ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಖ್ಯಾತ ಚಲನಚಿತ್ರ ನಟ ಧರ್ಮೇಂದ್ರ ಸೋಮವಾರ (ನವೆಂಬರ್ 24) ನಿಧನರಾಗಿದ್ದಾರೆ. ಇವರು ಹೀ ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದರು. ಈ ಮೂಲಕ ಚಿತ್ರ ರಂಗದ ಪ್ರಮುಖ ಯುಗ ಅಂತ್ಯವಾದಂತೆ ಆಗಿದೆ. ಕಳೆದ ಕೆಲವು ದಿನಗಳಿಂದ ಧರ್ಮೆಂದ್ರ ಅವರು ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದರು. ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಬಳಿಕ ಇವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಅವರು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇದ್ದರು.
ದಿಗ್ಗಜ ನಟನ ನಿಧನಕ್ಕೆ ದೇಶದ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ. ಕ್ರೀಡಾ ಕ್ಷೇತ್ರದ ಖ್ಯಾತ ನಾಮ ಆಟಗಾರರು ಸಹ ಸಂತಾಪ ಸೂಚಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಧರ್ಮೆಂದ್ರ ಒಬ್ಬ ನಟನಷ್ಟೇ ಅಲ್ಲ, ಒಂದು ಯುಗವಾಗಿದ್ದರು. ಸರಳತೆ, ಶಕ್ತಿಯಲ್ಲಿ ಧೀಮಂತ ವ್ಯಕ್ತಿ, ಒಳ್ಳೆಯ ಹೃದಯವಂತ, ಶ್ರೇಷ್ಠ ಕಲಾವಿದ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಓ ಶಾಂತಿ ಎಂದು ಬರೆದಿದ್ದಾರೆ.

ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಸಾಮಾಜಿಕ ತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ನನಗೂ ಧರ್ಮೆಂದ್ರ ಅವರೆಂದರೆ ಅಚ್ಚುಮೆಚ್ಚು. ಅವರು ತಮ್ಮ ನಟನೆಯಿಂದ ನಮ್ಮನ್ನು ರಂಜಿಸಿದರು. ನಾನು ಅವರನ್ನು ಭೇಟಿಯಾದಾಗ ಅವರೊಂದಿಗಿನ ಸಂಬಂಧ ಇನ್ನಷ್ಟು ಗಟ್ಟಿಯಾಯಿತು. ಅವರಲ್ಲಿ ಎನರ್ಜಿ ಚೆನ್ನಾಗಿತ್ತು. ನಿನ್ನನ್ನು ನೋಡಿದ ನಂತರ ನನ್ನ ರಕ್ತವು 1 ಕಿಲೋಗ್ರಾಂಗಳಷ್ಟು ಹೆಚ್ಚಾಗುತ್ತದೆ" ಎಂದು ಹೇಳುತ್ತಿದ್ದರು ಎಂದು ಬರೆದಿದ್ದಾರೆ. ಅವರೊಬ್ಬ ಶ್ರೇಷ್ಠ ನಟ. ಇವರನ್ನು ಕಳೆದುಕೊಂಡಿದ್ದರಿಂದ 10 ಕಿಲೋಗ್ರಾಂಗಳಷ್ಟು ರಕ್ತವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ ಎಂದು ಸಚಿನ್ ತೆಂಡೂಲ್ಕರ್ ಪೋಸ್ಟ್ ಮಾಡಿದ್ದಾರೆ.
ನಾನು ನೋಡಿದ ಅತ್ಯಂತ ಸುಂದರ ನಟ. 'ಶೋಲೆ' ಬಹುಶಃ ಇದುವರೆಗೆ ಮಾಡಿದ ಶ್ರೇಷ್ಠ ಹಿಂದಿ ಚಿತ್ರ. ಅವರು ಹಿಂದಿ ಚಲನಚಿತ್ರದ ಶಾಶ್ವತ ದಂತಕತೆ ನಟ ಎಂದು ನವಜೋತ್ ಸಿಂಗ್ ಸಿಧು ಬರೆದಿದ್ದಾರೆ.
ನಾನು ಅಮಿತಾಬ್ ಬಚ್ಚನ ಅವರ ಊರಿನವನು. ನಾನು ವೀರುರನ್ನು ಜೈ ಅವರಷ್ಟೇ ಪ್ರೀತಿಸುತ್ತಿದ್ದೆ. ನಾನು ಅವರ ಅಭಿಮಾನಿಯಲ್ಲದ ವ್ಯಕ್ತಿಯನ್ನು ನೋಡಲೇ ಇಲ್ಲ ಎಂದು ಮೊಹಮ್ಮದ್ ಕೈಫ್ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.
"ನಾನು ಅಮಿತಾಬ್ ಬಚ್ಚನ್ ಅವರ ಊರಿನವನು, ಆದರೆ ನಾನು ವೀರು ಅವರನ್ನು ಜೈ ಅವರಷ್ಟೇ ಪ್ರೀತಿಸುತ್ತಿದ್ದೆ. ಎಲ್ಲರೂ ಧರ್ಮೇಂದ್ರ ಅವರನ್ನು ಪ್ರೀತಿಸುತ್ತಿದ್ದರು; ಅಭಿಮಾನಿಯಲ್ಲದ ಯಾರನ್ನೂ ನಾನು ಎಂದಿಗೂ ಭೇಟಿ ಮಾಡಿಲ್ಲ. ಆರ್‌ಐಪಿ ದಂತಕಥೆ" ಎಂದು ಮೊಹಮ್ಮದ್ ಕೈಫ್ ಬರೆದಿದ್ದಾರೆ. ಭಾರತೀಯ ಚಿತ್ರರಂಗದ ದಿಗ್ಗಜ ದಂತಕತೆಯನ್ನು ನಾವು ಕಳೆದುಕೊಂಡಿದ್ದೇವೆ. ಅವರು ತಮ್ಮ ನಟನೆಯ ಮೋಡಿಯಿಂದಲೇ ಅಪಾರ ಅಭಿಮಾನಿಗಳ ಮನ ಗೆದ್ದಿದ್ದರು ಎಂದು ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.