Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs Aus Test: ಆಸೀಸ್ ವಿರುದ್ಧ ದೊಡ್ಡ ದಾಖಲೆ ಮೇಲೆ ಕಣ್ಣಿಟ್ಟ ಅಶ್ವಿನ್; ಭಜ್ಜಿ, ಕುಂಬ್ಳೆ ಸಾಧನೆ ಮೀರುತ್ತಾರಾ?

Border-Gavaskar Trophy: Indias Ravichandran Ashwin Eyes On Big Record Against Australia

ವಿಶ್ವದ ಬಲಿಷ್ಠ ಎರಡು ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತದಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುವ ಯೋಜನೆಯನ್ನು ತಿರಸ್ಕರಿಸಿದ ಪ್ರವಾಸಿ ಆಸ್ಟ್ರೇಲಿಯಾ ತಂಡ, ವಿಶಿಷ್ಟ ರೀತಿಯಲ್ಲಿ ಟೆಸ್ಟ್ ಸರಣಿ ಗೆಲುವಿಗಾಗಿ ಅಭ್ಯಾಸಕ್ಕಾಗಿ ಬೆಂಗಳೂರಿನ ಆಲೂರು ಮೈದಾನವನ್ನು ಆಯ್ಕೆ ಮಾಡಿಕೊಂಡಿದ್ದರೆ, ಇತ್ತ ಭಾರತ ತಂಡ ಕಳೆದ ನಾಲ್ಕೈದು ದಿನಗಳಿಂದ ನಾಗ್ಪುರದಲ್ಲಿ ಅಭ್ಯಾಸ ನಡೆಸುತ್ತಿದೆ.

ಇನ್ನು ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಮತ್ತು ಭಾರತದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಡುವಿನ ಕಹಾನಿ ಎಲ್ಲರಿಗೂ ತಿಳಿದೇ ಇದೆ. ಅಶ್ವಿನ್ ಅವರು ಎದುರಾಳಿ ಬ್ಯಾಟರ್‌ಗಳನ್ನು ತಮ್ಮ ಸ್ಪಿನ್ ಖೆಡ್ಡಾಗೆ ಸಿಲುಕಿಸುವಲ್ಲಿ ನಿಷ್ಣಾತರು.

Border-Gavaskar Trophy: Indias Ravichandran Ashwin Eyes On Big Record Against Australia

ಆಸ್ಟ್ರೇಲಿಯಾ ವಿರುದ್ಧದ 18 ಟೆಸ್ಟ್ ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್ 89 ವಿಕೆಟ್‌ ಪಡೆದಿದ್ದಾರೆ. ಹೀಗಾಗಿ ಆಸೀಸ್ ಆಟಗಾರರಿಗೆ ಅಶ್ವಿನ್ ದೊಡ್ಡ ಕಂಟಕವಾಗಿ ಪರಿಣಮಿಸಿದ್ದಾರೆ. ಭಾರತದ ಆಫ್ ಸ್ಪಿನ್ನರ್ ಎದುರಿಸುವುದು ಹೇಗೆ ಎಂಬ ಯೋಚನೆಯಲ್ಲಿ ಮಗ್ನರಾಗಿದ್ದಾರೆ.

ತವರಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿ ಆಫ್-ಸ್ಪಿನ್ನರ್ ತಮ್ಮ ವಿಕೆಟ್ ಗಳಿಕೆಯನ್ನು 100ಕ್ಕೆ ಏರಿಸಲು ಸಜ್ಜಾಗಿದ್ದಾರೆ. ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ತಮ್ಮ ಸ್ಪಿನ್ ಬಲೆಗೆ ಬೀಳಿಸಲು ಎಲ್ಲ ತಯಾರಿ ನಡೆಸುತ್ತಿದ್ದಾರೆ.

ಇನ್ನು ಆಸ್ಟ್ರೇಲಿಯಾ ವಿರುದ್ಧ 18 ಟೆಸ್ಟ್‌ಗಳಲ್ಲಿ 95 ವಿಕೆಟ್‌ಗಳನ್ನು ಪಡೆದಿರುವ ಮತ್ತು 449 ಟೆಸ್ಟ್ ವಿಕೆಟ್‌ ದಾಖಲೆಯನ್ನು ಹೊಂದಿರುವ ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಮೀರಿಸಲು 36 ವರ್ಷದ ರವಿಚಂದ್ರನ್ ಅಶ್ವಿನ್‌ಗೆ ಇನ್ನೂ ಆರು ವಿಕೆಟ್‌ಗಳ ಅಗತ್ಯವಿದೆ.

Border-Gavaskar Trophy: Indias Ravichandran Ashwin Eyes On Big Record Against Australia

ಭಾರತದ ಮತ್ತೊಬ್ಬ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಒಟ್ಟಾರೆ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಕಾಂಗರೂ ಪಡೆಗಳ ವಿರುದ್ಧ ಆಡಿದ 20 ಟೆಸ್ಟ್ ಪಂದ್ಯಗಳಲ್ಲಿ ಅವರು 111 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.

ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳು:

1) ಅನಿಲ್ ಕುಂಬ್ಳೆ- 20 ಪಂದ್ಯಗಳಲ್ಲಿ 111 ವಿಕೆಟ್‌ಗಳು

2) ಹರ್ಭಜನ್ ಸಿಂಗ್- 18 ಪಂದ್ಯಗಳಲ್ಲಿ 95 ವಿಕೆಟ್‌ಗಳು

3) ಆರ್ ಅಶ್ವಿನ್- 18 ಪಂದ್ಯಗಳಲ್ಲಿ 89 ವಿಕೆಟ್‌ಗಳು

4) ಕಪಿಲ್ ದೇವ್- 20 ಪಂದ್ಯಗಳಲ್ಲಿ 79 ವಿಕೆಟ್‌ಗಳು

5) ರವೀಂದ್ರ ಜಡೇಜಾ- 12 ಪಂದ್ಯಗಳಲ್ಲಿ 63 ವಿಕೆಟ್‌ಗಳು

Story first published: Tuesday, February 7, 2023, 8:10 [IST]
Other articles published on Feb 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+