Ind vs Aus: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತದ ಮಹಾ ರಣತಂತ್ರ: ಆಸ್ಟ್ರೇಲಿಯಾ ಲೆಕ್ಕಾಚಾರ ಬುಡಮೇಲು!

ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದ್ದು ಎರಡು ತಂಡಗಳು ಕೂಡ ಅಂತಿಮ ಹಂತದ ಸಿದ್ಧತೆ ನಡೆಸುತ್ತಿದೆ. ವಿಸಿಎ ಕ್ರೀಡಾಂಗಣ ಈ ಮೆಗಾ ಕದನಕ್ಕೆ ವೇದಿಕೆಯಾಗಿದ್ದು ಕ್ರಿಕೆಟ್ ಅಭಿಮಾನಿಗಳು ಚಿತ್ತ ನೆಟ್ಟಿದ್ದಾರೆ. ಈ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಮೊದಲ ಪಂದ್ಯದಲಿಯೇ ಮೇಲುಗೈ ಸಾಧಿಸಲು ದೊಡ್ಡ ರಣತಂತ್ರವನ್ನು ಸಿದ್ಧಪಡಿಸಿಕೊಂಡಿದ್ದು ಆಸಿಸ್ ಪಡೆ ದಂಗಾಗುವುದರಲ್ಲಿ ಅನುಮಾನವಿಲ್ಲ.
ನಾಗ್ಪುರ ಟೆಸ್ಟ್ ಪಂದ್ಯಕ್ಕೆ ಸ್ಪಿನ್ ಸ್ನೇಹಿ ಪಿಚ್ ಸಿದ್ಧಗೊಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಇಬ್ಬರಲ್ಲ ಮೂವರಲ್ಲ, ಬರೊಬ್ಬರಿ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಭಾರತ ತಂಡ ಈ ರಣತಂತ್ರದೊಂದಿಗೆ ಕಣಕ್ಕಿಳಿಯುವುದು ನಿಜವೇ ಆದರೆ ಆಸಿಸ್ ಪಡೆಗೆ ದೊಡ್ಡ ಆಘಾತ ಎದುರಾಗುವುದರಲ್ಲಿ ಅನುಮಾನವಿಲ್ಲ. ಈ ಮೂಲಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಪಂದ್ಯದಲ್ಲಿಯೇ ಹಿನ್ನಡೆಯುಂಟು ಮಾಡಿ ಸರಣಿಯಲ್ಲಿ ಹಿಡಿತ ಸಾಧಿಸಲು ಚಿತ್ತ ನೆಟ್ಟಿದೆ. ಟೀಮ್ ಇಂಡಿಯಾ ಈ ರಣತಂತ್ರದೊಂದಿಗೆ ಕಣಕ್ಕಿಳಿಯುವುದು ದೃಢವಾದರೆ ಇದು ಆಸ್ಟ್ರೇಲಿಯಾ ತಂಡಕ್ಕೂ ಅನಿರೀಕ್ಷಿತವಾಗಿರಲಿದೆ.

ಭಾರತದ ಆಡುವ ಬಳಗದಲ್ಲಿ 4 ಸ್ಪಿನ್ನರ್‌ಗಳು
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಗ್ಪುರ ಪಿಚ್ ಸ್ಪಿನ್ನರ್‌ಗಳಿಗೆ ಉತ್ತಮವಾಗಿ ನೆರವು ನೀಡುವುದು ಸ್ಪಷ್ಟ. ಹೀಗಾಗಿ ತಂಡದಲ್ಲಿರುವ ನಾಲ್ವರು ಸ್ಪಿನ್ನರ್‌ಗಳು ಕೂಡ ಕಣಕ್ಕಿಳಿಯುವ ಸಾಧ್ಯತೆಯಿದೆ. ಆರ್ ಅಶ್ವಿನ್ ಮುಂದಾಳತ್ವದಲ್ಲಿ ರವೀಂದ್ರ ಜಡೇಜಾ ಅಕ್ಷರ್ ಪಟೇಲ್ ಕುಲ್‌ದೀಪ್ ಯಾದವ್ ಜೊತೆಗೆ ಅಕ್ಷರ್ ಪಟೇಲ್ ಕೂಡ ಸ್ಥಾನ ಪಡೆಯುವ ಸಾಧ್ಯತೆಯಿದೆ. ಈ ಪ್ರಖರ ಬೌಲಿಂಗ್ ಪಡೆಯನ್ನು ಎದುರಿಸುವುದು ಆಸಿಸ್ ಪಡೆಗೆ ಅಕ್ಷರಶಃ ದುಃಸ್ವಪ್ನವಾಗಲಿದೆ. ಒಂದೆಡೆ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಜೋಡಿ ಸುದೀರ್ಘ ಕಾಲದಿಂದ ಟೆಸ್ಟ್ ಮಾದರಿಯಲ್ಲಿ ಅದ್ಭುತವಾಗಿ ಪ್ರದರ್ಶನ ನಿಡಿ ಮಿಂಚುತ್ತಿದ್ದರೆ ಅಕ್ಷರ್ ಪಟೇಲ್ ಕಳೆದ ಒಂದೆರಡು ವರ್ಷಗಳಲ್ಲಿ ಭಾರತದಲ್ಲಿ ನಡೆದ ಟೆಸ್ಟ್ ಸರಣಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಮತ್ತೊಂದೆಡೆ ಕುಲ್‌ದೀಪ್ ಯಾದವ್ ಇತ್ತೀಚೆಗೆ ಭರ್ಜರಿ ಫಾರ್ಮ್‌ನಲ್ಲಿದ್ದು ಮಿಂಚುತ್ತಿದ್ದಾರೆ. ಈ ಬಲಾಢ್ಯ ಸ್ಪಿನ್ ವಿಭಾಗ ಆಸ್ಟ್ರೇಲಿಯಾ ದಾಂಡಿಗರ ಕಂಗೆಡಿಸುವುದು ಸ್ಪಷ್ಟ.

ಫಲಿಸಲಿದೆಯಾ ಈ ರಣತಂತ್ರ?
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನಂತಾ ಬೌನ್ಸಿ ಪಿಚ್‌ಗಳಲ್ಲಿ ಸಾಮಾನ್ಯವಾಗಿ ಆ ತಂಡಗಳು ನಾಲ್ವರು ವೇಗಿಗಳೊಂದಿಗೆ ಸಾಮಾನ್ಯವಾಗಿ ಕಣಕ್ಕಿಳಿಯುವುದನ್ನು ನಾವು ಕಾಣಬಹುದು. ಅಲ್ಲಿನ ಪಿಚ್‌ಗೆ ಪೂರಕವಾಗಿ ಆ ರಣತಂತ್ರವನ್ನು ಆ ತಂಡಗಳು ಮಾಡಿಕೊಂಡಿರುತ್ತವೆ. ಹಾಗಾಗಿ ಭಾರತದ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುತ್ತದೆ ಎಂಬುದು ಅರಿವಿರುವ ಕಾರಣ ವೇಗಿಗಳ ಬದಲಿಗೆ ಹೆಚ್ಚುವರಿ ಸ್ಪಿನ್ನರ್‌ಗಳನ್ನೇ ಕಣಕ್ಕಿಳಿಸುವ ಯೋಜನೆಯಲ್ಲಿದೆ ಮ್ಯಾನೇಜ್‌ಮೆಂಟ್. ಹಾಗಾಗಿ ಭಾರತ ಕೇವಲ ಓರ್ವ ವೇಗಿಯೊಂದಿಗೆ ಮೊದಲ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.

ಭಾರತದ ಬ್ಯಾಟಿಂಗ್‌ಗೆ ದೊರೆಯಲಿದೆ ವಿಶೇಷ ಬಲ
ಇನ್ನು ಟೀಮ್ ಇಂಡಿಯಾ ಈ ರಣತಂತ್ರದೊಂದಿಗೆ ಕಣಕ್ಕಿಳಿದರೆ ಭಾರತದ ಬ್ಯಾಟಿಂಗ್ ವಿಭಾಗಕ್ಕೂ ವಿಶೇಷ ಬಲ ದೊರೆಯುವುದರಲ್ಲಿ ಅನುಮಾನವಿಲ್ಲ. ತಂಡದ ಸ್ಪಿನ್ನರ್‌ಗಳಾ್ ಆರ್ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಈ ಮೂವರು ಕೂಡ ಬ್ಯಾಟಿಂಗ್‌ನಲ್ಲಿಯೂ ಅದ್ಭುತವಾಗಿ ಕೊಡುಗೆ ನೀಡುವ ಆಟಗಾರರಾಗಿದ್ದಾರೆ. ಅದರಲ್ಲೂ ಆರ್ ಅಶ್ವಿನ್ ಸ್ಪಿನ್ನರ್‌ಗಳ ವಿರುದ್ಧ ಟೆಸ್ಟ್‌ನಲ್ಲಿ ಅದ್ಭುತ ಕೌಶಲ್ಯವನ್ನು ಹೊಂದಿದ್ದಾರೆ. ಇದು ಭಾರತ ತಂಡಕ್ಕೆ ಮತ್ತಷ್ಟು ಬಲ ನೀಡುವುದರಲ್ಲಿ ಅನುಮಾನವಿಲ್ಲ.

ಕುತೂಹಲ ಮೂಡಿಸಿದೆ ಆಡುವ ಬಳಗ
ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಯಾವೆಲ್ಲಾ ಆಟಗಾರಿಗೆ ಅವಕಾಶ ದೊರೆಯಬಹುದು ಎಂಬುದು ಕುತೂಹಲವಾಗಿದ್ದು ಇದಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ದೊರೆಯಲಿದೆ. ಆರಂಬಿಕ ಸ್ಥಾನದಲ್ಲಿ ಶುಬ್ಮನ್ ಗಿಲ್ ಅಥವಾ ಕೆಎಲ್ ರಾಹುಲ್ ಎಂಬ ಚರ್ಚೆಯಿಂದ ಹಿಡಿದು ಸೂರ್ಯಕುಮಾರ್‌ಗೆ ಸ್ಥಾನ, ವಿಕೆಟ್ ಕೀಪರ್ ಯಾರು? ಈ ಎಲ್ಲಾ ಪ್ರಶ್ನೆಗಳಿಗೂ ಮ್ಯಾನೇಜ್‌ಮೆಂಟ್ ಸ್ಪಷ್ಟ ಉತ್ತರವನ್ನು ಕಂಡುಕೊಂಡು ನಿರ್ಧಾರವನ್ನು ಪ್ರಕಟಿಸಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications