ವಿವಾದ ಸೃಷ್ಟಿಸಿದ ಮುನೀಬಾ ಅಲಿ ರನೌಟ್
ಮಹಿಳಾ ಏಕದಿನ ವಿಶ್ವಕಪ್ ಆರಂಭವಾಗಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಡಿದ 2 ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಕೊಲಂಬೊದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆ 88 ರನ್‌ಗಳಿಂದ ಸಂಪ್ರದಾಯಿಕ ಎದುರಾಳಿ ಪಾಕ್ ತಂಡವನ್ನು ಸೋಲಿಸಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸಂಘಟಿತ ಅಟ ಎಲ್ಲರ ಗಮನ ಸೆಳೆಯಿತು. ಇದೇ ವೇಳೆ ಪಾಕಿಸ್ತಾನದ ಆರಂಭಿಕ ಆಟಗಾರ್ತಿ ಮುನೀಬಾ ಅಲಿ ವಿಚಿತ್ರ ರೀತಿಯಲ್ಲಿ ರನೌಟ್ ಆದರು. ಇದು ಚರ್ಚೆಗ ಕಾರಣವಾಯಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಪರ ಯಾವೊಬ್ಬ ಆಟಗಾರ್ತಿ ಅರ್ಧಶತಕ ಬಾರಿಸಲಿಲ್ಲ. ಭಾರತದ ಪರ ಪ್ರತಿಕಾ ರಾವಲ್ 31, ಸ್ಮೃತಿ ಮಂಧನಾ 23, ಹರ್ಲಿನ್ ಡಿಯೋಲ್ 46, ಜೆಮಿಮಾ ರೋಡ್ರಿಗಸ್ 32, ರಿಚಾ ಘೋಷ್ ಅಜೇಯ 35 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಗುರಿಯನ್ನು ಬೆನ್ನಟ್ಟಿದ ಪಾಕ್ ತಂಡದ ಆಟಗಾರ್ತಿಯರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಈ ವೇಳೆ ಆರಂಭಿಕ ಆಟಗಾರ್ತಿ ಮುನೀಬಾ ಅಲಿ ಔಟ್ ಆಗಿದ್ದು ವಿವಾದವಾಯಿತು.

ಮುನೀಬಾ ಅಲಿ ಅವರಿಗೆ ಇನಿಂಗ್ಸ್‌ನ 4ನೇ ಓವರ್‌ನ ಕೊನೆಯ ಎಸೆತವನ್ನು ಕ್ರಾಂತಿ ಗೌಡ ಮಾಡಿದರು. ಮುನೀಬಾ ಪ್ಲೇಡ್ ಮಾಡಲು ಮುಂದಾದರು. ಆಗ ಕ್ರಾಂತಿ ಎಲ್‌ಬಿ ಅಪೀಲ್ ಸಹ ಮಾಡಿದರು. ಅದನ್ನು ಕಂಡು ಮುನೀಬಾ ಕೊಂಚ ಕ್ರೀಸ್‌ನಿಂದ ಆಚೆ ಬಂದರು. ಇದೇ ಟೈಮ್ ಗಮನಿಸಿದ ದೀಪ್ತಿ ಶರ್ಮಾ ಆಕರ್ಷಕ ಥ್ರೋ ಮಾಡಿದರು. ಮೊದಲು ಮೂರನೇ ಅಂಪೈರ್ ನಾಟ್ ಔಟ್ ಎಂದು ತಿಳಿಸಿದರು. ಆದರೆ ಬಳಿಕ ಮತ್ತೊಮ್ಮೆ ಪರಿಶೀಲಿಸಿದ ಬಳಿಕ ಔಟ್ ಎಂದು ತಿಳಿಸಿದರು. ಥ್ರೋ ಬರುವ ಮುನ್ನ ಮುನೀಬಾ ತನ್ನ ಬ್ಯಾಟ್ ಕ್ರೀಸ್‌ನಲ್ಲಿ ಇಟ್ಟಿದರು. ಆದರೆ ಚೆಂಡು ಸ್ಟಂಪ್‌ಗೆ ತಾಗುವ ವೇಳೆಯಲ್ಲಿ ಇವರ ಬ್ಯಾಟ್ ಗಾಳಿಯಲ್ಲಿತ್ತು. ಹೀಗಾಗಿ ಮೂರನೇ ಅಂಪೈರ್ ಔಟ್ ಎಂದು ನೀಡಿದರು. ಈ ವಿಕೆಟ್‌ನಿಂದ ಪಾಕ್ ನಾಯಕ ಬೌಂಡರಿ ಲೈನ್ ಹೊರಗಡೆ ಮೂರನೇ ಅಂಪೈರ್ ಜೊತೆಗೆ ವಾಗ್ವಾದ ನಡೆಸಿದರು.
ನಿಯಮ ಏನು ಹೇಳುತ್ತದೆ?
ಐಸಿಸಿ ನಿಯಮ 30.1.1 ರಲ್ಲಿ ಬ್ಯಾಟರ್ ದೇಹ ಅಥವಾ ಬ್ಯಾಟ್ ಕ್ರೀಸ್‌ನ ನೆಲಕ್ಕೆ ಸಂಪೂರ್ಣ ಸಂಪರ್ಕ ಹೊಂದಿಲ್ಲದೇ ಇದ್ದರೆ, ಆಗ ಬ್ಯಾಟರ್ ಒಳಗಡೆ ಇದ್ದಾರೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ನಿಯಮ 30.1.2 ರ ಪ್ರಕಾರ, ಬ್ಯಾಟ್ಸ್‌ಮನ್ ಕ್ರೀಸ್ ತಲುಪಲು ಡೈವ್ ಮಾಡಿದರೆ ಅಥವಾ ಓಡಿದರೆ ಮತ್ತು ಅವರ ಬ್ಯಾಟ್ ಅಥವಾ ದೇಹವು ನೆಲವನ್ನು ಮುಟ್ಟಿದರೆ, ನಂತರ ಬ್ಯಾಟ್ ಗಾಳಿಗೆ ಹೋದರೂ ಸಹ ಅವರನ್ನು ಔಟ್ ನೀಡಲಾಗುವುದಿಲ್ಲ.
ಪಾಕ್ ಆಟಗಾರ್ತಿ ಮುನೀಬಾ ಓಡುತ್ತಲು ಇರಲಿಲ್ಲ. ಡೈವ್ ಸಹ ಮಾಡಿರಲಿಲ್ಲ. ಅವರು ಸುಮ್ಮನೆ ನಿಂತಿದ್ದರು. ಚೆಂಡು ಸ್ಟಂಪ್ಸ್‌ಗೆ ಟಚ್ ಆಗುವ ವೇಳೆಗೆ ಮುನೀಬಾ ಬ್ಯಾಟ್ ಗಾಳಿಯಲ್ಲಿ ಇದ್ದಿರುವುದು ಸ್ಪಷ್ಟವಾಗಿದ್ದರಿಂದ ಅವರನ್ನು ಔಟ್ ಎಂದು ಘೋಷಿಸಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications