Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: KKR vs SRH ಪಂದ್ಯದ ವೇಳೆ ಶಾರೂಖ್‌ ಖಾನ್‌ ಧೂಮಪಾನ ಮಾಡಿದ ವಿಡಿಯೋ ವೈರಲ್‌

ಐಪಿಎಲ್‌ 2024 ಆರಂಭವಾಗಿದೆ. ಈಗಾಗಲೇ ಮೂರು ಪಂದ್ಯಗಳು ಮುಗಿದಿದ್ದು, ಅಭಿಮಾನಿಗಳ ರಸದೌತಣ ನೀಡುತ್ತಿದೆ. ಶನಿವಾರ ಕೋಲ್ಕತ್ತಾ ಅಂಗಳದಲ್ಲಿ ಕೆಕೆಆರ್‌ ಭರ್ಜರಿ ಜಯ ಸಾಧಿಸಿತು. ಈ ವೇಳೆ ಕೆಕೆಆರ್ ತಂಡದ ಸಹ ಮಾಲೀಕ ಶಾರೂಖ್ ಖಾನ್‌ ವಿಡಿಯೋ ಹಾಗೂ ಫೋಟೋ ಸಖತ್‌ ವೈರಲ್‌ ಆಗುತ್ತಿದೆ.

ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಕೆಕೆಆರ್‌ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕ ಫಿಲ್ ಸಾಲ್ಟ್‌ ಹಾಗೂ ಅಬ್ಬರದ ಬ್ಯಾಟರ್‌ ರಸೆಲ್ ಅವರ ಭರ್ಜರಿ ಆಟದ ನೆರವಿನಿಂದ ಆತಿಥೇಯ ತಂಡ ಬೃಹತ್ ಮೊತ್ತವನ್ನು ಕಲೆ ಹಾಕಿತು. ಆದರೆ ಎಸ್‌ಆರ್‌ಎಚ್‌ ಗೆಲುವಿನ ಸನಿಹದಲ್ಲಿ ಬಂದು ಎಡವಿತು. ಕೊನೆಯ ಓವರ್‌ ಮಾಡಿದ ಕೆಕೆಆರ್ ಬೌಲರ್ ಹರ್ಷಿತ್ ರಾಣಾ ಹೀರೋ ಆದರು. ಈ ಪಂದ್ಯವನ್ನು ಶಾರೂಖ್ ಖಾನ್‌ ಮೈದಾನದಲ್ಲಿ ವೀಕ್ಷಿಸಿದರು.

Bollywood Actor Shah Rukh Khan Clicked Smoking During KKR Vs SRH Match

ಆಗಿದ್ದೇನು?

ಶಾರುಖ್ ಖಾನ್ ಐಪಿಎಲ್ 17 ನೇ ಋತುವಿನಲ್ಲಿ ತಮ್ಮ ತಂಡದ ಪಂದ್ಯವನ್ನು ವೀಕ್ಷಿಸಲು ಈಡನ್ ಗಾರ್ಡನ್ಸ್ ಬಂದಿದ್ದರು. ಈ ವೇಳೆ ಅವರು ಧೂಮಪಾನ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಾರುಖ್ ಖಾನ್ ಧೂಮಪಾನ ಮಾಡುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಪಂದ್ಯದ ನಂತರ KKR ಮಾಲೀಕ ಶಾರುಖ್ ಖಾನ್ ಎಲ್ಲಾ KKR ಆಟಗಾರರನ್ನು ಭೇಟಿಯಾದರು. ಆಟಗಾರರಲ್ಲದೆ ಮೈದಾನದ ಸಿಬ್ಬಂದಿಯೊಂದಿಗೂ ಫೋಟೊ ತೆಗೆಸಿಕೊಂಡರು. ಆದರೆ, ಅವರು ಧೂಮಪಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಅವರಿಗೆ ತೊಂದರೆ ಮಾಡಬಹುದು. ಪ್ರಸ್ತುತ ಈಡನ್ ಗಾರ್ಡನ್‌ನಲ್ಲಿ ಅವರು ಧೂಮಪಾನ ಮಾಡಿದ ಘಟನೆಯ ಬಗ್ಗೆ ಬಂಗಾಳ ಕ್ರಿಕೆಟ್ ಸಂಸ್ಥೆ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದರ ಕುರಿತು ಇನ್ನು ಯಾವುದೇ ಪ್ರಕಟಣೆ ಹೊರ ಬಿದ್ದಿಲ್ಲ.

ಕ್ರಿಕೆಟ್ ಸ್ಟೇಡಿಯಂನಲ್ಲಿ ಶಾರುಖ್ ಖಾನ್ ವಿವಾದದ ಸುಳಿಗೆ ಸಿಲುಕಿಕೊಂಡಿದ್ದು, ಇದೇ ಮೊದಲಲ್ಲ. ಇದಕ್ಕೂ ಮುನ್ನ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೈದಾನದ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದಿದ್ದಕ್ಕಾಗಿ ಐದು ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. ಆ ಸಮಯದಲ್ಲಿ, ಈ ವಿಷಯವು ಹೆಚ್ಚು ಗಮನ ಸೆಳೆದಿತ್ತು.

Story first published: Sunday, March 24, 2024, 8:58 [IST]
Other articles published on Mar 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+