For Quick Alerts
ALLOW NOTIFICATIONS  
For Daily Alerts
 

Mohammed Shami: ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಶಮಿ ಫೀಲ್ಡ್‌ಗಿಳಿಯುವ ಬಗ್ಗೆ ಬಿಗ್ ಅಪ್‌ಡೇಟ್‌

ಸತತ ಆರು ತಿಂಗಳುಗಳಿಂದ ಸ್ನಾಯುರಜ್ಜು ಗಾಯಕ್ಕೆ ತುತ್ತಾಗಿ ಕ್ರಿಕೆಟ್‌ನಿಂದ ಹೊರಗಿದ್ದ ಟೀಮ್‌ ಇಂಡಿಯಾ ವೇಗದ ಬೌಲರ್‌ ಮೊಹಮ್ಮದ್‌ ಶಮಿ ನೋವಿನಿಂದ ಚೇತರಿಸಿಕೊಂಡಿದ್ದಾರೆ. ಇತ್ತೀಚೆಗೆ ಭಾರತ ತಂಡ ಸೇರುವುದಕ್ಕೆ ಕಾಯಲು ಸಾಧ್ಯವಿಲ್ಲ ಎಂದು ಶಮಿ ಕ್ರಿಕೆಟ್‌ ಮೈದಾನಕ್ಕೆ ಮರಳುವ ಉತ್ಸಾಹವನ್ನು ಹಂಚಿಕೊಂಡಿದ್ದರು.

ಹೀಗಾಗಿ ಮುಂಬರುವ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾಕ್ಕೆ ಶಮಿ ಮರಳುವ ನಿರೀಕ್ಷೆ ಇತ್ತು. ಆದರೆ ಸಂಪೂರ್ಣ ಫಿಟ್‌ ಇಲ್ಲದ ಕಾರಣ ಶಮಿ ಟಿ20 ವಿಶ್ವಕಪ್‌ ನಿಂದ ದೂರ ಉಳಿಯಬೇಕಾಯಿತು. ಆದರೆ ಇದೀಗ ಶಮಿ ಯಾವಾಗ ಫೀಲ್ಡ್‌ಗಿಳಿಯಲಿದ್ದರೆ ಎಂಬುದರ ಬಗ್ಗೆ ಬಿಗ್‌ ಅಪ್‌ಡೇಟ್ ಸಿಕ್ಕಿದೆ.

Big update about Mohammad Shami playing cricket

ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿರುವ ಭಾರತ ತಂಡದ ಜೊತೆ ಶಮಿ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ಹೊರ ಬಂದಿದೆ. ನವೆಂಬರ್ 22 ರಿಂದ ಜನವರಿ 7, 2025 ರವರೆಗೆ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್‌ ಇಂಡಿಯಾ ಆಡಲಿದೆ. ಈ ವೇಳೆ ತಂಡಕ್ಕೆ ಶಮಿ ಮರಳಬಹುದು ಎಂದು ಕ್ರಿಕೆಟ್‌ ಮೂಲಗಳು ತಿಳಿಸಿವೆ.

ಈ ಸರಣಿಯ ಮೊದಲ ಟೆಸ್ಟ್‌ ಪಂದ್ಯ ಪರ್ತ್‌ನಲ್ಲಿ, ಎರಡನೇ ಪಂದ್ಯ ಅಡಿಲೇಡ್‌ನಲ್ಲಿ, ಮೂರನೇ ಪಂದ್ಯ ಬ್ರಿಸ್ಬೇನ್‌ನಲ್ಲಿ, ನಾಲ್ಕನೇ ಪಂದ್ಯ ಮೆಲ್ಬೋರ್ನ್‌ನಲ್ಲಿ ಮತ್ತು ಐದನೇ ಪಂದ್ಯ ಸಿಡ್ನಿಯಲ್ಲಿ ನಡೆಯಲಿದೆ. ಶಮಿ ಕೊನೆಯ ಬಾರಿಗೆ 2023ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಪರ ಕಣಕ್ಕೀದಿದ್ದರು.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಉನ್ನತ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ, ಟೀಮ್‌ ಇಂಡಿಯಾದಲ್ಲಿ ಶಮಿ ಅಗ್ರ ಬೌಲರ್ ಮತ್ತು ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನೆಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಶಮಿ ಸಂಪೂರ್ಣ ಫಿಟ್‌ ಅಗಿ ತಂಡಕ್ಕೆ ಮರಳಿದರೆ ಉತ್ತಮವಾಗಿರುತ್ತದೆ.

ಈ ವರ್ಷ ಆಸ್ಟ್ರೇಲಿಯಾ ಪ್ರವಾಸದಲ್ಲಿ ಶಮಿ, ಮತ್ತೊರ್ವ ವೇಗಿ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಜೋಡಿಯಾಗುವುದನ್ನು ಕಾಣಬಹುದು. ತಂಡಕ್ಕಾಗಿ ದೀರ್ಘ ಕಾಲ ಪ್ರದರ್ಶನ ನೀಡುವ ಅವಶ್ಯಕತೆ ಇರುವುರಿಂದ ಶಮಿ ಎಚ್ಚರಿಕೆಯಿಂದ ತಯಾರಿ ನಡೆಸಬೇಕಿದೆ.

ಶಮಿ ಎನ್‌ಸಿಎಯಲ್ಲಿ ಫಿಟ್‌ನೆಸ್ ನಡೆಸುತ್ತಿದ್ದಾರೆ. ಹೀಗಾಗಿ ತಂಡಕ್ಕೆ ಶಮಿ ಮರಳುವ ಬಗ್ಗೆ ಯಾವುದೇ ಆತುರವಿಲ್ಲ. ಸಂಪೂರ್ಣ ಫಿಟ್ ಆಗಲು ಅವರಿಗೆ ಪೂರ್ಣ ಸಮಯವನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ವಿಶ್ವಕಪ್‌ನಲ್ಲಿ ಶಮಿ ಆಡಿದ 7 ಪಂದ್ಯಗಳಿಂದ ಒಟ್ಟು 24 ವಿಕೆಟ್‌ಗಳನ್ನು ಕಂಬಳಿಸುವ ಮೂಲಕ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನ್ಯೂಜಿಲೆಂಡ್‌ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಏಳು ವಿಕೆಟ್ ಉರುಳಿಸಿ ಮತ್ತೊಂದು ಸಾಧನೆ ಮಾಡಿದ್ದರು.

Story first published: Saturday, May 11, 2024, 23:53 [IST]
Other articles published on May 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+