Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

BGT 2023: ಪ್ರವಾಸಿ ಆಸ್ಟ್ರೇಲಿಯಾಗೆ ಹೀನಾಯ ಸೋಲಿನ ಭವಿಷ್ಯ ನುಡಿದ ದೊಡ್ಡ ಗಣೇಶ್

Border Gavaskar Trophy: Dodda Ganesh interesting prediction said Australia have no chance against India

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕಾತುರತೆ ಹೆಚ್ಚಾಗುತ್ತಿದೆ. ಅಭಿಮಾನಿಗಳು ಮಾತ್ರವಲ್ಲ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ಸರಣಿಯ ವಿಚಾರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡ ಈ ಸರಣಿಯ ವಿಚಾರವಾಗಿ ಭವಿಷ್ಯ ನುಡಿದಿದ್ದು ಕುತೂಹಲ ಮೂಡಿಸಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಹೀನಾಯವಾಗಿ ಸೋಲು ಕಾಣಲಿದೆ ಎಂದು ಕನ್ನಡಿಗ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಭವಿಷ್ಯ ನುಡಿದಿದ್ದಾರೆ. ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ ಕನಿಷ್ಠ ಒಂದು ಪಂದ್ಯವನ್ನು ಕೂಡ ಗೆಲ್ಲುವ ಸಾಧ್ಯತೆಯಿಲ್ಲ ಎಂದು ದೊಡ್ಡ ಗಣೇಶ್ ಟ್ವೀಟ್ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಗಮನಾರ್ಹ ಅಂಶವೆಂದರೆ ಆಸ್ಟ್ರೇಲಿಯಾ ತಂಡ 2004-05ರ ಬಳಿಕ ಭಾರತದಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಈ ಹಿಂದೆ ಆಸ್ಟ್ರೇಲಿಯಾ ತಂಡ ಸ್ಪಿನ್ ವಿರುದ್ಧ ಕಳಪೆಯಾಗಿ ಆಡುತ್ತಿತ್ತು ಎಂಬುದು ಗಮನಿಸಿಬೇಕಿದೆ. ಹೀಗಾಗಿ ಈ ಬಾರಿಯ ಸರಣಿ ಹೆಚ್ಚು ಕುತೂಹಲಕಾರಿಯಾಗಿದೆ. ಆದರೆ ಈ ಬಾರಿಯೂ ಆಸ್ಟ್ರೇಲಿಯಾ ವಿರುದ್ಧ ಭಾರತದ ಸ್ಪಿನ್ನರ್‌ಗಳು ಅದ್ಭುತ ಪ್ರದರ್ಶನ ನೀಡಲಿದ್ದು ಟೆಸ್ಟ್ ಸರಣಿಯನ್ನು ಸುಲಭವಾಗಿ ತನ್ನ ವಶಕ್ಕೆ ಭಾರತ ಪಡೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ ದೊಡ್ಡ ಗಣೇಶ್.

"ನಾನು ಆಸ್ಟ್ರೇಲಿಯಾ ತಂಡದ ಆಶಾವಾದವನ್ನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಆಸ್ಟ್ರೇಲಿಯಾ ಟೆಸ್ಟ್ ಸರಣಿ ಗೆಲ್ಲಲಿದೆ ಎಂಬುದು ವಿಲಕ್ಷಣವಾಗಿದೆ. ಭಾರತದ ಸ್ಪಿನ್ ತ್ರಿವಳಿಗಳ ವಿರುದ್ಧ ಆಸಿಸ್ ಪಡೆಗೆ ಯಾವುದೇ ಅವಕಾಶವಿಲ್ಲ. ಅವರು ಒಂದು ಟೆಸ್ಟ್ ಪಂದ್ಯವನ್ನು ಕೂಡ ಗೆಲ್ಲಲು ಸಾಧ್ಯವಿಲ್ಲ. ಭಾರತ 3-0 ಅಂತರದಿಂದ ಗೆಲ್ಲುತ್ತದೋ ಅಥವಾ 4-0 ಅಂತರದಿಂದ ಗೆಲ್ಲಿದೆಯೋ ಎಂಬುದಷ್ಟೇ ಈ ಸರಣಿಯಲ್ಲಿ ನಿರ್ಧಾರವಾಗಬೇಕಿದೆ" ಎಂದಿದ್ದಾರೆ ಭಾರತದ ಮಾಜಿ ಕ್ರಿಕೆಟಿಗ ಕನ್ನಡಿಗ ದೊಡ್ಡ ಗಣೇಶ್.

ಟೆಸ್ಟ್ ಸರಣಿಯ ಬಗ್ಗೆ ಜಯವರ್ದನೆ ಭವಿಷ್ಯ
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ ಸರಣಿಯಲ್ಲಿ ಈ ಬಾರಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಸರಣಿ ಗೆಲ್ಲಲಿದೆ ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲ ಜಯವರ್ದನೆ ಭವಿಷ್ಯ ನುಡಿದಿದ್ದಾರೆ. ಭಾರತದ ಬೌಲರ್‌ಗಳ ಸವಾಲನ್ನು ಆಸಿಸ್ ದಾಂಡಿಗರು ದಿಟ್ಟವಾಗಿ ಎದುರಿಸಲಿದ್ದಾರೆ ಎಂದಿರುವ ಜಯವರ್ದನೆ, ಭಾರತದ ಬ್ಯಾಟರ್‌ಗಳ ವಿರುದ್ಧ ಆಸ್ಟ್ರೇಲಿಯಾದ ಬೌಲರ್‌ಗಳು ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ ಎಂದಿದ್ದಾರೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದಿಂದ ಗೆಲುವು ಸಾಧಿಸಲಿದೆ ಎಂದಿದ್ದಾರೆ ಲಂಕಾ ಮಾಜಿ ಕ್ರಿಕೆಟಿಗ.

ಇತ್ತಂಡಗಳ ಸ್ಕ್ವಾಡ್
ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್

ಭಾರತದ ಸ್ಕ್ವಾಡ್ ಹೀಗಿದೆ(ಮೊದಲ 2 ಟೆಸ್ಟ್ ಪಂದ್ಯಗಳಿಗೆ): ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ , ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಸೂರ್ಯಕುಮಾರ್ ಯಾದವ್

Story first published: Tuesday, February 7, 2023, 15:40 [IST]
Other articles published on Feb 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+