Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2023: ಮಿನಿ ಹರಾಜಿನಲ್ಲಿ ಈ ಕನ್ನಡಿಗ ಸೇರಿದಂತೆ 3 ಆಟಗಾರರ ಮೇಲೆ ಕಣ್ಣಿಟ್ಟ ಆರ್‌ಸಿಬಿ

IPL 2023 Auction: RCB Eyes On This 3 Players Including Mayank Agarwal In Mini Auction

ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿರುವ 2023ರ ಐಪಿಎಲ್ ಟೂರ್ನಿಗಾಗಿ ಮಿನಿ ಹರಾಜು ಪ್ರಕ್ರಿಯೆಗೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೆಲವು ಪ್ರಮುಖ ಆಟಗಾರರನ್ನು ಖರೀದಿಸಿ, ಬಲಿಷ್ಠ ತಂಡವನ್ನು ಕಟ್ಟಲು ಆಶಿಸುತ್ತಿದೆ. ಆರ್‌ಸಿಬಿ ತಂಡದಲ್ಲಿ ಏಳು ಸ್ಥಾನಗಳು ಖಾಲಿ ಉಳಿದಿವೆ.

ಹರಾಜಿಗೂ ಮುನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಸ್ಟ್ರೇಲಿಯಾದ ಎಡಗೈ ವೇಗಿ ಜೇಸನ್ ಬೆಹ್ರೆನ್ಡಾರ್ಫ್ ಅವರನ್ನು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಕ್ಕೆ 75 ಲಕ್ಷ ರೂಪಾಯಿಗಳಿಗೆ ಟ್ರೇಡ್ ಮಾಡಿದೆ.

ಇನ್ನು ಆರ್‌ಸಿಬಿ ಆಲ್‌ರೌಂಡರ್ ಅನೀಶ್ವರ್ ಗೌತಮ್, ವಿಕೆಟ್ ಕೀಪರ್ ಬ್ಯಾಟರ್ ಲುವ್ನಿತ್ ಸಿಸೋಡಿಯಾ, ಚಾಮಾ ಮಿಲಿಂದ್ ಮತ್ತು ಶೆರ್ಫೇನ್ ರುದರ್‌ಫೋರ್ಡ್ ಅವರನ್ನು ಸಹ ಕೈಬಿಟ್ಟಿದೆ. ಆರ್‌ಸಿಬಿ ಪರ್ಸ್‌ನಲ್ಲಿ ಸದ್ಯ 8.75 ಕೋಟಿ ರೂಪಾಯಿ ಇದೆ. ಹಾಗಾಗಿ ಡಿಸೆಂಬರ್‌ 23ರಂದು ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಜಾಣತನ ಪ್ರದರ್ಶಿಸಬೇಕಿದೆ.

ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸ್ಟಾರ್ ಆಲ್‌ರೌಂಡರ್‌ಗಳು ಮತ್ತು ಪರಿಪೂರ್ಣ ಬ್ಯಾಟರ್‌ನನ್ನು ಖರೀದಿಸಲು ಪ್ರಯತ್ನಿಸಲಿದೆ. ಮುಂದಿನ ಐಪಿಎಲ್‌ಗೆ ಬಲಿಷ್ಠ ತಂಡವನ್ನು ನಿರ್ಮಿಸಲು ಅವರು ಖಚಿತವಾಗಿ ಗುರಿ ಇಟ್ಟಿರುವ 3 ಆಟಗಾರರು ಇಲ್ಲಿದ್ದಾರೆ.

ಸ್ಯಾಮ್ ಕರ್ರಾನ್- ಇಂಗ್ಲೆಂಡ್

ಸ್ಯಾಮ್ ಕರ್ರಾನ್- ಇಂಗ್ಲೆಂಡ್

ಸ್ಯಾಮ್ ಕರ್ರಾನ್ ಬಹುಶಃ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್ ಆಗಿದ್ದಾರೆ. ಆರ್‌ಸಿಬಿ ತಂಡ ಸಹ ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್‌ನನ್ನು ಹುಡುಕುತ್ತಿದೆ. ಕಳೆದ ಎರಡು ಋತುವಿನಲ್ಲಿ ಹರ್ಷಲ್ ಪಟೇಲ್ ಉತ್ತಮವಾಗಿ ಬೌಲಿಂಗ್ ಪಾತ್ರ ನಿಭಾಯಿಸುತ್ತಿದ್ದಾರೆ. ಆದರೆ ಸ್ಯಾಮ್ ಕರ್ರಾನ್ನಲ್ಲಿ ಅತ್ಯುತ್ತಮ ಡೆತ್ ಓವರ್ ಸ್ಪೆಷಲಿಸ್ಟ್ ಬೌಲರ್ ಅಡಗಿದ್ದಾನೆ.

ಅಲ್ಲದೆ, ಸ್ಯಾಮ್ ಕುರ್ರಾನ್ ಕೆಳ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟರ್ ಆಗಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಸ್ಯಾಮ್ ಕರ್ರಾನ್ ಧೈರ್ಯಶಾಲಿ ಕ್ರಿಕೆಟಿಗನಾಗಿದ್ದಾರೆ. ಅವರು ಇತ್ತೀಚೆಗೆ ಮುಕ್ತಾಯಗೊಂಡ 2022ರ ಟಿ20 ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹರಾಜಿನಲ್ಲಿ ಆರ್‌ಸಿಬಿ ತಂಡಕ್ಕೆ ಸೇರಿದರೆ ಖಂಡಿತವಾಗಿಯೂ ತಂಡದ ಲೈನ್‌ಅಪ್‌ ಅತ್ಯುತ್ತಮವಾಗಿರಲಿದೆ.

ಜೇಸನ್ ಹೋಲ್ಡರ್- ವೆಸ್ಟ್ ಇಂಡೀಸ್

ಜೇಸನ್ ಹೋಲ್ಡರ್- ವೆಸ್ಟ್ ಇಂಡೀಸ್

ಆರ್‌ಸಿಬಿ ಜೇಬಿನಲ್ಲಿ ಕೇವಲ 8 ಕೋಟಿ ರೂ.ಗಳಷ್ಟು ಮಾತ್ರ ಇದ್ದು, ಇತರ ಫ್ರಾಂಚೈಸಿಗಳೊಂದಿಗೆ ಹೆಚ್ಚು ಕಾಲ ಬಿಡ್ಡಿಂಗ್ ಪೈಪೋಟಿ ನಡೆಸಲು ಸಾಧ್ಯವಾಗದಿರಬಹುದು. ಸ್ಯಾಮ್ ಕರ್ರಾನ್ ಅವರನ್ನು ತೆಗೆದುಕೊಳ್ಳದಿದ್ದರೆ, ವೆಸ್ಟ್ ಇಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ಪ್ರಬಲ ಆಟಗಾರನಾಗಿರುತ್ತಾನೆ. ಜೇಸನ್ ಹೋಲ್ಡರ್ ಇತ್ತೀಚಿನ ದಿನಗಳಲ್ಲಿ ಲೀಗ್ ಮತ್ತು ಚುಟುಕು ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಜೇಸನ್ ಹೋಲ್ಡರ್ ಕಳೆದ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಾಗಿ 12 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದರು ಮತ್ತು ಬ್ಯಾಟ್‌ನಿಂದಲೂ ಕೊಡುಗೆ ನೀಡಿದ್ದಾರೆ. ಈ ಆಲ್‌ರೌಂಡರ್ ಆರ್‌ಸಿಬಿ ತಂಡ ಸೇರ್ಪಡೆಯಾದರೆ ತಂಡ ಸಮತೋಲನದಿಂದ ಕೂಡಲಿದೆ.

ಮಯಾಂಕ್ ಅಗರ್ವಾಲ್- ಭಾರತ

ಮಯಾಂಕ್ ಅಗರ್ವಾಲ್- ಭಾರತ

ಮಯಾಂಕ್ ಅಗರ್ವಾಲ್ ಕರ್ನಾಟಕದ ಆಟಗಾರ. ಅವರು ತಮ್ಮ ಹೆಚ್ಚಿನ ಕ್ರಿಕೆಟ್ ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡಿದ್ದಾರೆ ಮತ್ತು ಕೆಲವು ಋತುಗಳಲ್ಲಿ ಆರ್‌ಸಿಬಿ ತಂಡದ ಭಾಗವಾಗಿದ್ದರು. ಮಯಾಂಕ್ ಅಗರ್ವಾಲ್ ಐದು ವರ್ಷಗಳ ಹಿಂದೆ ಇದ್ದಿದ್ದಕ್ಕಿಂತ ಸುಧಾರಿತ ಆಟಗಾರರಾಗಿದ್ದಾರೆ. ಆರ್‌ಸಿಬಿ ತಂಡದ ಅಗ್ರ ಕ್ರಮಾಂಕದಲ್ಲಿ ಉತ್ತಮ ಆರಂಭವನ್ನು ನೀಡುವ ಆರಂಭಿಕ ಆಟಗಾರರಾಗಬಹುದು.

ಇತ್ತೀಚಿಗೆ ಮಯಾಂಕ್ ಅಗರ್ವಾಲ್ ಜೊತೆ ಆರ್‌ಸಿಬಿಯ ಉಪಾಧ್ಯಕ್ಷ ಇರುವ ಫೋಟೋ ವೈರಲ್ ಆಗಿದೆ. ಇದು ಮಯಾಂಕ್‌ರನ್ನು ಆರ್‌ಸಿಬಿಗೆ ಕರೆತರುವ ಯೋಜನೆಯಾಗಿದೆ ಎಂಬುದು ಹಲವರ ಮಾತು.

Story first published: Friday, December 16, 2022, 15:30 [IST]
Other articles published on Dec 16, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+