ಒಂದು ಎಸೆತಕ್ಕೆ ಎರಡು ವಿಕೆಟ್ ತೆಗೆದ ಮುಂಬೈನ ಕೃನಾಲ್ ಪಾಂಡ್ಯಾ

ನಿನ್ನೆ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ವಿರೋಚಿತ೫ ಹೋರಾಟದ ಹೊರತಾಗಿಯೂ ಆರ್‌ಸಿಬಿ 42 ರನ್‌ಗಳ ಅಂತರದಿಂದ ಸೋಲನ್ನನುಭವಿಸಿರು.
ಮುಂಬೈನ ಬೌಲರ್‌ಗಳು ವಿರಾಟ್ ಕೊಹ್ಲಿ ಹೊರತುಪಡಿಸಿ ಇನ್ನೆಲ್ಲಾ ಬ್ಯಾಟ್ಸ್‌ಮನ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಅದರಲ್ಲಿಯೂ ಅತ್ಯುತ್ತಮ ದಾಳಿ ನಡೆಸಿದ ಕೃನಾಲ್ ಪಾಂಡ್ಯಾ ಮಂದೀಪ್ ಸಿಂಗ್, ಕೋರಿ ಆಂಡರ್ಸನ್ ಮತ್ತು ವಾಷಿಂಗ್ಟನ್ ಸುಂದರ್ ವಿಕೆಟ್ ಕಬಳಿಸಿ ಆರ್‌ಸಿಬಿ ಗೆಲುವಿನ ಆಸೆಗೆ ತಣ್ಣೀರು ಸುರಿದರು.
ನಿನ್ನೆಯ ಪಂದ್ಯದಲ್ಲಿ ಕೃನಾಲ್ ಪಾಂಡ್ಯಾ ಒಂದೇ ಎಸೆತದಲ್ಲಿ ಎರಡು ಗಳಿಸಿ ವಿಶಿಷ್ಟ ದಾಖಲೆಯೊಂದನ್ನು ಬರೆದರು. ಮಂದೀಪ್ ಸಿಂಗ್ ಮತ್ತು ಕೋರಿ ಆಂಡರ್ಸನ್ ಅವರನ್ನು ಕೃನಾಲ್ ಪಾಂಡ್ಯಾ ಒಂದೇ ಎಸೆತದಲ್ಲಿ ಔಟ್ ಮಾಡಿದರು. ಅದು ಹೇಗಪ್ಪಾ ಎಂದು ಯೋಚಿಸುತ್ತಿದ್ದೀರಾ. ತಿಳಿದುಕೊಳ್ಳಲು ಮುಂದೆ ಓದಿ..
ಕೃನಾಲ್ ಎಸೆದ 10ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮಂದೀಪ್ ಸಿಂಗ್ ಸ್ಕ್ರೀಸ್ ಬಿಟ್ಟು ದೊಡ್ಡ ಹೊಡೆತ ಹೊಡೆಯಲೆಂದು ಫಾರ್ವರ್ಡ್ ಬಂದರು ಆಗ ಕೃನಾಲ್ ಬೇಕೆಂದೆ ವೈಡ್ ಎಸೆತ ಹಾಕಿದರು ಅದನ್ನು ಚಾಕಚಕ್ಯತೆಯಿಂದ ಕಲೆಕ್ಟ್ ಮಾಡಿದ ಕೀಪರ್ ಇಶಾನ್ ಕಿಶಾನ್ ಬೇಲ್ಸ್ ಎಗರಿಸಿದರು. ಕೃನಾಲ್ ಎಸೆದ ಎಸೆತ ವೈಡ್ ಆದ್ದರಿಂದ ಆ ಚೆಂಡು ಕೌಂಟ್ ಆಗಲಿಲ್ಲ ಆದರೆ ವಿಕೆಟ್ ದೊರೆಯಿತು.
ನಂತರದ ಎಸೆತದಲ್ಲಿ ಕೊರಿ ಆಂಡರ್ಸನ್ ದೊಡ್ಡ ಹೊಡೆತಕ್ಕೆ ಕೈಹಾಕಿ ಡುಮಿನಿಗೆ ಕ್ಯಾಚಿತ್ತು ಹೊರ ನಡೆದರು. ಹೀಗಾಗಿ ಕೃನಾಲ್ ಪಾಂಡ್ಯಾ 10ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಎರಡು ವಿಕೆಟ್ ಪಡೆದು ದಾಖಲೆ ನಿರ್ಮಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications