ನಿವೃತ್ತಿ ಬಗ್ಗೆ ಗುಟ್ಟು ರಟ್ಟು ಮಾಡಿದ ಧೋನಿ
ಸಿಡ್ನಿ, ಮಾ.26: ವಿಶ್ವಕಪ್ ಕ್ರಿಕೆಟ್ ನ ಅತ್ಯಂತ ಹಿರಿಯ ನಾಯಕರ ಪೈಕಿ ಒಬ್ಬರೆನಿಸಿದ್ದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ತಮ್ಮ ನಿವೃತ್ತಿ ಗುಟ್ಟು ರಟ್ಟು ಮಾಡಿದ್ದಾರೆ. ವಿಶ್ವಕಪ್ 2015ರ ನಂತರ ಧೋನಿ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಹೊಂದುತ್ತಾರಾ? ಇದೇ ಧೋನಿ ಅವರ ಕೊನೆ ವಿಶ್ವಕಪ್ ಪಂದ್ಯವೇ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕ ಧೋನಿ ನನಗೀಗ ಇನ್ನೂ 33 ವರ್ಷ ವಯಸ್ಸು, ಈಗಲೇ ನಿವೃತ್ತಿ ಹೊಂದುವ ಮನಸ್ಸಿಲ್ಲ. ವಿಶ್ವ ಟಿ20 ಟೂರ್ನಿ ನಂತರ ಯೋಚನೆ ಮಾಡಿದರೆ ಆಯಿತು ಎನ್ನುವ ಮೂಲಕ ವಿಶ್ವಕಪ್ 2015 ಧೋನಿ ಅವರ ಕೊನೆ ವಿಶ್ವಕಪ್ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. [ಕ್ಯಾಪ್ಟನ್ಸ್ : ಹಿರಿಯರಿಂದ ಕಿರಿಯ ನಾಯಕರ ಪಟ್ಟಿ]

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಅತಿಥೇಯ ಆಸ್ಟ್ರೇಲಿಯಾ ತಂಡ ವಿರುದ್ಧ ಟೀಂ ಇಂಡಿಯಾ 95 ರನ್ ಗಳಿಂದ ಸೋಲು ಕಂಡಿತು. ಆದರೆ, ಸತತ 7 ಪಂದ್ಯಗಳನ್ನು ಗೆಲ್ಲಿಸಿದ ಧೋನಿ ಅವರ ನಾಯಕತ್ವದ ಬಗ್ಗೆ ಯಾರು ಸೊಲ್ಲೆತ್ತಿಲ್ಲ. [ಧೋನಿ ಮುರಿದಿರುವ ದಾಖಲೆಗಳ ಸಮಗ್ರ ಪಟ್ಟಿ]
ನಾನು ದೈಹಿಕವಾಗಿ ಸಮರ್ಥನಿದ್ದೇನೆ. ಮುಂದಿನ ವಿಶ್ವಕಪ್ ಆಡುವ ಬಗ್ಗೆ ಈಗಲೇ ಹೇಳಲಾರೆ, ಅದರೆ, ಸದ್ಯಕ್ಕಂತೂ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಹೊಂದುತ್ತಿಲ್ಲ. ಇನ್ನೂ ಸಾಕಷ್ಟು ಆಟವಾಡುವುದು ಬಾಕಿ ಇದೆ ಎಂದರು. [ಸ್ಪೆಷಲ್ ಸೆಂಚುರಿ ಬಾರಿಸಿದ ಧೋನಿ]
ಟೆಸ್ಟ್ ಕ್ರಿಕೆಟ್ ನಿಂದ ದಿಢೀರ್ ಆಗಿ ನಿವೃತ್ತಿ ಹೊಂದಿದ ಧೋನಿ ಅವರು ಏಕದಿನ ಕ್ರಿಕೆಟ್ ನಿಂದಲೂ ಅದೇ ರೀತಿ ನಿವೃತ್ತಿ ಹೊಂದುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಅದರೆ, ಎಲ್ಲಾ ಊಹಾಪೋಹಗಳಿಗೂ ಧೋನಿ ಫುಲ್ ಸ್ಟಾಪ್ ಇಟ್ಟಿದ್ದಾರೆ. [ಕೊನೆ ವಿಶ್ವಕಪ್ ಆಡಿದ ಟಾಪ್ 10 ಸ್ಟಾರ್ ಕ್ರಿಕೆಟರ್ಸ್?]
ಐಸಿಸಿ ಆಯೋಜನೆಯ ವಿಶ್ವಕಪ್, ವಿಶ್ವ ಟಿ20 ಹಾಗೂ ಚಾಂಪಿಯನ್ ಟ್ರೋಫಿ ಗೆದ್ದಿರುವ ಏಕೈಕ ನಾಯಕ ಧೋನಿ ಎಂಬುದನ್ನು ಮರೆಯುವಂತಿಲ್ಲ.ಅದರೆ, ಧೋನಿ ಸಾಧನೆ ಮರೆತ ಕೆಲ ಹುಚ್ಚು ಅಭಿಮಾನಿಗಳು ಧೋನಿ ಸೇರಿದಂತೆ ಕ್ರಿಕೆಟರ್ ಗಳ ವಿರುದ್ಧ ಕಿಡಿಕಾರಿ ಪ್ರತಿಭಟನೆ ನಡೆಸಿರುವ ಘಟನೆಯೂ ನಡೆದಿದೆ. [ಪ್ರತಿಭಟನೆ ಬಿಸಿ, ಧೋನಿ ಮನೆಗೆ ರಕ್ಷಣೆ]
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications