ಆಸ್ಟ್ರೇಲಿಯಾದ ಕ್ರಿಕೆಟರ್ ಬ್ರಾಡ್ ಹಡಿನ್ ವೃತ್ತಿ ಬದುಕಿನ ಹಿನ್ನೋಟ
ಸಿಡ್ನಿ, ಸೆ. 09: ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ರಾಡ್ ಹಡಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷ ವಯಸ್ಸಿನ ಸಿಡ್ನಿ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಅದರೆ, ಬಿಗ್ ಬಾಷ್ ಲೀಗ್ (ಬಿಬಿಎಲ್) ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಆಡುವುದಾಗಿ ಘೋಷಿಸಿದ್ದಾರೆ. ಬ್ರಾಡ್ ಹಡಿನ್ ವೃತ್ತಿ ಬದುಕಿನ ಹಿನ್ನೋಟ, ದಾಖಲೆಗಳ ವಿವರ ಮುಂದಿದೆ.
ಕಳೆದ ಮೇನಲ್ಲಿ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಹಡಿನ್ ಅವರು ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ತಂದುಕೊಟ್ಟ ತಂಡದಲ್ಲಿ ಎರಡು ಬಾರಿ ಸ್ಥಾನ ಪಡೆದಿದ್ದರು. 66 ಟೆಸ್ಟ್ ಪಂದ್ಯಗಳನ್ನಾಡಿರುವ ಹಡಿನ್ 3266 ರನ್ ಗಳಿಸಿದ್ದಾರೆ. ಇತ್ತೀಚಿನ ಆಷ್ಯಸ್ ಸರಣಿಯಲ್ಲೂ ಆಡಿದ್ದರು. 126 ಏಕದಿನ ಕ್ರಿಕೆಟ್ ಪಂದ್ಯ ಹಾಗೂ 34 ಟಿ20 ಪಂದ್ಯಗಳನ್ನಾಡಿದ್ದಾರೆ.[ಆಸ್ಟ್ರೇಲಿಯಾ ಮಣಿಸಿ ತ್ರಿಕೋನ ಸರಣಿ ಗೆದ್ದ ಭಾರತ ಎ]
ಹಡಿನ್ ಅವರು ಆಸೀಸ್ ಪರ ಗರಿಷ್ಠ ಟೆಸ್ಟ್ ಪಂದ್ಯಗಳನ್ನು ಆಡಿರುವ 4ನೇ ವಿಕೆಟ್‌ಕೀಪರ್ ಬ್ಯಾಟ್ಸ್ ಮನ್. ಇಯಾನ್ ಹೀಲಿ (119 ಪಂದ್ಯ), ಆಡಂ ಗಿಲ್‌ಕ್ರಿಸ್ಟ್(96) ಹಾಗೂ ರಾಡ್ ಮಾರ್ಷ್(96) ಆಸೀಸ್‌ನ ಪರ ಗರಿಷ್ಠ ಪಂದ್ಯಗಳನ್ನು ಆಡಿರುವ ವಿಕೆಟ್‌ಕೀಪರ್‌ಗಳಾಗಿದ್ದಾರೆ.
ಭಾರತದಲ್ಲಿ ನಡೆಯುವ ಐಪಿಎಲ್‌ನಲ್ಲಿ ಮೈಕಲ್ ಕ್ಲಾರ್ಕ್ ಹಾಗೂ ಬ್ರಾಡ್ ಹಡಿನ್ಆಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹಡಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸುವುದಕ್ಕೂ ಮುನ್ನ ಆಸೀಸ್ ಆಲ್‌ರೌಂಡರ್ ಶೇನ್ ವ್ಯಾಟ್ಸನ್, ನಾಯಕ ಮೈಕಲ್ ಕ್ಲಾರ್ಕ್, ರಿಯಾನ್ ಹ್ಯಾರಿಸ್ ಹಾಗೂ ಆರಂಭಿಕ ಆಟಗಾರ ಕ್ರಿಸ್ ರೋಜರ್ಸ್ ನಿವೃತ್ತಿ ಘೋಷಿಸಿರುವುದನ್ನು ಇಲ್ಲಿ ಸ್ಮರಿಸಬಹುದು.[ಟೆಸ್ಟ್ ಕ್ರಿಕೆಟ್ ಗೆ ಆಲ್ ರೌಂಡರ್ ಶೇನ್ ವಾಟ್ಸನ್ ಗುಡ್ ಬೈ]

ವೃತ್ತಿ ಬದುಕಿನ ಮುಖ್ಯಾಂಶಗಳು
* 20ನೇ ವಯಸ್ಸಿನ ಕ್ಯಾನ್ ಬೆರಾ ಕಾಮೆಟ್ಸ್ ಪರ ಬ್ಯಾಟ್ ಬೀಸಿದ ಹಡೀನ್ ಅವರು ಶತಕ ಸಮೇತ 41 ರನ್ ಸರಾಸರಿಯಂತೆ ಸ್ಕೋರ್ ಮಾಡಿ ಗಮನ ಸೆಳೆದರು.
* ಆಡಂ ಗಿಲ್ ಕ್ರಿಸ್ಟ್ ನಂತರ 2008ರಿಂದ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್ ಮನ್ ಕಮ್ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

2013-14ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ
* 2013-14ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 61.63 ರನ್ ಸರಾಸರಿಯಂತೆ 493ರನ್ ಗಳಿಸಿದ್ದರು. 6 ಬಾರಿ 50 ಪ್ಲಸ್ ರನ್ ಗಳಿಸಿದ್ದಲ್ಲದೆ ಒಮ್ಮೆ ಶತಕದ ಗಡಿ ದಾಟಿದ್ದರು.
* ಗಿಲ್ ಕ್ರಿಸ್ಟ್ (416), ಇಯಾನ್ ಹೀಲಿ (395) ಹಾಗೂ ಮಾರ್ಷ್ (355) ನಂತರ ಹಡಿನ್ 270 ವಿಕೆಟ್ ಪಡೆದುಕೊಂಡಿದ್ದಾರೆ.
* ಗಿಲ್ ಕ್ರಿಸ್ಟ್ (47.61) ಬಿಟ್ಟರೆ ಹಡಿನ್ ಅವರು ಮಾತ್ರ 32.99 ರನ್ ಸರಾಸರಿ ಹೊಂದಿರುವ ಆಸ್ಟ್ರೇಲಿಯನ್ ವಿಕೆಟ್ ಕೀಪರ್ .

ಗಿಲ್ ಕ್ರಿಸ್ಟ್ ನಂತರದ ಶ್ರೇಷ್ಠ ಆಟಗಾರ
ರನ್ ಗಳಿಕೆ: ಗಿಲ್ ಕ್ರಿಸ್ಟ್ 47.61ರನ್ ಸರಾಸರಿಯಂತೆ 5570ರನ್, ಹೀಲಿ 27.40ರನ್ ಸರಾಸರಿಯಂತೆ 4,356ರನ್, ಮಾರ್ಷ್ 26.52ರನ್ ಸರಾಸರಿಯಂತೆ 3,633ರನ್ ಗಳಿಸಿದ್ದಾರೆ. ಹಡಿನ್ 32.99ರನ್ ಸರಾಸರಿಯಂತೆ 3,266ರನ್ ಗಳಿಸಿದ್ದಾರೆ.
* ಕಳೆದ ಎರಡು ವರ್ಷಗಳಿಂದ ಆಸ್ಟ್ರೇಲಿಯಾ ಟೆಸ್ಟ್ ತಂಡದ ಉಪ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ದೇಶಿ ಕ್ರಿಕೆಟ್ ನಲ್ಲಿ ಸಾಧನೆ
* ಗ್ರೆಗ್ ಮ್ಯಾಥ್ಯೂಸ್ ನಂತರ ನ್ಯೂ ಸೌತ್ ವೇಲ್ಸ್ ಪರ 195 ಪಂದ್ಯವಾಡಿದ ಆಖಲೆ ಹೊಂದಿದ್ದಾರೆ.
* ನ್ಯೂ ಸೌತ್ ವೇಲ್ಸ್ ಪರ 41.94ರನ್ ಸರಾಸರಿಯಂತೆ 5,829 ರನ್ ಗಳಿಸಿದ್ದಾರೆ.
* ಫಿಲ್ ಎಮೆರಿ 378 ವಿಕೆಟ್ ಬಿಟ್ಟರೆ ನ್ಯೂ ಸೌತ್ ವೇಲ್ಸ್ ಪರ ಹಡಿನ್ 316 ವಿಕೆಟ್ ಪಡೆದುಕೊಂಡಿದ್ದಾರೆ.
* ಒಟ್ಟಾರೆ ಆಸ್ಟ್ರೇಲಿಯಾದ ದೇಶಿ ಏಕದಿನ ಕ್ರಿಕೆಟ್ ನಲ್ಲಿ 94 ಪಂದ್ಯಗಳಿಂದ 34.60 ರನ್ ಸರಾಸರಿಯಂತೆ 6 ಶತಕ ಸೇರಿ 3,010ರನ್ ಗಳಿಸಿದ್ದಾರೆ. 164 ವಿಕೆಟ್ ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications