IND vs AUS 3rd Test: ಮ್ಯಾಥ್ಯೂ ಕುಹ್ನೆಮನ್‌ಗೆ ಐದು ವಿಕೆಟ್; ಸಾಧಾರಣ ಮೊತ್ತಕ್ಕೆ ಭಾರತ ಆಲೌಟ್!

ಪ್ರವಾಸಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯ ಬುಧವಾರ, ಮಾರ್ಚ್ 1ರಂದು ಇಂದೋರ್‌ನಲ್ಲಿ ಆರಂಭವಾಗಿದ್ದು, ಆತಿಥೇಯ ಭಾರತ ತಂಡ ಸಾಧಾರಣ ಮೊತ್ತಕ್ಕೆ ಸರ್ವಪತನ ಕಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಆಸ್ಟ್ರೇಲಿಯಾ ಸ್ಪಿನ್ನರ್‌ಗಳಾದ ಮ್ಯಾಥ್ಯೂ ಕುಹ್ನೆಮನ್, ನಾಥನ್ ಲಿಯಾನ್ ಮತ್ತು ಟಾಡ್ ಮರ್ಫಿ ಸ್ಪಿನ್ ಬಲೆಗೆ ಸಿಲುಕಿ 33.2 ಓವರ್‌ಗಳಲ್ಲಿ 109 ರನ್‌ಗಳಿಗೆ ಅಲೌಟ್ ಆಯಿತು.
ಭಾರತ ತಂಡದ ಪರ ಬ್ಯಾಟಿಂಗ್‌ನಲ್ಲಿ ನಾಯಕ ರೋಹಿತ್ ಶರ್ಮಾ 12 ರನ್, ಶುಭ್ಮನ್ ಗಿಲ್ 21 ರನ್, ಚೇತೇಶ್ವರ ಪೂಜಾರ 1 ರನ್, ವಿರಾಟ್ ಕೊಹ್ಲಿ 22 ರನ್, ರವೀಂದ್ರ ಜಡೇಜಾ 4 ರನ್, ಶ್ರೇಯಸ್ ಅಯ್ಯರ್ 0, ಶ್ರೀಕರ್ ಭರತ್ 17 ರನ್, ಅಕ್ಷರ್ ಪಟೇಲ್ 12 ರನ್, ರವಿಚಂದ್ರನ್ ಅಶ್ವಿನ್ 3 ರನ್, ಉಮೇಶ್ ಯಾದವ್ 17 ರನ್ ಮತ್ತು ಮೊಹಮ್ಮದ್ ಸಿರಾಜ್ 0 ಗಳಿಸಿದರು.

ಕ್ರಿಕೆಟ್ ವೃತ್ತಿಜೀವನದ 200ನೇ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಿದ ವಿರಾಟ್ ಕೊಹ್ಲಿ ತಮ್ಮ ಅವಿಸ್ಮರಣೀಯ ಪಂದ್ಯದಲ್ಲಿ ಶತಕ ಗಳಿಸಲು ವಿಫಲರಾದರು.
ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ತವರಿನಲ್ಲಿ 14ನೇ ಅತಿ ಕಡಿಮೆ ಮೊತ್ತವಾಗಿದೆ. ಇದೇ ವೇಳೆ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಅವರ ನಾಲ್ಕನೇ ಬಾರಿಗೆ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಉಮೇಶ್ ಯಾದವ್ ಅವರ 13 ಎಸೆತಗಳಲ್ಲಿ 17 ರನ್ ಗಳಿಸಿದ ಕಾರಣ ಭಾರತ 100 ರನ್ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಕಡಿಮೆ ಮೊತ್ತ
2004ರಲ್ಲಿ 104 ರನ್ - ಮುಂಬೈನ ವಾಂಖೆಡೆ
2017ರಲ್ಲಿ 105 ರನ್ - ಪುಣೆ
2017ರಲ್ಲಿ 107 ರನ್ - ಪುಣೆ
2023ರಲ್ಲಿ 109 ರನ್ - ಇಂದೋರ್
ಇನ್ನು ಆಸ್ಟ್ರೇಲಿಯಾ ತಂಡದ ಪರ ಬೌಲಿಂಗ್‌ನಲ್ಲಿ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಐದು ವಿಕೆಟ್ ಗೊಂಚಲು ಸಾಧನೆ ಮಾಡಿದರು. 9 ಓವರ್ ಬೌಲಿಂಗ್‌ನಲ್ಲಿ 16 ರನ್ ನೀಡಿ 5 ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಬಲವನ್ನು ಮುರಿದರು.
ಇನ್ನುಳಿದಂತೆ ಆಫ್ ಸ್ಪಿನ್ನರ್ ನಾಥನ್ ಲಿಯಾನ್ 11.2 ಓವರ್‌ಗಳಲ್ಲಿ 35 ರನ್ ನೀಡಿ 3 ವಿಕೆಟ್ ಕಿತ್ತರು. ಮತ್ತೊಬ್ಬ ಸ್ಪಿನ್ನರ್ ಟಾಡ್ ಮರ್ಫಿ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications