ಆಲೌರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಟಿಪಿಸಿಆರ್ ಟೆಸ್ಟ್‌ನಲ್ಲಿ ಕೋವಿಡ್ -19 ಪಾಸಿಟಿವ್ ಆಗಿರುವುದು ದೃಢಪಟ್ಟಿದೆ ಎಂದು ಮೆಲ್ಬರ್ನ್ ಸ್ಟಾರ್ಸ್‌ ದೃಢಪಡಿಸಿದೆ. ಈ ಮೂಲಕ ಪ್ರಸ್ತುತ 34 ಪಂದ್ಯಗಳನ್ನ ಮುಗಿಸಿರುವ ಬಿಗ್ ಬ್ಯಾಷ್ ಲೀಗ್‌ 2021ರ ಆವೃತ್ತಿಗೆ ಮತ್ತಷ್ಟು ಅಡೆತಡೆಯಾಗಿದೆ.

ಮೆಲ್ಬರ್ನ್ ಸ್ಟಾರ್ಸ್‌ನ ನಾಯಕನಾದ ಗ್ಲೆನ್ ಮ್ಯಾಕ್ಸ್‌ವೆಲ್ ತಂಡದಿಂದ ಹೊರಗುಳಿಯುವಂತಾಗಿರುವುದು ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಸೋಮವಾರ ರಾತ್ರಿ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧ ಅವರ ತಂಡದ ಸೋಲಿನ ನಂತರ ಸ್ಟಾರ್ಸ್ ನಾಯಕನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾದರು ಮತ್ತು ಕೊರೊನಾ ಪಾಸಿಟಿವ್ ಆಗಿ ಹಿಂದಿರುಗಿದರು. ಅವರು ಈಗ ಐಸೋಲೇಶನ್‌ನಲ್ಲಿದ್ದು, ಪಿಸಿಆರ್ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಕೊರೊನಾ ಪಾಸಿಟಿವ್ ಆಗಿರುವ ಗ್ಲೆನ್ ಮ್ಯಾಕ್ಸ್‌ವೆಲ್, ಈಗಾಗಲೇ ಡಗೌಟ್‌ನಲ್ಲಿ 12 ಇತರೆ ಆಟಗಾರರು ಮತ್ತು 8 ಸಿಬ್ಬಂದಿಗಳ ಜೊತೆಗೆ ನೇರವಾದ ಸಂಪರ್ಕದಲ್ಲಿದ್ದರು. ಜೊತೆಗೆ ವೈರಸ್‌ನಿಂದಾಗಿ ಇ ಹಿಂದೆಯೇ ತಂಡದ ಪ್ರಮುಖ ಸದಸ್ಯರ ಅನುಪಸ್ಥಿತಿಯ ಕಾರಣ ಬಹುತೇಕ ತಂಡಗಳು ತೊಂದರೆ ಅನುಭವಿಸಿವೆ.

ಮೆಲ್ಬರ್ನ್ ಸ್ಟಾರ್ಸ್ ತುಸು ನೆಮ್ಮದಿ ಪಡುವ ವಿಚಾರವೆಂದರೆ ಆ್ಡಂ ಜಂಪಾ, ಮಾರ್ಕಸ್ ಸ್ಟೊಯಿನಿಸ್ ಮತ್ತು ನೇಥನ್ ಕೌಲ್ಟರ್-ನೈಲ್ ಸೇರಿದಂತೆ ಸುಮಾರು 10 ಆಟಗಾರರು ವೈರಸ್‌ಗೆ ತುತ್ತಾಗಿ ಅವರ ಏಳು ದಿನಗಳ ಐಸೋಲೇಶನ್ ಅವಧಿ ಮುಗಿಸಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಶುಕ್ರವಾರದಂದು ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಸ್ಟಾರ್ಸ್‌ ಪರ ಆಡಲು ಲಭ್ಯವಿದ್ದಾರೆ.

ತಜ್ಞರ ಜೊತೆ ಮಹತ್ವದ ಸಭೆ ಮಾಡಲಿರುವ ಮುಖ್ಯ ಮಂತ್ರಿ! | Oneindia Kannada

ಪ್ರಸ್ತುತ ನಡೆಯುತ್ತಿರುವ ಬಿಗ್‌ ಬ್ಯಾಷ್ ಲೀಗ್ 2021-22ರ ಟಿ20 ಆವೃತ್ತಿಯಲ್ಲಿ ಪರ್ತ್ ಸ್ಕಾಚರ್ಸ್ 9 ಪಂದ್ಯಗಳಲ್ಲಿ 8 ಪಂದ್ಯ ಜಯಿಸಿ ಒಟ್ಟು 29 ಪಾಯಿಂಟ್ಸ್‌ಗಳೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅದೇ ಗ್ಲೆನ್ ಮ್ಯಾಕ್ಸ್‌ವೆಲ್ ನಾಯಕತ್ವದ ಮೆಲ್ಬರ್ನ್ ಸ್ಟಾರ್ಸ್ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ 8 ಪಂದ್ಯಗಳಲ್ಲಿ ಕೇವಲ 3 ಪಂದ್ಯ ಜಯಿಸಿದ್ದು 10 ಪಾಯಿಂಟ್ಸ್ ಟೇಬಲ್‌ನಲ್ಲಿ 7 ನೇ ಸ್ಥಾನಕ್ಕೆ ಕುಸಿದಿದೆ.

Story first published: Wednesday, January 5, 2022, 14:48 [IST]
Other articles published on Jan 5, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+