ವಿಶ್ವಕಪ್‌ಗೂ ಮುನ್ನ ಆಸೀಸ್‌ಗೆ ಆಘಾತ; ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಬಿದ್ದ ಸ್ಟಾರ್ ಆಟಗಾರರು
ಅಕ್ಟೋಬರ್ 5ರಿಂದ ಭಾರತದಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದ್ದು, ಇದಕ್ಕೆ ಪೂರ್ವ ತಯಾರಿಯಾಗಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ವೈಟ್‌ಬಾಲ್ ಸರಣಿ ಆಡಲಿದೆ.
ಇದೇ ವೇಳೆ ಸ್ಟಾರ್ ಬ್ಯಾಟರ್ ಸ್ಟೀವನ್ ಸ್ಮಿತ್ ಮತ್ತು ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ಅವರು ಗಾಯದ ಕಾರಣದಿಂದಾಗಿ ಮುಂಬರುವ ದಕ್ಷಿಣ ಆಫ್ರಿಕಾದ ವೈಟ್-ಬಾಲ್ ಪ್ರವಾಸದಲ್ಲಿ ಆಡುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಶುಕ್ರವಾರ, ಆಗಸ್ಟ್ 18ರಂದು ಖಚಿತಪಡಿಸಿದೆ.
2023ರ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಈ ಸುದ್ದಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಏಕೆಂದರೆ, ಇಬ್ಬರೂ ಆಟಗಾರರು ಹಿಂದಿನ ಪಂದ್ಯಗಳಲ್ಲಿ ದೊಡ್ಡ ಕೊಡುಗೆ ನೀಡಿದ್ದರು. ವಿಶ್ವಕಪ್ ಉತ್ತಮ ತಯಾರಿ ನಡೆಸಲು ಈ ಸರಣಿ ಸಹಾಯವಾಗಿತ್ತು.

ಬ್ಯಾಟರ್ ಸ್ಟೀವನ್ ಸ್ಮಿತ್ ಅವರು ಎಡಗೈ ಮಣಿಕಟ್ಟಿನ ಸ್ನಾಯುರಜ್ಜು ಗಾಯದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಗಾಯವು ಅವರನ್ನು ನಾಲ್ಕು ವಾರಗಳವರೆಗೆ ಕ್ರಿಕೆಟ್‌ನಿಂದ ದೂರವಿಡುವ ಸಾಧ್ಯತೆಯಿದೆ. ಈ ಹಿನ್ನಡೆಯ ಹೊರತಾಗಿಯೂ, ಸ್ಟೀವನ್ ಸ್ಮಿತ್ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಸಂಪೂರ್ಣ ಫಿಟ್ ಆಗುವ ನಿರೀಕ್ಷೆಯಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸ್ಟೀವನ್ ಸ್ಮಿತ್ ಅನುಪಸ್ಥಿತಿಯು ಏಕದಿನ ಪಂದ್ಯಗಳಿಗೆ ಆಸ್ಟ್ರೇಲಿಯಾ ತಂಡವನ್ನು ಸೇರಲು ಮಾರ್ನಸ್ ಲ್ಯಾಬುಸ್ಚಾಗ್ನೆಗೆ ಅವಕಾಶ ನೀಡುತ್ತದೆ.
ಏಕದಿನ ವಿಶ್ವಕಪ್‌ಗಾಗಿ 18-ಸದಸ್ಯರ ಆಸ್ಟ್ರೇಲಿಯಾ ತಂಡದಿಂದ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರನ್ನು ಆರಂಭದಲ್ಲಿ ಹೊರಗಿಡಲಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಫಾರ್ಮ್ ಕಂಡುಕೊಂಡರೆ ಪಂದ್ಯಾವಳಿಗೂ ಮುನ್ನ ಮತ್ತೆ ತಂಡಕ್ಕೆ ಮರಳಬಹುದು.
ಸ್ಟೀವನ್ ಸ್ಮಿತ್ ಬದಲಿಗೆ ಆಶ್ಟನ್ ಟರ್ನರ್ ಅವರು ಆಸ್ಟ್ರೇಲಿಯಾ ಟಿ20 ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ವೇಳೆ ಸ್ಟಾರ್ ಬ್ಯಾಟರ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
ಇನ್ನು ಮಿಚೆಲ್ ಸ್ಟಾರ್ಕ್ ಅವರು ಇಂಗ್ಲೆಂಡ್‌ನಿಂದ ಹಿಂದಿರುಗಿದ ನಂತರ ತೊಡೆಸಂದು ನೋವು ಅನುಭವಿಸುತ್ತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಐದು ಆಶಸ್ ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಆಡಿದರು.

ಮಿಚೆಲ್ ಸ್ಟಾರ್ಕ್ ಅನುಪಸ್ಥಿತಿಯಲ್ಲಿ ಸ್ಪೆನ್ಸರ್ ಜಾನ್ಸನ್ ಏಕದಿನ ಪಂದ್ಯಗಳಿಗೆ ಸ್ಥಾನ ಪಡೆಯಲಿದ್ದಾರೆ. ಎರಡೂ ವೈಟ್-ಬಾಲ್ ಸ್ವರೂಪಗಳಲ್ಲಿ ಜಾನ್ಸನ್ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಲು ಅವಕಾಶ ಸಿಕ್ಕಂತಾಗಿದೆ.
ಖಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡೂ ವೈಟ್-ಬಾಲ್ ಸರಣಿಗಳಿಗೆ ಮಿಚೆಲ್ ಮಾರ್ಷ್ ಆಸ್ಟ್ರೇಲಿಯಾ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯನ್ ತಂಡವು ವಿಶ್ವಕಪ್ ಪಂದ್ಯಾವಳಿಗೆ ತಂಡವನ್ನು ಸಿದ್ಧಪಡಿಸುತ್ತಿದ್ದು, ತನ್ನ ಸಾಂಪ್ರದಾಯಿಕ ವಿಧಾನವನ್ನು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ. ಭಾರತೀಯ ಏಕದಿನ ಸರಣಿ ಮತ್ತು ವಿಶ್ವಕಪ್ ಅಭ್ಯಾಸ ಪಂದ್ಯಕ್ಕಾಗಿ ಸ್ಟೀವನ್ ಸ್ಮಿತ್ ಮತ್ತು ಮಿಚೆಲ್ ಸ್ಟಾರ್ಕ್‌ರಂತಹ ಪ್ರಮುಖ ಆಟಗಾರರ ಫಿಟ್‌ನೆಸ್ ಮತ್ತು ಲಭ್ಯತೆ ಅಗತ್ಯವಾಗಿದೆ.
ಆಗಸ್ಟ್ 30ರಿಂದ ಸೆಪ್ಟೆಂಬರ್ 3ರವರೆಗೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ನಂತರ ಐದು ಪಂದ್ಯಗಳ ಏಕದಿನ ಸರಣಿ ಸೆಪ್ಟೆಂಬರ್ 7ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 17ರವರೆಗೆ ನಡೆಯಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಆಸ್ಟ್ರೇಲಿಯಾ ಟಿ20 ತಂಡ:
ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಜೇಸನ್ ಬೆಹ್ರೆಂಡಾರ್ಫ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆಶ್ಟನ್ ಟರ್ನರ್, ಆಡಮ್ ಝಂಪಾ.
ದಕ್ಷಿಣ ಆಫ್ರಿಕಾ ವಿರುದ್ಧದ ಆಸ್ಟ್ರೇಲಿಯಾ ಏಕದಿನ ತಂಡ:
ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಆಶ್ಟನ್ ಅಗರ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಆರನ್ ಹಾರ್ಡಿ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಮಾರ್ಕಸ್ ಸ್ಟೋನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications