For Quick Alerts
ALLOW NOTIFICATIONS  
For Daily Alerts
 

ಮಿ. ಅರ್ನಾಬ್ ಗೋಸ್ವಾಮಿ ಶೇಮ್ ಆನ್ ಯೂ

By ಶುಭಂ ಘೋಷ್

ಟೈಮ್ಸ್ ನೌ ನಲ್ಲಿ ಪ್ರಸಾರವಾಗುವ 'ದಿ ನ್ಯೂಸ್ ಹವರ್ ಡಿಬೇಟ್' ಬಹು ಜನಪ್ರಿಯ ಕಾರ್ಯಕ್ರಮ. ಅರ್ನಾಬ್ ಗೋಸ್ವಾಮಿ ನಿರೂಪಣೆಯ ಈ ಶೋ ಕಳೆದ ರಾತ್ರಿ ಮಾಡಿದ ಗದ್ದಲ, ಅರ್ಥವಿಲ್ಲದ ಚರ್ಚೆ ಅನೇಕರಿಗೆ ಆಘಾತ ತಂದಿತು. ವಿಶ್ವಕಪ್ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೋತ್ತಿದ್ದು ರಾಷ್ಟ್ರವಾದಕ್ಕೆ ಅಪವಾದ ಎಂಬಂತೆ ಬಿಂಬಿಸಿ ದ್ರೋಹಿಗಳಂತೆ ಆಟಗಾರರನ್ನು ಜರೆದ ಅರ್ನಾಬ್ ಗೆ ಒಂದಿಷ್ಟು ಪ್ರಶ್ನೆಗಳು ಇಲ್ಲಿವೆ..

ಮಿ. ಅರ್ನಾಬ್ ಗೋಸ್ವಾಮಿ ನಿಮಗೆ ಕ್ರಿಕೆಟ್ ಆಟದ ಪರಿಚಯವಿದೆಯೆ?
ಮಿ. ಗೋಸ್ವಾಮಿ ನೀವು ಎಂದಾದರೂ ಕ್ರಿಎಕ್ಟ್ ಬ್ಯಾಟ್ ಕೈಯಲ್ಲಿ ಹಿಡಿದಿದ್ದೀರಾ? 22 ಯಾರ್ಡ್ ಅಳತೆ ಗೊತ್ತಿದೆಯೆ? ಸಿಡ್ನಿ ಶೇಮ್ ಎಂದು ಟ್ಯಾಗ್ ಜನಪ್ರಿಯಗೊಳಿಸಿ ನೀವು ಗಳಿಸಿದ್ದಾದರೂ ಏನು? ಊಹಾಪೋಹ ಕಾರಣಗಳು, ವಿತಂಡವಾದ, ಕುತರ್ಕದಿಂದಲೇ ಎಲ್ಲರನ್ನು ಸೋಲಿಸಬಹುದು ಎಂದು ಕೊಂಡಿರಬಹುದು ಅದರೆ, ಕ್ರಿಕೆಟ್ ಆಟದ ಬಗ್ಗೆ ಜ್ಞಾನ ಬೆಳೆಸಿಕೊಂಡು ನಂತರ ಚರ್ಚೆಗೆ ಬನ್ನಿ.[ನಿವೃತ್ತಿ ಬಗ್ಗೆ ಗುಟ್ಟು ರಟ್ಟು ಮಾಡಿದ ಧೋನಿ]

ಆಸ್ಟ್ರೇಲಿಯಾದ ಮೇಲೆ ಅರ್ನಾಬ್ ಯುದ್ಧಕ್ಕೆ ಕರೆ ನೀಡುತ್ತಿದ್ದರೇನೊ?
ಆಸ್ಟ್ರೇಲಿಯಾದವರು ಭಾರತದಿಂದ ಕಾಶ್ಮೀರವನ್ನು ಕಸಿದುಕೊಂಡಂತೆ ಅರ್ನಾಬ್ ಆಡುತ್ತಿದ್ದರು, ವಿಶ್ವಕಪ್ ಕಿರೀಟ ಜಾರಿಬಿದ್ದರೆ ದೇಶವೇ ತಲೆತಗ್ಗಿಸುವಂಥ ಕಾರ್ಯ ನಡೆದಂತೆ ಅರ್ನಾಬ್ ಅಡಿದ್ದೇಕೆ? ಮುಖ್ಯ ಸಂಪಾದಕರೊಬ್ಬರು ಹೊರಡಿಸಿದ ಮಾತುಗಳಿಗೆ ಚರ್ಚೆಗೆ ಬಂದಿದ್ದ ಗಣ್ಯರಲ್ಲಿ ಅನೇಕರು ಕೂಡಾ ತಲೆದೂಗಿದ್ದು ಹಾಸ್ಯಾಸ್ಪದವಾಗಿತ್ತು. ಆಸ್ಟ್ರೇಲಿಯಾ ಉತ್ತಮವಾಗಿ ಆಡಿ ಭಾರತವನ್ನು ಸೋಲಿಸಿತು ಎಂಬುದನ್ನು ಒಪ್ಪಲು ಯಾರು ತಯಾರಿರಲಿಲ್ಲ, ಧೋನಿ ಷಡ್ಯಂತ್ರ, ಧೋನಿ ನಾಯಕತ್ವ ವೈಫಲ್ಯವೇ ಕಾರಣ ಎಂಬ ಮಾತುಗಳು ಸ್ಸಾರಿ ಕಿರುಚಾಟ ಕೇಳಿ ಬಂದಿತು.

Blasting Team India after WC loss: Dear Arnab Goswami, you are a pathetic pseudo-nationalist

ಸನ್ಮಾನ್ಯ ಗೋಸ್ವಾಮಿ ತಾವು ಹುಸಿ ದೇಶಭಕ್ತ
'ನೇಷನ್ ವಾಂಟ್ಸ್ ಟು ನೋ' ಎನ್ನುವ ಮೂಲಕ ದೇಶದ ಎಲ್ಲಾ ಜನತೆಯ ಪ್ರತಿನಿಧಿಯಾಗಿ ಅಬ್ಬರಿಸಿ ಬೊಬ್ಬಿರಿಯುವ ಅರ್ನಾಬ್ ಹಾಗೂ ಆತನ ಹುಸಿ ರಾಷ್ಟ್ರಪ್ರೇಮಕ್ಕೆ ಕಳೆದ ರಾತ್ರಿಯ ಕಾರ್ಯಕ್ರಮಕ್ಕೆ ಸಾಕ್ಷಿ. ಅನಾರ್ಬ್ ಅವರ ರಾಷ್ಟ್ರಪ್ರೇಮವನ್ನು ಕಂಡು ಆರೆಸ್ಸೆಸ್ ಕೂಡಾ ಬೆಚ್ಚಿ ಬೀಳಬಹುದು.

ಪಾಕಿಸ್ತಾನ ಹಾಗೂ ಚೀನಾ ದೇಶಗಳ ಬಗ್ಗೆ ಸದಾ ಕಾಲ ಕೆಟ್ಟ ಆಲೋಚನೆ ಹುಟ್ಟುವಂತೆ ಮಾಡುವಲ್ಲಿ ಅರ್ನಾಬ್ ಯಶಸ್ವಿಯಾಗುತ್ತಾರೆ. ಈ ಮೂಲಕ ರಾಷ್ಟ್ರಪ್ರೇಮ ಜಾಗೃತಿಗೊಳಿಸಿದೆ ಎಂಬ ಹುಸಿತನ ಕೂಪದಲ್ಲೇ ಮುಳುಗೇಳುತ್ತಾರೆ. ಇದೇ ಧಾಟಿಯಲ್ಲಿ ಕ್ರಿಕೆಟ್ ಟೀಂ ಪಂದ್ಯವೊಂದನ್ನು ಸೋತ ಮಾತ್ರಕ್ಕೆ ಗದಾಪ್ರಹಾರ ಮಾಡುವುದು ಎಷ್ಟು ಸರಿ? ಬಿಸಿಸಿಐ ನಿಯೋಜಿತ ತಂಡ ಎನ್ನುವುದನ್ನು ಮರೆತು ಟೀಂ ಇಂಡಿಯಾ ಸೋಲು ಇಡೀ ದೇಶಕ್ಕೆ ಆದ ಅಪಮಾನ ಎಂದು ಬಿಂಬಿಸಿ ಜನರಲ್ಲಿ ಎದ್ದ ಆಕ್ರೋಶದ ಬೆಂಕಿಗೆ ತುಪ್ಪ ಸುರಿಯುವುದು ಸರಿಯೇ?

Story first published: Wednesday, January 3, 2018, 10:02 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+