ಐಪಿಎಲ್ ಇತಿಹಾಸ ನಿರ್ಮಿಸಿದ್ದ ಅಲ್ಝಾರಿ 2019ರ ಸೀಸನ್‌ನಿಂದ ಹೊರಕ್ಕೆ!

ಮುಂಬೈ, ಏಪ್ರಿಲ್ 15: ಮುಂಬೈ ಇಂಡಿಯನ್ಸ್ ಪಾಲಿಗೆ ಆಘಾತಕಾರಿ ವಿಚಾರವೊಂದು ಸೋಮವಾರ (ಏಪ್ರಿಲ್ 15) ಹೊರಬಿದ್ದಿದೆ. ಮುಂಬೈ ಇಂಡಿಯನ್ಸ್ ವೇಗಿ ಅಲ್ಝಾರಿ ಜೋಸೆಫ್ ಐಪಿಎಲ್ ಸೀಸನ್‌ನಿಂದಲೇ ಹೊರಬಿದ್ದಿದ್ದಾರೆ. ಜೋಸೆಫ್ ಗಾಯಕ್ಕೀಡಾಗಿರುವುದು ಇದಕ್ಕೆ ಕಾರಣ.
ಮುಂಬೈ vs ಬೆಂಗಳೂರು ಪಂದ್ಯದ Live Score, ಸ್ಕೋರ್‌ಕಾರ್ಡ್ ಕೆಳಗಿದೆ
ಏಪ್ರಿಲ್ 13ರಂದು ಮುಂಬೈನಲ್ಲಿ ನಡೆದಿದ್ದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಗೆರೆ ದಾಟುವುದರಲ್ಲಿದ್ದ ಚೆಂಡನ್ನು ತಡೆಯಲೆತ್ನಿಸುವಾಗ ವೆಸ್ಟ್ ಇಂಡೀಸ್ ಯುವ ಆಟಗಾರ ಅಲ್ಝಾರಿ ಜೋಸೆಫ್ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಈ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ 4 ವಿಕೆಟ್‌ಗಳಿಂದ ಗೆದ್ದಿತ್ತು.
'ಅಲ್ಝಾರಿ ಜೋಸೆಫ್ ಅವರ ಭುಜದ ಮೂಳೆ ಮುರಿದಿದೆ. ಹೀಗಾಗಿ ಅವರು ಈ ಐಪಿಎಲ್ ಸೀಸನ್‌ನಿಂದ ಹೊರ ಬಿದ್ದಿದ್ದಾರೆ' ಎಂದು ಐಪಿಎಲ್ ಮೂಲವೊಂದು ತಿಳಿಸಿದೆ. ಏಪ್ರಿಲ್ 13ರ ಪಂದ್ಯದಲ್ಲಿ ಜೋಸೆಫ್ ಗಾಯಗೊಳ್ಳುವುದಕ್ಕೂ ಮುನ್ನ 3 ಓವರ್ ಎಸೆದು ವಿಕೆಟ್ ಪಡೆಯದೆ ರಾಜಸ್ಥಾನ್‌ಗೆ ಬರೋಬ್ಬರಿ 53 ರನ್ ನೀಡಿದ್ದರು.
ವಿಶೇಶವೆಂದರೆ ಅದಕ್ಕೂ ಹಿಂದೆ ಅಂದರೆ ಏಪ್ರಿಲ್ 6ರ ಪಂದ್ಯದಲ್ಲಿ ಅಲ್ಝಾರಿ ಅವರು ಹೈದರಾಬಾದ್ ವಿರುದ್ಧ 3.4 ಓವರ್ ಎಸೆದು ಕೇವಲ 12 ರನ್ ನೀಡಿ 6 ವಿಕೆಟ್ ಕೆಡವಿದ್ದರು. ಸದ್ಯಕ್ಕೆ ಐಪಿಎಲ್ ಇತಿಹಾಸದಲ್ಲಿ ಅತೀ ಕಡಿಮೆ ರನ್‌ಗೆ ಅತೀ ಹೆಚ್ಚು (6) ವಿಕೆಟ್ ಪಡೆದ ದಾಖಲೆ ಜೋಸೆಫ್ ಹೆಸರಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications