Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆಪಿಎಲ್ : ಹುಬ್ಬಳ್ಳಿ ಟೈಗರ್ಸ್ ಮಣಿಸಿದ ಬಿಜಾಪುರ ಬುಲ್ಸ್ ಚಾಂಪಿಯನ್ಸ್

ಮೈಸೂರು, ಸೆ. 21: ವೇಗಿ ವೈಶಾಕ್ ವಿಜಯಕುಮಾರ್, ಸ್ಪಿನ್ನರ್ ಕಾರ್ಯಪ್ಪ ಮಾರಕ ಬೌಲಿಂಗ್ ದಾಳಿ ಹಾಗೂ ರಾಬಿನ್ ಉತ್ತಪ್ಪ, ನಾಯಕ ಅಖಿಲ್ ಸಮಯೋಚಿತ ಆಟದ ನೆರವಿನಿಂದ ಬಿಜಾಪುರ ಬುಲ್ ತಂಡ 2015ರ ಕೆಪಿಎಲ್ ಚಾಂಪಿಯನ್ಸ್ ಆಗಿ ಕುಣಿದಾಡಿದೆ. ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಅಂತಿಮ ಹಣಾಹಣಿಯಲ್ಲಿ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಬಿಜಾಪುರ ಬುಲ್ಸ್ ತಂಡ 7 ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿಸಿತು.

ಕರ್ನಾಟಕ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ ನಾಲ್ಕನೇ ಸೀಸನ್ ನ ಫೈನಲ್ ಪಂದ್ಯದ ಆರಂಭದಿಂದಲೂ ಬಿಜಾಪುರ ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿತು. ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಹುಬ್ಬಳ್ಳಿ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್​ಗಳಿಗೆ 114 ರನ್ ಮಾತ್ರ ಪೇರಿಸಿತು. ರನ್ ಚೇಸಿಂಗ್ ಗೆ ಇಳಿದ ಬಿಜಾಪುರ ತಂಡ ಬಿಜಾಪುರ ತಂಡ 17.1 ಓವರ್​ಗಳಲ್ಲಿ 3 ವಿಕೆಟ್​ಗೆ 115 ರನ್ ದಾಖಲಿಸಿ ವಿಜಯೋತ್ಸವ ಆಚರಿಸಿತು.

Robin Uthappa


ರಾಬಿನ್ ಉತ್ತಪ್ಪ ಅಜೇಯ 38 ರನ್(34 ಎಸೆತ, 3X4) ಮತ್ತು ನಾಯಕ ಬಾಲಚಂದ್ರ ಅಖಿಲ್ 36 ರನ್(19 ಎಸೆತ, 1X4, 4X6) ಜೋಡಿ ಮುರಿಯದ 4ನೇ ವಿಕೆಟ್​ಗೆ 55 ರನ್ ಕಲೆಹಾಕಿ, ಹುಬ್ಬಳ್ಳಿಗೆ ಆಘಾತ ನೀಡಿದರು. ಇದಕ್ಕೂ ಮುನ್ನ ವೇಗಿ ವೈಶಾಕ್ ವಿಜಯಕುಮಾರ್(16ಕ್ಕೆ 3) ಹಾಗೂ ಸ್ಪಿನ್ನರ್ ಕಾರ್ಯಪ್ಪ (20ಕ್ಕೆ 3) ವಿಕೆಟ್ ಪಡೆದು ಹುಬ್ಬಳ್ಳಿ ಟೈಗರ್ಸ್ ಬಾಲ ಮುರಿದರು.

ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪ್ರಶಸ್ತಿಗಳನ್ನು ವಿತರಿಸಿದರು. ಕೆಎಸ್​ಸಿಎ ಅಧ್ಯಕ್ಷ ಅಶೋಕ ಆನಂದ್, ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹಾಗೂ ಗಣ್ಯರು ಹಾಜರಿದ್ದರು.
Bijapur Bulls


ರಾಬಿನ್ ಉತ್ತಪ್ಪ ಟೂರ್ನಿಯಲ್ಲಿ ಆಡಿದ 9 ಪಂದ್ಯಗಳಿಂದ 290 ರನ್ ಗಳಿಸಿದ್ದಲ್ಲದೆ, ವಿಕೆಟ್ ಕೀಪರ್ ಆಗಿ 8 ಕ್ಯಾಚ್ ಹಾಗೂ 5 ರನೌಟ್ ಮಾಡಿದ್ದ ಸಾಧನೆಗಾಗಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಫೈನಲ್ ಪಂದ್ಯಶ್ರೇಷ್ಠ: ವೈಶಾಕ್ ವಿಜಯಕುಮಾರ್.

ಕೆಪಿಎಲ್ ಚಾಂಪಿಯನ್ ಗಳು:

2009ರ ಚಾಂಪಿಯನ್: ಬೆಂಗಳೂರು ಪ್ರಾವಿಡೆಂಟ್(ಗ್ರಾಮೀಣ)
2010: ಮಂಗಳೂರು ಯುನೈಟೆಡ್
2011 to 2013 - ಟೂರ್ನಿ ನಡೆದಿರಲಿಲ್ಲ.
2014 - ಮೈಸೂರು ವಾರಿಯರ್ಸ್
2015 - ಬಿಜಾಪುರ್ ಬುಲ್ಸ್
(ಒನ್ ಇಂಡಿಯಾ ಕನ್ನಡ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+