ಬ್ಲ್ಯಾಕ್‌ವುಡ್ ಅದ್ಭುತ ಇನ್ನಿಂಗ್ಸ್ ಬಗ್ಗೆ ವಿಂಡೀಸ್ ಕೋಚ್ ಪ್ರಶಂಸೆಯ ಮಾತು

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಕೋಚ್ ಫಿಲ್ ಸಿಮೊನ್ಸ್ ಕಳೆದ ಪಂದ್ಯದ ಹೀರೋ ಜರ್ಮೈನ್ ಬ್ಲಾಕ್‌ವುಡ್ ಆಟದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಬ್ಲ್ಯಾಕ್‌ವುಡ್ ಅವರ ಎರಡನೇ ಇನ್ನಿಂಗ್ಸ್‌ನ ನಿಯಂತ್ರಿತ ಆಟ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲುವನ್ನು ಸಾಧ್ಯವಾಗಿಸಿತು ಎಂದಿದ್ದಾರೆ.
ಎರಡನೇ ಇನ್ನಿಂಗ್ಸ್‌ನಲ್ಲಿ 200 ರನ್‌ಗಳನ್ನು ಬೆನ್ನಟ್ಟುವ ಗುರಿ ಪಡೆದಿದ್ದ ವೆಸ್ಟ್ ಇಂಡೀಸ್ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಬ್ಲ್ಯಾಕ್‌ವುಡ್ ಕ್ರಿಸ್‌ಗೆ ಆಗಮಿಸುವ ವೇಳೆಗೆ ವಿಂಡೀಸ್ 3 ವಿಕೆಟ್ ಕಳೆದು ಕೊಂಡು 27 ರನ್ ಗಳಿಸಿ ಸೋಲಿನತ್ತ ಮುಖಮಾಡಿತ್ತು. ಇನ್ನೋರ್ವ ಬ್ಯಾಟ್ಸ್‌ಮನ್ ಜಾನ್ ಕ್ಯಾಂಪ್‌ಬೆಲ್ ಗಾಯಗೊಂಡು ನಿವೃತ್ತರಾಗಿದ್ದರು.
ಈ ಸಂದರ್ಭದಲ್ಲಿ ರೋಸ್ತೊನ್ ಚೇಸ್ ಜೊತೆ ಸೇರಿದ ಕ್ಯಾಂಪ್‌ಬೆಲ್ ಅತ್ಯಂತ ನಿರ್ಣಾಯಕ 73 ರನ್ ಜೊತೆಯಾಟವನ್ನು ಆಡಿದರು. ಚೇಸ್ ಔಟ್ ಆಗುವಷ್ಟರಲ್ಲಿ ವಿಂಡೀಸ್ ತಂಡದ ಗೆಲುವಿಗೆ ಇನ್ನೂ 100 ರನ್‌ಗಳ ಅಗತ್ಯವಿತ್ತು.
ಬಳಿಕ ಬ್ಲ್ಯಾಕ್‌ವುಡ್ ಶೇನ್ ಡೌರಿಚ್ ಜೊತೆಗೆ ಅಮೋಘ ಜೊತೆಯಾಟವನ್ನು ನೀಡಿದರು. ವೆಸ್ಟ್ ಇಂಡೀಸ್ ಗೆಲುವಿನ ಸನಿಹ ತಲುಪುತ್ತಿದ್ದಂತೆಯೇ 95 ರನ್ ಗಳಿಸಿ ಬ್ಲ್ಯಾಕ್‌ವುಡ್ ತಮ್ಮ ವಿಕೆಟ್ ಕಳೆದುಕೊಂಡಿದ್ದರು. ಆದರೆ ಅಷ್ಟರಲ್ಲಿ ವಿಂಡೀಸ್‌ನ ಗೆಲುವನ್ನು ಖಚಿತಪಡಿಸಿದ್ದರು.
"ಎರಡನೇ ಇನ್ನಿಂಗ್ಸ್‌ನಲ್ಲಿ ಆತ ಸಾಕಷ್ಟು ನಿಯಂತ್ರಿತವಾಗಿ ಪ್ರದರ್ಶನವನ್ನು ನೀಡಿದ್ದರು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಬ್ಯಾಟಿಂಗ್ ನಡೆಸಿದರು. ಇದರಿಂದಾಗಿ ಆತನ ಮನಸ್ಥಿತಿ ಬೆಳವಣಿಗೆಯಾಗಿರುವುದು ತಿಳಿಯುತ್ತದೆ. ಅದನ್ನೇ ನಾವು ನಿರೀಕ್ಷಿಸಿದ್ದೆವು" ಎಂದು ಸಿಮೊನ್ಸ್ ಹೇಳಿದ್ದಾರೆ. ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯ ಜುಲೈ 16 ರಿಂದ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications