ಬಿಗ್‌ಬ್ಯಾಶ್ ಲೀಗ್‌ನಲ್ಲಿ ಕೆಟ್ಟ ದಾಖಲೆ: ಕೇವಲ 15 ರನ್‌ಗೆ ಆಲೌಟ್ ಆದ ಸಿಡ್ನಿ ಥಂಡರ್!: ವಿಡಿಯೋ

ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್ ಶುಕ್ರವಾರ ಆಘಾತಕಾರಿ ಬ್ಯಾಟಿಂಗ್ ಪ್ರದರ್ಶನವೊಂದಕ್ಕೆ ಸಾಕ್ಷಿಯಾಯಿತು. ಅಡಿಲೇಡ್ ಸ್ಟ್ರೇಕರ್ಸ್ ಹಾಗೂ ಸಿಡ್ನಿ ಥಡರ್ಸ್ ವಿರುದ್ಧದ ಪಂದ್ಯ ಲೀಗ್ ಕ್ರಿಕೆಟ್‌ನ ಇತಿಹಾಸದಲ್ಲಿ ಯಾರೂ ನಿರೀಕ್ಷಿಸದಷ್ಟು ಕನಿಷ್ಠ ರನ್‌ಗಳಿಗೆ ಆಲೌಟ್ ಆಗುವ ಮೂಲಕ ಬೇಡದ ದಾಖಲೆ ಬರೆದಿದೆ. ಬಿಗ್‌ಬ್ಯಾಶ್ ಲೀಗ್‌ನ ಪ್ರತಿಷ್ಠಿತ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಸಿಡ್ನಿ ಥಂಡರ್ ತಂಡ ಕೇವಲ 15 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಅತ್ಯಂತ ಹೀನಾಯ ಸಾಧನೆ ಮಾಡಿ ಮುಖಭಂಗಕ್ಕೆ ಒಳಗಾಗಿದೆ.
ಚುಟುಕು ಕ್ರಿಕೆಟ್‌ನಲ್ಲಿ ಹೆಚ್ಚು ದಂಡನೆಗೆ ಗುರಿಯಾಗುವ ಬೌಲರ್‌ಗಳು ಈ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದ್ದಾರೆ. ಅಡಿಲೇಡ್ ಸ್ಟ್ರೈಕರ್ಸ್ ತಂಡದ ಬೌಲಿಂಗ್ ದಾಳಿಗೆ ಸಿಡ್ನಿ ಥಂಡರ್ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿದೆ. ಅದು ಕೂಡ ಸಿಡ್ನಿ ತಂಡ ತವರು ಮೈದಾನದಲ್ಲಿಯೇ ಈ ಕಳಪೆ ದಾಖಲೆ ಬರೆದಿದ್ದು ಕೇವಲ 5.5 ಓವರ್‌ಗಳಲ್ಲಿ ಥಂಡರ್ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಸಾಧಾರಣ ಗುರಿ ನೀಡಿದ ಅಡಿಲೇಡ್ ಸ್ಟ್ರೈಕರ್ಸ್
ಬಿಗ್‌ಬ್ಯಾಶ್ ಲೀಗ್‌ನ 12ನೇ ಆವೃತ್ತಿ ಕಳೆದ ಮಂಗಳವಾರವಷ್ಟೇ ಆರಂಭವಾಗಿದ್ದು ಇಂದು ಐದನೇ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ಸಿಡ್ನಿ ಥಂಡರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ಸಾಧಾರಣ ಪ್ರದರ್ಶನ ನೀಡಿ ಎದುರಾಳಿಗೆ ಸುಲಭ ಗುರಿಯನ್ನು ನಿಗದಿಪಡಿಸಿತ್ತು. ನಿಗದಿತ 20 ಓವರ್‌ಗಳಲ್ಲಿ ಸ್ಟ್ರೈಕರ್ಸ್ ತಂಡ 9 ವಿಕೆಟ್ ಕಳೆದುಕೊಂಡು 139 ರನ್‌ಗಳನ್ನು ಗಳಿಸಿತ್ತು. ಹೀಗಾಗಿ 140 ರನ್‌ಗಳನ್ನು ಗಳಿಸುವ ಸಾಧಾರಣ ಗುರಿಯನ್ನು ನಿಗದಿಪಡಿಸಿತು.
IPL 2023: ಮಿನಿ ಹರಾಜಿನಲ್ಲಿ ಈ ಕನ್ನಡಿಗ ಸೇರಿದಂತೆ 3 ಆಟಗಾರರ ಮೇಲೆ ಕಣ್ಣಿಟ್ಟ ಆರ್‌ಸಿಬಿ
15 ರನ್‌ಗಳಿಗ ಆಲೌಟ್ ಆದ ಸಿಡ್ನಿ
ಸ್ಟ್ರೈಕರ್ಸ್ ನೀಡಿದ 140 ರನ್‌ಗಳ ಗುರಿ ಬೆನ್ನಟ್ಟಲು ಕಣಕ್ಕಿಳಿದ ಸಿಡ್ನಿ ಥಂಡರ್ ಮೂರನೇ ಎಸೆತದಿಂದಲೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿತ್ತು. ತಂಡದ ಮೊತ್ತ 10 ರನ್ ಗಳಿಸುವ ಮುನ್ನವೇ ಪ್ರಮುಖ 6 ವಿಕೆಟ್ ಕಳೆದುಕೊಂಡಿತ್ತು. 15 ರನ್ ಆಗುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. 10ನೇ ಕ್ರಮಾಂಕದಲ್ಲಿ ಹಣಕ್ಕಿಳಿದ ಬ್ರೆಂಡನ್ ಡಾಗ್ಗೆಟ್ ಅವರು ಗಳಿಸಿದ 4 ರನ್ ತಂಡದ ಪರ ದಾಖಲಾದ ಅತಿ ಹೆಚ್ಚು ಸ್ಕೋರ್!. ಇನ್ನು ಎರಡು ರನ್ ವೈಡ್ ಮೂಲಕ ಸೇರ್ಪಡೆಯಾಗಿತ್ತು. ವಿಪರ್ಯಾಸವೆಂದರೆ ಪವರ್‌ಪ್ಲೇ ಅವಧಿ ಮುಗಿಯಲು ಕೂಡ ಇನ್ನೂ ಒಂದು ಎಸೆತ ಬಾಕಿಯಿತ್ತು.
ಟಿ20 ಕ್ರಿಕೆಟ್‌ನ ಸೂಪರ್ ಸ್ಟಾರ್‌ಗಳು ಇರುವ ತಂಡ
ಮತ್ತಷ್ಟು ಆಘಾತಕಾರಿ ಸಂಗತಿಯೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸೂಪರ್ ಸ್ಟಾರ್ ಆಟಗಾರರು ಕೂಡ ಈ ಸಿಡ್ನಿ ಥಂಡರ್ ತಂಡ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿದ್ದರು ಎಂಬುದು ಗಮನಿಸಬೇಕಾದ ಅಂಶ. ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ, ಟಿ20 ಸ್ಪೆಶಲಿಸ್ಟ್ ಅಲೆಕ್ಸ್ ಹೇಲ್ಸ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದರೆ ದಕ್ಷಿಣ ಆಫ್ರಿಕಾದ ಸ್ಪೋಟಕ ಆಟಗಾರ ರಿಲೀ ರೊಸ್ಸೋ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಡೇನಿಯಲ್ ಸ್ಯಾಮ್ಸ್ ಕೂಡ ಈ ತಂಡದ ಆಡುವ ಬಳಗದಲ್ಲಿದ್ದರು ಎಂಬುದು ವಿಪರ್ಯಾಸ.
ಸಿಡ್ನಿ ಕಥೆ ಮುಗಿಸಿದ ಥಾರ್ಟ್ನನ್, ವೆಸ್ ಅಗರ್
ಅಡಿಲೇಡ್ ಸ್ಟ್ರೈಕರ್ಸ್ ತಂಡದ ವೇಗಿಗಳಾದ ಹೆನ್ರಿ ಥಾರ್ಟ್ನನ್ ಹಾಗೂ ವೇಗ್ ಅಗ್ ಸೇರಿಕೊಂಡು ಸಿಡ್ನಿ ತಂಡವನ್ನು ನೋಡು ನೋಡುತ್ತಿದ್ದಂತೆಯೇ ಹೆಡೆಮುರಿಕಟ್ಟಿದ್ದರು. ಥಾರ್ಟ್ನನ್ 2.5 ಓವರ್‌ಗಳಲ್ಲಿ 5 ವಿಕೆಟ್ ಪಡೆದರೆ ಅಗರ್ 4 ವಿಕೆಟ್ ಕಬಳಿಸಿದರು. ಇನ್ನು ಒಂದು ವಿಕೆಟ್ ಮ್ಯಾಥ್ಯೂ ಶಾರ್ಟ್ ಪಾಲಾಯಿತು.
ಈ ಪಂದ್ಯದ ಸ್ಕೋರ್ ಕಾರ್ಡ್ ಹೀಗಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications