Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli vs Sam Konstas: ವಿರಾಟ್ ನಡೆ ಬಗ್ಗೆ ತುಟ್ಟಿ ಬಿಚ್ಚಿದ ಸ್ಯಾಮ್‌ ಕಾನ್‌ಸ್ಟಾಸ್

ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಮೊದಲ ದಿನವೇ ಕುತೂಹಲ ಮೂಡಿಸಿದೆ. ಮೈದಾನದಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವರ್ತನೆ ಕಂಡು ಎಲ್ಲರೂ ಅಚ್ಚರಿಗೊಂಡಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಆಸ್ಟ್ರೇಲಿಯಾ ತಂಡದ ಯುವ ಬ್ಯಾಟರ್ ಸ್ಯಾಮ್‌ ಕಾನ್‌ಸ್ಟಾಸ್ ಮತ್ತು ವಿರಾಟ್ ಕೊಹ್ಲಿ ನಡುವೆ ವಾಗ್ವಾದ ನಡೆದಿದೆ.

ಸ್ಯಾಮ್‌ ಕಾನ್‌ಸ್ಟಾಸ್ ಮತ್ತು ವಿರಾಟ್ ಕೊಹ್ಲಿ ನಡುವಿನ ವಾಗ್ವಾದ ವಿಡಿಯೋ ಸಾಮಾಜಿಕ ಜಾಲತಾಣಡಲ್ಲಿ ಸಖತ್ ಸದ್ದು ಮಾಡುತ್ತಿದೆ. ಆಸ್ಟ್ರೇಲಿಯಾ ಇನಿಂಗ್ಸ್‌ನ 10ನೇ ಓವರ್‌ನ ನಂತರ ಆಟಗಾರರು ಒಬ್ಬರನ್ನೊಬ್ಬರು ಪಾಸ್ ಮಾಡುವಾಗ ಕೊಹ್ಲಿ ಮತ್ತು ಕಾನ್‌ಸ್ಟಾಸ್ ಅವರ ಭುಜಗಳು ಡಿಕ್ಕಿ ಹೊಡೆದವು. ಇಬ್ಬರೂ ಆಟಗಾರರು ಒಬ್ಬರನ್ನೊಬ್ಬರು ಹಿಂತಿರುಗಿ ನೋಡಿದರು. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಪಂದ್ಯದ ನಂತರ ವಿರಾಟ್ ಕೊಹ್ಲಿ ನಡೆ ಬಗ್ಗೆ ಸ್ಯಾಮ್‌ ಕಾನ್‌ಸ್ಟಾಸ್ ತುಟಿ ಬೆಚ್ಚಿದ್ದಾರೆ.

Boxing Day Test What Sam Constas said about Virat Kohli s collision

ಕಾನ್‌ಸ್ಟಾಸ್ ಹೇಳಿದ್ದೇನು?

ಪಂದ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾನ್‌ಸ್ಟಾಸ್, ಈ ಘಟನೆ ಆಕಸ್ಮಿಕವಾಗಿ ಆಗಿರುವುದು. ನಾನು ನನ್ನ ಹ್ಯಾಂಡ್ ಗ್ಲೋಸ್ ಸರಿಪಡಿಸಿಕೊಳ್ಳುತ್ತಿರುವಾಗ ವಿರಾಟ್ ಕೊಹ್ಲಿ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದ್ದಾರೆ. ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ ಇದೆಲ್ಲಾ ಒಮ್ಮೊಮ್ಮೆ ನಡೆಯುತ್ತಿರುತ್ತದೆ ಹೇಳಿದ್ದಾರೆ. ಈ ಹೇಳಿಕೆ ನಂತರ ಸಾಮಾಜಿಕ ಜಾಲತಾಣದಲ್ಲಿ ಕಾನ್‌ಸ್ಟಾಸ್ ಅವರು ಸಾಕಷ್ಟು ಮೆಚ್ಚುಗೆ ಪಾತ್ರರಾಗಿದ್ದಾರೆ.

ಕೊಹ್ಲಿಗೆ ದಂಡ

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ವೇಳೆ ಸ್ಯಾಮ್ ಕಾನ್‌ಸ್ಟಾಸ್ ಭುಜಕ್ಕೆ ಡಿಕ್ಕಿ ಹೊಡೆದ ವಿರಾಟ್ ಕೊಹ್ಲಿ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ದಂಡ ವಿಧಿಸಿದೆ. ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡ ಮತ್ತು ಒಂದು ಡಿ ಮೆರಿಟ್ ಪಾಯಿಂಟ್ ಅನ್ನು ಸಹಾ ದಾಖಲಿಸಲಾಗಿದೆ.

ರಿಕಿ ಪಾಂಟಿಂಗ್ ಟೀಕೆ

ಸ್ಯಾಮ್ ಕಾನ್‌ಸ್ಟಾಸ್ ಭುಜಕ್ಕೆ ಭುಜ ತಾಗಿಸಲೆಂದೇ ವಿರಾಟ್ ಕೊಹ್ಲಿ ಪಿಚ್ ದಾಟಿ ಬಂದಿದ್ದರು. ಕಾನ್‌ಸ್ಟಾಸ್ ಕೆಣಕುವ ಉದ್ದೇಶ ಕೊಹ್ಲಿಯಲ್ಲಿತ್ತು. ಅಂಪೈರ್, ಮ್ಯಾಚ್ ರೆಫ್ರೀ ಈ ಘಟನೆಯನ್ನು ಸರಿಯಾಗಿ ಪರಿಶೀಲನೆ ಮಾಡುತ್ತಾರೆ ಅಂದುಕೊಂಡಿದ್ದೇನೆ ಎಂದು ಆಸ್ಟ್ರೇಲಿಯಾ ಮಾಜಿ ಬ್ಯಾಟರ್ ರಿಕಿ ಪಾಂಟಿಂಗ್ ಅವರು ವಿರಾಟ್ ಕೊಹ್ಲಿಗೆ ಐಸಿಸಿ ದಂಡ ವಿಧಿಸುವ ಮುನ್ನ ಟೀಕೆ ಮಾಡಿದ್ದರು.

ಆಸ್ಟ್ರೇಲಿಯಾ ಮೇಲುಗೈ

ಮೆಲ್ಬೋರ್ನ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಭಾರತ ಎದುರು ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಈ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಭರ್ಜರಿ ಆರಂಭ ಕಂಡಿತು. ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಸ್ಯಾಮ್ ಕಾನ್‌ಸ್ಟಾಸ್, ಮತ್ತು ಉಸ್ಮಾನ್ ಖವಾಜಾ ಅವರ ಅರ್ಧಶತಕ ಸಿಡಿಸಿ ಮಿಂಚಿದರು. ಆಸ್ಟ್ರೇಲಿಯಾ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 311 ರನ್‌ಗಳನ್ನು ಕಲೆ ಹಾಕಿದೆ. ಎರಡನೇ ದಿನ ಟೀಮ್ ಇಂಡಿಯಾಗೆ ಕಠಿಣ ಸವಾಲು ಎದುರಾಗಲಿದೆ.

Story first published: Thursday, December 26, 2024, 17:53 [IST]
Other articles published on Dec 26, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+